ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದವಿ ಶಿಕ್ಷಣ: 3 ವರ್ಷವಲ್ಲ, 4 ವರ್ಷ ಕಡ್ಡಾಯ- ನಿಯಮ ಜಾರಿ ಯಾವಾಗ?

|
Google Oneindia Kannada News

ನವದೆಹಲಿ, ನವೆಂಬರ್ 21: ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪದವಿ ಶಿಕ್ಷಣ ಪಡೆಯಲು ನಾಲ್ಕು ವರ್ಷದ ಅವಧಿಯನ್ನು ಜಾರಿಗೆ ಬರಬಹುದು. ಈ ನಿಮಮ ಜಾರಿಗೆ ಬಂದರೆ ಡಿಗ್ರಿ ಪಡೆದುಕೊಳ್ಳಲು ಪದವಿ ವಿದ್ಯಾರ್ಥಿಗಳು ಕನಿಷ್ಠ 4 ವ‍ರ್ಷಗಳ ಕಾಲ ಶಿಕ್ಷಣ ಪಡೆದುಕೊಳ್ಳಬೇಕಾಗುತ್ತದೆ.

ಹೌದು, ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) 4 ವರ್ಷದ ಪದವಿಪೂರ್ವ ಕಾರ್ಯಕ್ರಮದ (ಎಫ್‌ವೈಯುಜಿಪಿ) ಚೌಕಟ್ಟನ್ನು ಅಂತಿಮಗೊಳಿಸಿದೆ. ಈ ನಿಯಮಾವಳಿಗಳನ್ನು ಮುಂದಿನ ವಾರದಿಂದ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗುವುದು ಎಂದು ಯುಜಿಸಿ ಹೇಳಿದೆ.

ಕೆ.ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7 ನೇ ವೇತನ ಆಯೋಗ ರಚನೆಗೆ ಅನುಮೋದನೆ ಕೆ.ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7 ನೇ ವೇತನ ಆಯೋಗ ರಚನೆಗೆ ಅನುಮೋದನೆ

ಇದು ದೇಶದ 45 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನೂ ಒಳಗೊಂಡಿದೆ. 2023-24ರ ಶೈಕ್ಷಣಿಕ ಅವಧಿಯಿಂದ ಎಲ್ಲಾ ವಿಶ್ವವಿದ್ಯಾಲಯಗಳ ಹೊಸ ವಿದ್ಯಾರ್ಥಿಗಳು 4 ವರ್ಷಗಳ ಪದವಿ ಕೋರ್ಸ್‌ಗಳಿಗೆ ಬಿಎ, ಬಿ. ಕಾಂ ಮತ್ತು ಬಿಎಸ್‌ಸಿ (BA, B.Com, B.Sc.) ಪದವಿಗಳಿಗೆ ಶಿಕ್ಷಣ ಪಡೆದುಕೊಳ್ಳಬೇಕಾಗುತ್ತದೆ.

3 ವರ್ಷಗಳ ಆಯ್ಕೆಯೂ ಇರುತ್ತದೆ

3 ವರ್ಷಗಳ ಆಯ್ಕೆಯೂ ಇರುತ್ತದೆ

ಮುಂದಿನ ಅಧಿವೇಶನದಿಂದಲೇ ಈ ನಿರ್ಧಾರ ಜಾರಿಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಪದವಿಯನ್ನು 3 ವರ್ಷಗಳಲ್ಲಿ ಪೂರ್ಣಗೊಳಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ. ಮುಂದಿನ ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ ಅನ್ನು ಅಪ್‌ಗ್ರೇಡ್ ಮಾಡಲು ಸಾಧ್ಯವಾಗುತ್ತದೆ. ಈಗಾಗಲೇ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅಥವಾ ಪ್ರಸ್ತುತ ಮೊದಲ ಅಥವಾ ಎರಡನೇ ವರ್ಷದ ವಿದ್ಯಾರ್ಥಿಗಳು FYUGPನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.

ವಿವಿಗಳಿಗೆ ಮುಕ್ತ ಅವಕಾಶ

ವಿವಿಗಳಿಗೆ ಮುಕ್ತ ಅವಕಾಶ

4 ವರ್ಷಗಳ ಕೋರ್ಸ್‌ಗಳ ಸಂದರ್ಭದಲ್ಲಿ ಯುಜಿಸಿ ವಿವಿಧ ವಿಶ್ವವಿದ್ಯಾಲಯಗಳಿಗೆ ತಮ್ಮದೇ ಆದ ಕೆಲವು ನಿಯಮಗಳನ್ನು ಮಾಡಲು ಸ್ವಾತಂತ್ರ್ಯವನ್ನು ನೀಡುತ್ತದೆ. ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಮತ್ತು ಎಕ್ಸಿಕ್ಯೂಟಿವ್ ಕೌನ್ಸಿಲ್‌ನಲ್ಲಿ ಈ ನಿಟ್ಟಿನಲ್ಲಿ ಅಗತ್ಯ ನಿಯಮಗಳನ್ನು ನಿರ್ಧರಿಸಬಹುದು. ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್‌ಗಳ ಭಾಗವಾಗಿರಬಹುದು ಎಂದು ಯುಜಿಸಿ ವಿಶ್ವವಿದ್ಯಾಲಯಕ್ಕೆ ವಿನಾಯಿತಿ ನೀಡಿದೆ.

55ರಷ್ಟು ಅಂಕಗಳು ಕಡ್ಡಾಯ

55ರಷ್ಟು ಅಂಕಗಳು ಕಡ್ಡಾಯ

ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು, ಪಿಜಿ ಮತ್ತು ಎಂಫಿಲ್‌ನಲ್ಲಿ ಪ್ರವೇಶಕ್ಕಾಗಿ 55% ಅಂಕಗಳನ್ನು ಗಳಿಸುವುದು ಅವಶ್ಯಕ. ಇಷ್ಟೇ ಅಲ್ಲ, ಹೊಸ ನಿಯಮಗಳ ಪ್ರಕಾರ, ಈಗ ಅವರು ತಮ್ಮ ಎಂಫಿಲ್ ಕಾರ್ಯಕ್ರಮವನ್ನು ಬಹಳ ದಿನಗಳವರೆಗೆ ಮುಂದುವರಿಸಲು ಸಾಧ್ಯವಾಗುವುದಿಲ್ಲ.

4 ವರ್ಷಗಳ ಪದವಿಪೂರ್ವ ಕಾರ್ಯಕ್ರಮ

4 ವರ್ಷಗಳ ಪದವಿಪೂರ್ವ ಕಾರ್ಯಕ್ರಮ

ಎಲ್ಲಾ 45 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲದೆ, ಮುಂದಿನ ಶೈಕ್ಷಣಿಕ ಅಧಿವೇಶನದಿಂದ ಹೆಚ್ಚಿನ ರಾಜ್ಯ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಎಫ್‌ವೈಯುಜಿಪಿಯನ್ನು ಅಳವಡಿಸಲಾಗುವುದು. ಇದಲ್ಲದೇ ಹಲವು ಡೀಮ್ಡ್ ವಿಶ್ವವಿದ್ಯಾನಿಲಯಗಳು ಕಾರ್ಯಕ್ರಮವನ್ನು ಜಾರಿಗೆ ತರಲು ಸಮ್ಮತಿ ನೀಡಲಿವೆ. ಹಾಗಾಗಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮದ (FYUGP) ಚೌಕಟ್ಟನ್ನು ಅಂತಿಮಗೊಳಿಸಿದ್ದು, ಇದು ಮುಂಬರುವ ಶೈಕ್ಷಣಿಕ ಅಧಿವೇಶನ 2023-24ರಿಂದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೆ ಬರಲಿದೆ

English summary
The University Grants Commission (UGC) has finalised the framework for the four-year undergraduate programme (FYUGP) that will be implemented in all higher education institutions from the upcoming academic session 2023-24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X