ಅಂಡಮಾನ್ ದ್ವೀಪದಲ್ಲಿ ಮತ್ತೆ ಭೂಕಂಪ: 5.2 ತೀವ್ರತೆ ದಾಖಲು
ಅಂಡಮಾನ್, ಜುಲೈ 05: ಅಂಡಮಾನ್ ದ್ವೀಪದಲ್ಲಿ ಇಂದು ಬೆಳಗ್ಗಿನ ಜಾವ ಮತ್ತೆ ಭೂಕಂಪ ಸಂಭವಿಸಿದೆ. ನಿನ್ನೆ(ಜು.04) ಮಧ್ಯಾಹ್ನ ಸಹ ಈ ಭಾಗದಲ್ಲಿ ಭೂಕಂಪ ಸಂಭವಿಸಿತ್ತು.
ರಿಕ್ಟರ್ ಮಾಪನದಲ್ಲಿ ಭೂಕಂಪದ ತೀವ್ರತೆ 5.2 ಎಂದು ದಾಖಲಾಗಿದೆ. 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.
ಇದುವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಅಂಡಮಾನ್ ನಲ್ಲಿ ಇಂದು ಸಂಭವಿಸಿದ ಭೂಕಂಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಇದುವರೆಗೂ ಸುನಾಮಿ ಮುನ್ಸೂಚನೆ ಕುರಿತು ವರದಿಯಾಗಿಲ್ಲ.

ಜುಲೈ 01 ರಂಡು ಹರ್ಯಾಣದಲ್ಲೂ ಭೂಮಿ ಕಂಪಿಸಿ, ರಾಜಧಾನಿ ದೆಹಲಿಯ ಅಕ್ಕಪಕ್ಕದಲ್ಲೂ ಭೂಮಿ ಕಂಪಿಸಿಸದ ಅನುಭವವಾಗಿತ್ತು. ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲಾಗಿತ್ತು.












Click it and Unblock the Notifications