ಇನ್ನೆರಡು ತಿಂಗಳಲ್ಲಿ ನಡೆಯಲಿವೆ 48 ಲಕ್ಷ ಮದುವೆ.. ಈ ರಾಜ್ಯದಲ್ಲೇ ಹೆಚ್ಚು!

ಭಾರತದಲ್ಲಿ ಇನ್ನೇನು ಮದುವೆ ಸೀಸನ್‌ ಮತ್ತೆ ಶುರುವಾಗಿದ್ದು, ಸಾಲು ಸಾಲು ಮದುವೆಗಳಿಗೆ ದಿನಾಂಕ ನಿಗದಿಯಾಗಿವೆ. ಈ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ದೇಶಾದ್ಯಂತ ಬರೋಬ್ಬರಿ 48 ಲಕ್ಷ ಮದುವೆಗಳು ನಡೆಯಲಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಅಂದಾಜಿಸಿದೆ.

ಒಂದೆಡೆ ಭಾರಿ ಸಂಖ್ಯೆಯ ಮದುವೆಗಳು ಫಿಕ್ಸ್‌ ಆಗಿದ್ದರೆ ಮತ್ತೊಂದೆಡೆ, ವ್ಯಾಪಾರ ವಹಿವಾಟು ಕೂಡ ಗರಿಗೆದರಿದೆ. ಸಿಎಐಟಿ ಪ್ರಕಾರ ಈ 48 ಲಕ್ಷ ಮದುವೆಗಳು ಬರೋಬ್ಬರಿ 6 ಲಕ್ಷ ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸುವ ನಿರೀಕ್ಷೆಯೂ ಇದೆ.

48 Lakh Marriages Will Take Place In November-December In India

ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲೇ ಸರಿಸುಮಾರು 4.5 ಲಕ್ಷ ಮದುವೆಗಳು ನೆರವೇರಲಿವೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ಅಲ್ಲಿನ ಆರ್ಥಿಕತೆಗೆ ಸುಮಾರು 1.5 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಈಗಾಗಲೇ ಮದುವೆಗಳು ನಡೆಯುತ್ತಿವೆ. ಇನ್ನು ನವೆಂಬರ್ 12ರ ಬಳಿಕ ಭಾರಿ ಪ್ರಮಾಣದ ಮದುವೆಗಳಿಗೆ ದಿನಾಂಕ ನಿಗದಿಯಾಗಿವೆ ಎಂದು ಹೇಳಲಾಗುತ್ತಿದೆ. ಸೀಸನ್‌ ಬಂದ ಹಿನ್ನೆಲೆ ಭಾರತದಾದ್ಯಂತ ಚಿಲ್ಲರೆ (ರಿಟೇಲ್‌) ವ್ಯಾಪಾರಿಗಳು ಭರ್ಜರಿ ವ್ಯವಹಾರಕ್ಕೆ ಸಜ್ಜಾಗಿದ್ದಾರೆ.

48 Lakh Marriages Will Take Place In November-December In India

ಸರಕು, ಸೇವೆಗಳೆರಡನ್ನೂ ಒಳಗೊಂಡಿರುವ ರಿಟೇಲ್‌ ವಲಯವು ಈ ಮದುವೆಗಳ ಅವಧಿಯಲ್ಲಿ ಒಟ್ಟು 5.9 ಲಕ್ಷ ಕೋಟಿ ರೂಪಾಯಿಗಳಷ್ಟು ವಹಿವಾಟು ಸಾಧಿಸುವ ನಿರೀಕ್ಷೆಯಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಇತ್ತೀಚೆಗೆ ದಸರಾ, ದೀಪಾವಳಿ ಹಿಂದೆಯೇ ಮದುವೆಗಳ ಸೀಸನ್‌ ಶುರುವಾಗಿರುವುದು ವ್ಯಾಪಾರಿಗಳಿಗೆ ನಿರಂತರ ವಹಿವಾಟಿಗೆ ವರದಾನ ಎನ್ನಲಾಗಿದೆ.

ಚಿನ್ನದ ವ್ಯಾಪಾರಿಗಳ ಪ್ರಕಾರ ಈ ನವೆಂಬರ್‌ನಿಂದ 2025 ಫೆಬ್ರವರಿವರೆಗೆ ಬಿಡುವಿಲ್ಲದ ಮದುವೆಗಳು ನಿಗದಿಯಾಗಿವೆ. ಈ ಹಿನ್ನೆಲೆ ಚಿನ್ನದ ವ್ಯಾಪಾರ ಕೂಡ ಭಾರಿ ಲಾಭದ ನಿರೀಕ್ಷೆಯಲ್ಲಿದೆ. ಗ್ರಾಹಕರಿಗಾಗಿ ಚಿನ್ನದ ವ್ಯಾಪಾರಿಗಳು ಕೂಡ ಬಾಗಿಲು ತೆರೆದು ಕಾದಿದ್ದಾರಂತೆ.

48 Lakh Marriages Will Take Place In November-December In India

ಯಾವ ದಿನಾಂಕಗಳಲ್ಲಿ ಹೆಚ್ಚು ಮದುವೆ?

ಈ ನವೆಂಬರ್ ತಿಂಗಳ 12, 13, 17, 18, 22, 23, 25, 26, 28, ಮತ್ತು 29ರವರೆಗೆ ಹೆಚ್ಚು ಮದುವೆಗಳು ನಡೆಯಲಿವೆ. ಇನ್ನು ಮುಂದಿನ ತಿಂಗಳು ಡಿಸೆಂಬರ್ 4, 5, 9, 10, 11, 14, 15 ಮತ್ತು 16ರಂದು ವಿವಾಹಗಳಿಗೆ ಮಂಗಳಕರ ದಿನಾಂಕ ಎಂದು ವರದಿಯಾಗಿದೆ. ಬಳಿಕ ಒಂದು ತಿಂಗಳವರೆಗೆ ಮದುವೆಗಳು ನಡೆಯುವುದಿಲ್ಲ. ಸಂಕ್ರಾಂತಿ ಬಳಿಕ ಜನವರಿಯಲ್ಲಿ ಮತ್ತೆ ಮದುವೆಗಳು ಸಾಲು ಸಾಲಾಗಿ ನಡೆಯಲಿದೆ. ಕೊನೆಗೆ ಮಾರ್ಚ್‌ವರೆಗೆ ಮದುವೆಗಳ ಸೀಸನ್‌ ಎಂದು ಹೇಳಲಾಗಿದೆ.

ಮದುವೆಗಳಿಗೆ ಆಗಲಿರುವ ಅಂದಾಜು ಖರ್ಚೆಷ್ಟು?

ದೇಶದಲ್ಲಿ ಈ ಸೀಸನ್‌ನಲ್ಲಿ ನಡೆಯಲಿರುವ 48 ಲಕ್ಷ ಮದುವೆಗಳ ಪೈಕಿ 50,000 ಮದುವೆಗಳು ತಲಾ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಹಣ ವ್ಯಯ ಮಾಡಲಿದೆಯಂತೆ. 7 ಲಕ್ಷ ಮದುವೆಗಳಿಗೆ ತಲಾ 25 ಲಕ್ಷ ರೂಪಾಯಿ ಖರ್ಚು ಮಾಡಿದರೆ, 40 ಲಕ್ಷ ಮದುವೆಗಳು ತಲಾ 3 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿ ವ್ಯಯಿಸಲಿದೆ ಎಂದು ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+