5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗೆ 5 ಬಸ್ಕಿಯ ಶಿಕ್ಷೆ, ಬಿಹಾರದಲ್ಲೊಂದು ಅಮಾನವೀಯ ಘಟನೆ

ಪಟ್ನಾ, ನವೆಂಬರ್‌ 26: ಭಾರತದಲ್ಲಿ ಮಹಿಳೆಯರ ಮೇಲಿನ ಲೈಂಗಿನ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಇಂತಹ ಸಂದರ್ಭದ ನಡುವೆಯೇ ಬಿಹಾರದಲ್ಲೊಂದು ಅಮಾನವೀಯ ಘಟನೆ ನಡೆದಿದೆ.

ವ್ಯಕ್ತಿಯೊಬ್ಬ ಗ್ರಾಮಸ್ಥರ ಮುಂದೆ ಐದು ಬಸ್ಕಿ ಹೊಡೆಯುತ್ತಿರುವ ವಿಡಿಯೊ ವೈರಲ್‌ ಆಗಿದೆ. ದುರಂತವೆಂದರೆ, ಈ ವ್ಯಕ್ತಿಯು 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆತನಿಗೆ ಗ್ರಾಮ ಪಂಚಾಯತಿಯ ಹಿರಿಯರು 5 ಬಸ್ಕಿ ಹೊರೆಯುವ ಶಿಕ್ಷೆಯನ್ನು ನೀಡಿದ್ದಾರೆ. ಈ ವಿಡಿಯೊವನ್ನು ಬಿಹಾರದ ನವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಚಿತ್ರಸಲಾಗಿದೆ.

ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಮಗುವನ್ನು ತನ್ನ ಕೋಳಿ ಫಾರಂಗೆ ಕರೆದೊಯ್ದು ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

5 Sit-Ups Is Punishment For Raping Girl, 5, In Bihar Village

ಆ ವ್ಯಕ್ತಿಯನ್ನು ಹಿಡಿದು ಗ್ರಾಮಸಭೆ ಅಥವಾ ಪಂಚಾಯತ್ ಮುಂದೆ ಹಾಜರುಪಡಿಸಲಾಗಿದೆ. ಗ್ರಾಮದ ಹಿರಿಯರು ಅವನಿಗೆ ಶಿಕ್ಷೆ ಕೊಡುವ ತೀರ್ಪು ತೆಗೆದುಕೊಂಡಿದ್ದಾರೆ. ಗ್ರಾಮಸ್ಥರ ಮುಂದೆ 5 ಬಸ್ಕಿ ಹೊಡೆಯುವ ಶಿಕ್ಷೆಯನ್ನು ಆರೋಪಿಗೆ ನೀಡಿದ್ದಾರೆ.

'ಆ ವ್ಯಕ್ತಿ ಅತ್ಯಾಚಾರ ಮಾಡಿಲ್ಲ, ಆತ ಅತ್ಯಾಚಾರದ ಮಾಡಿದ ತಪ್ಪಿತಸ್ಥನಲ್ಲ. ಆದರೆ, ಬಾಲಕಿಯನ್ನು ಏಕಾಂತದ ಸ್ಥಳಕ್ಕೆ ಕರೆದೊಯ್ದಿದ್ದಕ್ಕಾಗಿ ಆತನಿಗೆ ಶಿಕ್ಷೆ ವಿಧಿಸಲಾಗಿದೆ' ಎಂದು ಗ್ರಾಮದ ಹಿರಿಯರು ತೀರ್ಪು ನೀಡಿದ್ದಾರೆ.

ಶಿಕ್ಷೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಅನೇಕರು ಇದನ್ನು ಪುರುಷಪ್ರಧಾನ ಸಮಾಜದ ಕ್ರೌರ್ಯ ಎಂದು ಕರೆದಿದ್ದಾರೆ. ಗ್ರಾಮೀಣ ಭಾರತದಲ್ಲಿ ಪಿತೃಪ್ರಭುತ್ವ ಇನ್ನೂ ಜೀವಂತವಾಗಿದೆ. ಇದಕ್ಕೆ ಈ ಅಮಾನವೀಯ ಘಟನೆಯೇ ಸಾಕ್ಷಿ ಎಂದು ಕೆಲವರು ಹರಿಹಾಯ್ದಿದ್ದಾರೆ.

ಟ್ವಿಟರ್‌ ಬಳಕೆದಾರರು ಈ ವಿಡಿಯೊವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೆ ಟ್ಯಾಗ್ ಮಾಡಿದ್ದಾರೆ.

5 Sit-Ups Is Punishment For Raping Girl, 5, In Bihar Village

ಆರೋಪಿ ಹಾಗೂ ಆತನ ಬಗ್ಗೆ ತೀರ್ಪು ತೆಗೆದುಕೊಂಡವರ ವಿರುದ್ಧ ರಾಜ್ಯ ಸರ್ಕಾರವು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗಳಾ ತಿಳಿಸಿದ್ದಾರೆ.

ಈ ಘಟನೆಯನ್ನು ಮುಚ್ಚಿಡಲು ಯತ್ನಿಸಿದವರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+