ಅಮೆರಿಕದಿಂದ ಅಕ್ರಮ ಭಾರತೀಯರ ಗಡಿಪಾರು: 4ನೇ ಬ್ಯಾಚ್‌ನಲ್ಲಿ ಬಂದವರೆಷ್ಟು?

ನವದೆಹಲಿ, ಫೆಬ್ರವರಿ 24: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಆಡಳಿತ ಪ್ರಾರಂಭಿಸಿದ ಬಳಿಕ ಗಡಿಪಾರು ಕಾರ್ಯಾಚರಣೆ ಆರಂಭವಾಗಿದೆ. 4ನೇ ಹಂತದಲ್ಲಿ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 12 ಭಾರತೀಯರನ್ನು ವಿಶೇಷ ಸೇನಾ ವಿಮಾನದ ಮೂಲಕ ಭಾರತಕ್ಕೆ ಕಳಿಸಲಾಗಿದೆ, ಈ ವಿಮಾನ ದೆಹಲಿಗೆ ಬಂದಿದೆ. ಇದುವರೆಗೂ 300ಕ್ಕೂ ಅಧಿಕ ವಲಸಿಗರನ್ನು ಅಮೆರಿಕದಿಂದ ವಿವಿಧ ದೇಶಗಳಿಗೆ ವಾಪಸ್ ಕಳಿಸಲಾಗಿದೆ.

12 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಸೇನಾ ವಿಮಾನ ಪನಾಮ ಮೂಲಕ ದೆಹಲಿಗೆ ಸೋಮವಾರ ಬೆಳಗ್ಗೆ ಆಗಮಿಸಿದೆ. 12 ಜನರಲ್ಲಿ ನಾಲ್ವರು ಪಂಜಾಬ್‌ನ ಅಮೃತಸರದ ನಿವಾಸಿಗಳು, ಅವರನ್ನು ದೆಹಲಿಯಿಂದ ಅಮೃತಸರಕ್ಕೆ ಕಳಿಸಲಾಗಿದೆ.

4th Batch Of 12 Illegal Indians Deportees From US Landed In Delhi

ಇದುವರೆಗೂ ಅಮೆರಿಕದಿಂದ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ವಿಮಾನ ಶ್ರೀ ಗುರು ರಾಮದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಮೃತಸರಕ್ಕೆ ಆಗಮಿಸುತ್ತಿತ್ತು. ಇದಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಕ್ಷೇಪ ಎತ್ತಿದ್ದರು. ಆದ್ದರಿಂದ 4ನೇ ಬ್ಯಾಚ್‌ನ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಿದೆ.

4 ತಂಡಗಳಲ್ಲಿ ಆಗಮನ; ಡೊನಾಲ್ಡ್ ಟ್ರಂಪ್ ಅಧಿಕಾರವಹಿಸಿಕೊಂಡ ಬಳಿಕ ಇದುವರೆಗೂ ಸುಮಾರು 300 ಅಕ್ರಮ ವಲಸಿಗರನ್ನು ತವರು ದೇಶಗಳಿಗೆ ಅಮೆರಿಕದ ಸೇನಾ ವಿಮಾನದ ಮೂಲಕ ಕಳಿಸಿದೆ. ಭಾರತಕ್ಕೆ ಮೊದಲ ಬ್ಯಾಚ್‌ನಲ್ಲಿ ಫೆಬ್ರವರಿ 5ರಂದು 104 ಜನರನ್ನು ಕಳಿಸಲಾಗಿತ್ತು. ಈ ವಿಮಾನ ಅಮೃತಸರದಲ್ಲಿ ಲ್ಯಾಂಡ್ ಆಗಿತ್ತು.

ಅಮೆರಿಕ ಅಕ್ರಮ ಭಾರತೀಯ ವಲಸಿಗರನ್ನು ವಾಪಸ್ ಕಳಿಸುವ ಕಾರ್ಯಾಚರಣೆ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು. ವಿಮಾನದಲ್ಲಿ ಕರೆತರುವ ಭಾರತೀಯರ ಕಣ್ಣುಗಳಿಗೆ ಬಟ್ಟೆ ಕಟ್ಟಲಾಗುತ್ತಿದೆ, ಕೈ-ಕಾಲುಗಳಿಗೆ ಕೋಳ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಇಲಾಖೆ ವಿರುದ್ಧ ಟೀಕೆಗಳನ್ನು ಮಾಡಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಈ ಕುರಿತು ಪ್ರತಿಕ್ರಿಯೆ ನೀಡಿ, ಅಕ್ರಮ ಭಾರತೀಯ ವಲಸಿಗರ ಜೊತೆ ಅಮಾನವೀಯವಾಗಿ ನಡೆದುಕೊಳ್ಳಬಾರದು ಎಂದು ಅಮೆರಿಕ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದರು. ಅಲ್ಲದೇ ಅಕ್ರಮ ಭಾರತೀಯ ವಲಸಿಗರ ಗಡಿಪಾರು ಹೊಸ ಬೆಳವಣಿಗೆಯಲ್ಲ, ಹಲವಾರು ವರ್ಷಗಳಿಂದ ಈ ಮಾದರಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದರು.

ಅಮೆರಿಕ ಅಧ್ಯಕೀಯ ಚುನಾವಣಾ ಭಾಷಣದಲ್ಲಿ ಡೊನಾಲ್ಡ್ ಟ್ರಂಪ್ ವಲಸಿಗರ ಗಡಿಪಾರಿನ ಕುರಿತು ಮಾತನಾಡಿದ್ದರು. ಅವರು ಚುನಾವಣೆ ಗೆದ್ದು ಅಧಿಕಾರವಹಿಸಿಕೊಂಡ ಬಳಿಕ ಸುಮಾರು 300 ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ, ಅವರನ್ನು ಬಂಧಿಸಿ ಹೋಟೆಲ್‌ನಲ್ಲಿ ಇರಿಸಲಾಗಿದೆ. ಅವರನ್ನು ತಂಡ ತಂಡವಾಗಿ ತವರು ದೇಶಗಳಿಗೆ ವಾಪಸ್ ಕಳಿಸಲಾಗುತ್ತಿದೆ.

ಟ್ರಂಪ್ ಸರ್ಕಾರವು ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ಪನಾಮ ಹಾಗೂ ಕೋಸ್ಟರಿಕಾಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಈ ದೇಶಗಳ ಜೊತೆ ಅಮೆರಿಕ ಒಪ್ಪಂದವನ್ನು ಮಾಡಿಕೊಳ್ಳಲಿದೆ. ಕಳೆದ ವಾರ ಅಮೆರಿಕ ಭಾರತೀಯರು ಸೇರಿ 299 ಅಕ್ರಮ ವಲಸಿಗರನ್ನು ಗಡಿಪಾರು ಮಾಡಿದೆ ಎಂದು ಹೇಳಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+