ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದುಗರಿಗೆ IMPORTANT: ಕೊರೊನಾವೈರಸ್ ಕುರಿತು 5 ಅನುಮಾನಗಳಿಗೆ ಉತ್ತರ

|
Google Oneindia Kannada News

ನವದೆಹಲಿ, ಜುಲೈ.19: ಕೊರೊನಾವೈರಸ್ ಮಹಾಸ್ಫೋಟಕ್ಕೆ ಭಾರತದಲ್ಲಿನ ಚಿತ್ರಣವೇ ಬದಲಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲೇ ಮೊಟ್ಟಮೊದಲ ಬಾರಿಗೆ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

Recommended Video

Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

ದೇಶದಲ್ಲಿ ಒಂದೇ ದಿನದಲ್ಲಿ 38,902 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ ಈಗಾಗಲೇ 10,77,618ಕ್ಕೆ ಏರಿಕೆಯಾಗಿದೆ. ಈ ಪೈಕಿ 6,77,423 ಸೋಂಕಿತರು ಗುಣಮುಖರಾಗಿದ್ದು, 3,73,379 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಮಹಾಮಾರಿಗೆ 543 ಮಂದಿ ಪ್ರಾಣ ಬಿಟ್ಟಿದ್ದು, ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 26,816ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ಭಾರತದಲ್ಲಿ ಸಮುದಾಯಕ್ಕೆ ಹರಡಿದ ಕೊರೊನಾವೈರಸ್ ನಿಂದ ಗಂಡಾಂತರ!ಭಾರತದಲ್ಲಿ ಸಮುದಾಯಕ್ಕೆ ಹರಡಿದ ಕೊರೊನಾವೈರಸ್ ನಿಂದ ಗಂಡಾಂತರ!

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,58,127 ಜನರನ್ನು ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದ್ದು, ಇದುವರೆಗೂ 1,37,91,869 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ಈ ಅಂಕಿ-ಸಂಖ್ಯೆಗಳು ಕೊರೊನಾವೈರಸ್ ಸೋಂಕಿನ ಬಗ್ಗೆ ಜನರಲ್ಲಿ ಭೀತಿಯನ್ನು ಹುಟ್ಟಿಸುತ್ತಿದೆ. ಇದರ ನಡುವೆ ಮಹಾಮಾರಿ ಬಗ್ಗೆ ಜನರನ್ನು ಕಾಡುತ್ತಿರುವ ಪ್ರಮುಖ ಐದು ಪ್ರಶ್ನೆಗಳಿಗೆ ಸಾಂಕ್ರಾಮಿಕ ರೋಗತಜ್ಞರು, ವಿಜ್ಞಾನಿಗಳು ಮತ್ತು ವೈದ್ಯರು ನೀಡಿರುವ ಉತ್ತರದ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಸೋಂಕಿತನ ಕೆಮ್ಮು-ಸೀನುವಿಕೆಯಿಂದ ಮಾತ್ರ ಸೋಂಕು ಹರಡುತ್ತಾ?

ಸೋಂಕಿತನ ಕೆಮ್ಮು-ಸೀನುವಿಕೆಯಿಂದ ಮಾತ್ರ ಸೋಂಕು ಹರಡುತ್ತಾ?

ಕೊರೊನಾವೈರಸ್ ಸೋಂಕಿತನ 6 ಅಡಿ ಸುತ್ತಮುತ್ತಲಿನಲ್ಲಿ ವ್ಯಕ್ತಿಯ ಕೆಮ್ಮು ಮತ್ತು ಸೀನುವಿಕೆಯಿಂದ ಮಾತ್ರ ಸೋಂಕು ಹರಡುತ್ತದೆಯೇ ಎಂದರೆ ಖಂಡಿತವಾಗಿಯೂ ಇಲ್ಲ. ಮಹಾಮಾರಿ ಅಂಟಿಕೊಳ್ಳುವುದಕ್ಕೆ ಸಾಕಷ್ಟು ಮಾರ್ಗಗಳಿವೆ. ಈ ಪೈಕಿ ಇದೊಂದು ಮಾರ್ಗವಷ್ಟೇ. ಸೋಂಕಿತ ವ್ಯಕ್ತಿಯ ಜೊತೆಗಿನ ಮಾತುಕತೆ ಮತ್ತು ಉಸಿರಾಟದಿಂದಲೂ ಸೋಂಕು ಹರಡುತ್ತದೆ. ಸೋಂಕಿತನ ಸ್ಪರ್ಶ ಹಾಗೂ ಆತ ಮುಟ್ಟಿದ ವಸ್ತುಗಳ ಸ್ಪರ್ಶಿಸಿದ ನಂತರ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುತ್ತದೆ.

ಉಸಿರಾಟ ಸಮಸ್ಯೆಯಿದ್ದರೆ ಕೊರೊನಾವೈರಸ್ ಅಂಟಿದಂತೆಯೇ?

ಉಸಿರಾಟ ಸಮಸ್ಯೆಯಿದ್ದರೆ ಕೊರೊನಾವೈರಸ್ ಅಂಟಿದಂತೆಯೇ?

ಕೊರೊನಾವೈರಸ್ ಸೋಂಕಿತರಲ್ಲಿ ಉಸಿರಾಟ ಸಮಸ್ಯೆಯಂತಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಉಸಿರಾಟ ಸಮಸ್ಯೆ ಉಳ್ಳವರಿಗೆಲ್ಲ ಕೊರೊನಾವೈರಸ್ ಸೋಂಕು ಅಂಟಿಕೊಂಡಿದೆ ಎಂಬ ಅರ್ಥವಲ್ಲ. ಬದಲಿಗೆ ಅಸ್ತಮಾದಂತಾ ಆರೋಗ್ಯ ಸಮಸ್ಯೆ ಉಳ್ಳವರಿಗೆ ಉಸಿರಾಟ ಸಮಸ್ಯೆಯು ಸಾಮಾನ್ಯವಾಗಿರುತ್ತದೆ. ಈ ರೀತಿ ಲಕ್ಷಣಗಳು ಕಂಡು ಬಂದಾಕ್ಷಣಕ್ಕೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಸ್ತಮಾ ರೋಗಿಗಳ ತಪಾಸಣೆ ಬಳಿಕ ಕೊವಿಡ್-19 ಸೋಂಕು ತಪಾಸಣೆಯಿದ್ದಲ್ಲಿ ವೈದ್ಯರೇ ಸಲಹೆ ನೀಡುತ್ತಾರೆ. ಅನಗತ್ಯವಾಗಿ ಗಾಬರಿಪಡುವ ಅಗತ್ಯವಿರುವುದಿಲ್ಲ.

ಕೊರೊನಾವೈರಸ್ ಯಾವ ವಯಸ್ಸಿನವರಿಗೆ ಹೆಚ್ಚು ಅಪಾಯಕಾರಿ?

ಕೊರೊನಾವೈರಸ್ ಯಾವ ವಯಸ್ಸಿನವರಿಗೆ ಹೆಚ್ಚು ಅಪಾಯಕಾರಿ?

ಕೊರೊನಾವೈರಸ್ ಸೋಂಕು ಎಲ್ಲ ವಯಸ್ಸಿನವರಿಗೂ ಅಪಾಯಕಾರಿಯೇ. ಆದರೆ ಇತ್ತೀಚಿನ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ವೃದ್ಧರು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕೊವಿಡ್-19 ಹೆಚ್ಚು ಅಪಾಯವನ್ನು ತಂದೊಡ್ಡಿದೆ. ಹಿರಿಯ ವಯಸ್ಸಿನವರಿಗೆ ಮತ್ತು ಕೊವಿಡ್-19 ಸೋಂಕು ಕಾಣಿಸಿಕೊಳ್ಳುವುದಕ್ಕೂ ಮೊದಲು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಮಹಾಮಾರಿಯಿಂದ ಹೆಚ್ಚು ಅಪಾಯವಾಗುತ್ತದೆ.

ಉದಾಹರಣೆ: ಶ್ವಾಸಕೋಶ ಸಂಬಂಧಿ ಕಾಯಿಲೆ, ಮದುಮೇಹ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಹಾಗೂ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಯಾವುದೇ ತರನಾದ ಸೋಂಕಿತ ಲಕ್ಷಣಗಳನ್ನು ಹೊಂದಿರುವ ರೋಗಿಗಳಲ್ಲಿ ಕೊವಿಡ್-19 ಕಾಣಿಸಿಕೊಂಡಲ್ಲಿ ಸಾವಿನ ಅಪಾಯ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಆಸ್ತಮಾ, ಅಧಿಕ ರಕ್ತದೊತ್ತಡ, ಬುದ್ಧಿಮಾಂದ್ಯತೆಯಂತಾ ನರದೌರ್ಬಲ್ಯ ಕಾಯಿಲೆ, ಪಾರ್ಶ್ವವಾಯುವಿನಂತ ಸೆರೆಬ್ರೊವಾಸ್ಕುಲರ್ ಕಾಯಿಲೆ ಅಥವಾ ಗರ್ಭಿಣಿಯರಿಗೆ ಹೆಚ್ಚಿನ ಅಪಾಯವಿರುತ್ತದೆ.

ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಎಷ್ಟು ದಿನ ಬೇಕು?

ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಎಷ್ಟು ದಿನ ಬೇಕು?

ಕೊರೊನಾವೈರಸ್ ಸೋಂಕು ಎಷ್ಟು ದಿನಗಳಲ್ಲಿ ನಿವಾರಣೆ ಆಗುತ್ತದೆ ಎನ್ನುವ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಸೋಂಕಿನ ಪ್ರಮಾಣವನ್ನು ಆಧರಿಸಿ ಚಿಕಿತ್ಸೆಯ ಅವಧಿಯನ್ನು ನಿರ್ಧರಿಸಲಾಗುತ್ತದೆ. ಸೌಮ್ಯ ಪ್ರಮಾಣದ ಸೋಂಕಿತರಿಗೆ ಕನಿಷ್ಠ 7-10 ದಿನಗಳ ಚಿಕಿತ್ಸೆಯಲ್ಲೇ ಕೊರೊನಾವೈರಸ್ ಸೋಂಕಿನಿಂದ ಗುಣಪಡಿಸುವ ಅವಕಾಶವಿರುತ್ತದೆ. ಗಂಭೀರ ಪ್ರಮಾಣದ ಸೋಂಕಿತರ ಚಿಕಿತ್ಸೆ ಅವಧಿಯು ವಾರಗಳಿಂದ ತಿಂಗಳವರೆಗೂ ಆಗಬಹುದು. ನಿಮೋನಿಯಾದಂತಾ ರೋಗದ ಲಕ್ಷಣಗಳನ್ನು ಹೊಂದಿರುವ ಸೋಂಕಿತರಲ್ಲಿ ಪದೇ ಪದೆ ಸೋಂಕಿತ ಲಕ್ಷಣಗಳು ಸೌಮ್ಯ ಪ್ರಮಾಣದಿಂದ ತೀವ್ರಗೊಳ್ಳುವ ಸಾಧ್ಯತೆಗಳು ಇರುತ್ತವೆ.

ದೀರ್ಘಾವಧಿವರೆಗೂ ಕೊರೊನಾವರೈಸ್ ಸೋಂಕು ಇರುತ್ತಾ?

ದೀರ್ಘಾವಧಿವರೆಗೂ ಕೊರೊನಾವರೈಸ್ ಸೋಂಕು ಇರುತ್ತಾ?

2019ರಲ್ಲಿ ಆರಂಭಗೊಂಡ ಕೊರೊನಾವೈರಸ್ ಸೋಂಕು ಅದೃಷ್ಟವಶಾತ್ ದೀರ್ಘಾವಧಿಯ ಕಾಯಿಲೆಯಾಗಿಲ್ಲ. ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಶೇ.80ರಷ್ಟು ಸೋಂಕಿತರು ಸೌಮ್ಯ ಪ್ರಮಾಣದ ಲಕ್ಷಣಗಳನ್ನೇ ಹೊಂದಿದ್ದಾರೆ. ಇಂಥ ಸೋಂಕಿತರಿಗೆ ದೀರ್ಘಾವಧಿಯ ಚಿಕಿತ್ಸೆ ನೀಡುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ, ಆಸ್ಪತ್ರೆಗಳಲ್ಲಿ ದಾಖಲಿಸುವ ಅನಿವಾರ್ಯತೆಯೂ ಇಲ್ಲ. ಮಧ್ಯಮ ಪ್ರಮಾಣದ ಸೋಂಕಿತ ಲಕ್ಷಣಗಳನ್ನು ಹೊಂದಿರುವವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ ಆದರೆ ಕಡ್ಡಾಯವಾಗಿ ವೆಂಟಿಲೇಟರ್ ಅಳವಡಿಸುವ ಅಗತ್ಯ ಇರುವುದಿಲ್ಲ. ಇನ್ನು, ಗಂಭೀರ ಪ್ರಮಾಣದ ಸೋಂಕಿತ ಲಕ್ಷಣಗಳನ್ನು ಹೊಂದಿರುವ ಸೋಂಕಿತರಲ್ಲಿ ಮೊದಲೇ ಶ್ವಾಸಕೋಶದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆಯಂತಾ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ವೆಂಟಿಲೇಟರ್ ಸಹಿತ ಚಿಕಿತ್ಸೆಯ ಅನಿವಾರ್ಯತೆ ಇರುತ್ತದೆ.

English summary
How Spread Coronavirus And Who Have High Risk From Covid-19. 5 Important Questions And Answers About Deadly Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X