ದೇಶದ ಅರ್ಧಕ್ಕಿಂತಲೂ ಹೆಚ್ಚಿನ ಜನಸಂಖ್ಯೆಗೆ ಕೊರೊನಾ ಸೋಂಕು: ತಜ್ಞರ ಹೇಳಿಕೆ

ಪುಣೆ, ಡಿಸೆಂಬರ್ 14: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳಲ್ಲಿ ಕೂಡ ಗಮನಾರ್ಹ ಇಳಿಕೆಯಾಗುತ್ತಿದೆ. ಆದರೆ ಸೆರೋ ಸರ್ವೆಗಳು ತೋರಿಸುತ್ತಿರುವ ಅಂಕಿ ಅಂಶಗಳಿಗಿಂತಲೂ ದೇಶದ ಬಹುದೊಡ್ಡ ಪ್ರಮಾಣದ ಜನಸಂಖ್ಯೆ ಈಗಾಗಲೇ ಸೋಂಕಿಗೆ ಒಳಗಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ಸೋಂಕಿತರ ಸಂಖ್ಯೆ ಪ್ರತಿ ದಿನ 50 ಸಾವಿರಕ್ಕೂ ಕಡಿಮೆ ವರದಿಯಾಗುತ್ತಿದೆ. ಹಬ್ಬಗಳು, ಚುನಾವಣೆಗಳು, ರೈತರ ಮತ್ತು ವಿವಿಧ ಸಂಘಟನೆಗಳ ಪ್ರತಿಭಟನೆಗಳು ಮತ್ತು ನಿರ್ಬಂಧಗಳ ಸಡಿಲಿಕೆಯ ನಡುವೆಯೂ ಪ್ರಕರಣಗಳು ಇಳಿಕೆಯಾಗುತ್ತಿವೆ.

ನಿಬಂಧನೆಗಳಲ್ಲಿ ಸಡಿಲಿಕೆಯಾದಂತೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಲಿದೆ ಎಂಬ ಭೀತಿ ಎದುರಾಗಿತ್ತು. ಕಳೆದ ಎರಡು ವಾರಗಳಲ್ಲಿ ದೈನಂದಿನ ಕೊರೊನಾ ಸೋಂಕಿತ ಸಂಖ್ಯೆ 40 ಸಾವಿರಕ್ಕಿಂತ ಕಡಿಮೆ ಇದೆ. ನಿಧಾನವಾಗಿ ಆದರೆ ಸ್ಥಿರವಾಗಿ ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಈಗಲೂ ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ವರದಿಯಾಗುತ್ತಿವೆ. ಇಲ್ಲಿ ದಿನವೂ 4 ರಿಂದ 5 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಮುಂದೆ ಓದಿ.

ಹಬ್ಬದ ಸಂದರ್ಭದಲ್ಲಿಯೂ ಇಳಿಕೆ

ಹಬ್ಬದ ಸಂದರ್ಭದಲ್ಲಿಯೂ ಇಳಿಕೆ

ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ಏರಿಕೆಯಾಗಲಿದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಆದರೆ ಇಳಕೆಯಾಗುತ್ತಿರುವುದು ಹೇಗೆ ಎಂದು ವಿವರಿಸಲು ತಾರ್ಕಿಕ ಕಾರಣಗಳು ಸಿಗುತ್ತಿಲ್ಲ.ಅಥವಾ ದೇಶದ ಇಡೀ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದರೂ ಇರಬಹುದು ಎಂದು ಪರಿಣತರು ಹೇಳುತ್ತಾರೆ.

ಶೇ 55ರಷ್ಟು ಜನರಿಗೆ ಸೋಂಕು

ಶೇ 55ರಷ್ಟು ಜನರಿಗೆ ಸೋಂಕು

'ನಾವು ಅಭಿವೃದ್ಧಿಪಡಿಸಿರುವ ಕಂಪ್ಯೂಟರ್ ಮಾದರಿ ನಮಗೆ ಈ ಅಂದಾಜನ್ನು ಹೇಳುತ್ತದೆ. ಶನಿವಾರದ ವೇಳೆಗೆ ದೇಶದ ಶೇ 55ರಷ್ಟು ಜನಸಂಖ್ಯೆ ಸೋಂಕಿಗೆ ಒಳಗಾಗಿರಬಹುದು ಎಂದು ಈ ಮಾದರಿ ತಿಳಿಸಿದೆ. ಈಗ ಯಾವುದೇ ಸೆರೋ ಸರ್ವೆಗಳು ಇಷ್ಟು ದೊಡ್ಡ ಸಂಖ್ಯೆಯ ಸೋಂಕಿತರನ್ನು ಪತ್ತೆಹಚ್ಚಿಲ್ಲ. ಅದಕ್ಕೆ ಕಾರಣ ಏನು ಎಂದು ನಮಗೂ ತಿಳಿದಿಲ್ಲ' ಎಂದು ಐಐಟಿ ಕಾನ್ಪುರದ ಮಣೀಂದ್ರ ಅಗರವಾಲ್ ತಿಳಿಸಿದ್ದಾರೆ.

ಫೆಬ್ರವರಿಯವರೆಗೂ ಅಧಿಕ ಸೋಂಕು

ಫೆಬ್ರವರಿಯವರೆಗೂ ಅಧಿಕ ಸೋಂಕು

ಅಗರವಾಲ್ ಅವರು ಭಾರತದಲ್ಲಿ ಕಾಯಿಲೆ ಹರಡುವ ಮಾರ್ಗವನ್ನು ಕಂಡುಕೊಳ್ಳಲು ಸೂಪರ್ ಮಾಡೆಲ್ ಅಭಿವೃದ್ಧಿಪಡಿಸಿರುವ ಸರ್ಕಾರಿ ನೇಮಿತ ಸಮಿತಿಯ ಭಾಗವಾಗಿದ್ದಾರೆ. ಅಕ್ಟೋಬರ್ ಮಧ್ಯಭಾಗದಲ್ಲಿ ಈ ಸಮಿತಿಯು ಭಾರತದಲ್ಲಿ ಸೋಂಕು ಈಗಾಗಲೇ ಉತ್ತುಂಗಕ್ಕೆ ತಲುಪಿದೆ. ಮುಂದಿನ ವರ್ಷದ ಫೆಬ್ರವರವರೆಗೂ ಇದೇ ಸ್ಥಿತಿ ಮುಂದುವರಿಯಬಹುದು ಎಂದು ತಿಳಿಸಿತ್ತು.

400-500 ಮಿಲಿಯನ್ ಸೋಂಕಿತರು ಇರಬಹುದು

400-500 ಮಿಲಿಯನ್ ಸೋಂಕಿತರು ಇರಬಹುದು

'ಖಚಿತವಾದ ಪ್ರಕರಣಗಳಿಗಿಂತಲೂ ವಾಸ್ತವವಾಗಿ ಹರಡಿರುವ ಕಾಯಿಲೆ 15-16 ಪಟ್ಟು ಹೆಚ್ಚು ಇದೆ ಎಂದು ಕಳೆದ ರಾಷ್ಟ್ರೀಯ ಸೆರೋ ಸಮೀಕ್ಷೆಯು ತಿಳಿಸಿತ್ತು. ಪ್ರಸ್ತುತ 10 ಮಿಲಿಯನ್ ಖಚಿತ ಪ್ರಕರಣಗಳಿದ್ದು, ವಾಸ್ತವವಾಗಿ 150-160 ಮಿಲಿಯನ್ ಜನರು ಸೋಂಕಿಗೆ ಒಳಗಾಗಿರಬಹುದು. ಆದರೆ ನಮಗೆ ಪತ್ತೆಹಚ್ಚಲು ಸಾಧ್ಯವಾಗದಂತೆಯೂ ವೇಗವಾಗಿ ಸೋಂಕು ಹರಡಿರಬಹುದು. 150-160 ಮಿಲಿಯನ್ ಜನರಿಗಿಂತ 400-500 ಮಿಲಿಯನ್ ಜನರು ಸೋಂಕಿಗೆ ಒಳಗಾಗಿರಬಹುದು. ಹೀಗಾಗಿ ಮತ್ತಷ್ಟು ವಿಸ್ತೃತ ಸೆರೋ ಸಮೀಕ್ಷೆ ನಡೆಸುವುದು ಅಗತ್ಯವಾಗಿದೆ' ಎಂದು ವೈರಾಣು ತಜ್ಞ ಶಾಹಿದ್ ಜಮೀಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+