ಭಾರತದಲ್ಲಿ ಹೊಸದಾಗಿ 62,480 ಕೊರೊನಾ ಸೋಂಕಿತರು ಪತ್ತೆ

ನವದೆಹಲಿ, ಜೂನ್ 18: ಭಾರತದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 62,480 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಒಟ್ಟು 2,97,62,793 ಪ್ರಕರಣಗಳಿವೆ, ಒಂದೇ ದಿನದಲ್ಲಿ 1587 ಮಂದಿ ಮೃತಪಟ್ಟಿದ್ದಾರೆ, 88,977 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಇಲ್ಲಿಯವರೆಗೆ ಒಟ್ಟು 3,83,490 ಮಂದಿ ಮೃತಪಟ್ಟಿದ್ದಾರೆ, 2,85,80,647 ಡಿಸ್ಚಾರ್ಜ್ ಆಗಿದ್ದಾರೆ.

7,98,656 ಸಕ್ರಿಯ ಪ್ರಕರಣಗಳಿವೆ. ಕಳೆದ 73 ದಿನಗಳಲ್ಲಿ 8 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೆ 26,89,60,399 ಮಂದಿ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

67,208New Coronavirus Cases Reported In India In Last 24 Hours

ಕೊರೊನಾ ಸೋಂಕು ಜಗತ್ತಿನಾದ್ಯಂತ ಹಬ್ಬಿದಂತೆಯೇ ಇದುವರೆಗೆ 40 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿಪಡೆದುಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಗತ್ತಿನ ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.50ರಷ್ಟು ಸಾವುಗಳು ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ ಮತ್ತು ಮೆಕ್ಸಿಕೋ ದೇಶದಲ್ಲಿ ಸಂಭವಿಸಿದೆ.

ಅಮೆರಿಕ ಮತ್ತು ಬ್ರಿಟನ್ ದೇಶಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆದರೆ ಡೆಲ್ಟಾ ರೂಪಾಂತರವು ಪ್ರಪಂಚಾದ್ಯಂತ ಪ್ರಬಲವಾಗಿರುವುದರಿಂದ ಹಲವಾರು ರಾಷ್ಟ್ರಗಳು ಲಸಿಕೆ ಕೊರತೆಯನ್ನು ಅನುಭವಿಸುತ್ತಿವೆ.

ರಾಯ್ಟರ್ಸ್ ವಿಶ್ಲೇಷಣೆಯ ಪ್ರಕಾರ ಪ್ರತಿದಿನ ವಿಶ್ವಾದ್ಯಂತ ವರದಿಯಾಗುವ ಪ್ರತಿ ಮೂರು ಸಾವುಗಳಲ್ಲಿ ಒಂದು ಸಾವು ಭಾರತದಲ್ಲಿ ಸಂಭವಿಸುತ್ತಿದೆ. ಕೋವಿಡ್ ಸಂಬಂಧಿತ ಸಾವಿನ ಸಂಖ್ಯೆ 20 ಲಕ್ಷ ತಲುಪಲು ಒಂದು ವರ್ಷ ತೆಗೆದುಕೊಂಡಿತು. ಆದರೆ ಮುಂದಿನ 20 ಲಕ್ಷ ಸಾವುಗಳು 166 ದಿನಗಳಲ್ಲಿ ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+