ಲಕ್ನೋದಲ್ಲಿ ಬೆಂಕಿ ಅವಘಡ ನಾಲ್ಕು ಜನರ ದುರ್ಮರಣ
ಲಕ್ನೋ, ಜೂನ್ 19: ಉತ್ತರ ಪ್ರದೇಶದ ಲಕ್ನೋದ ಹೊಟೇಲ್ ವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ವರು ಮೃತರಾಗಿದ್ದಾರೆ.
ಲಕ್ನೋದ ಚಾರ್ಬಾಘ್ ನಲ್ಲಿರುವ ಹೊಟೇಲ್ ನಲ್ಲಿ ಇಂದು ಬೆಳಿಗ್ಗೆ ಈ ಅವಘಡ ಸಂಭವಿಸಿದ್ದು, 50 ಜನರನ್ನು ರಕ್ಷಣೆ ಮಾಡಲಾಗಿದೆ.
"ಘಟನೆಯಲ್ಲಿ ನಾಲ್ಕು ಜನರು ಮೃತರಾಗಿದ್ದು, 50 ಜನರನ್ನು ರಕ್ಷಣೆ ಮಾಡಲಾಗಿದೆ. ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ತನಿಖೆ ನಡೆಸುತ್ತಿದ್ದೇವೆ" ಎಂದು ಲಕ್ನೋ ಐಜಿಪಿ(ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್), ಎಸ್.ಪಾಂಡೆ ಮಾಧ್ಯಮಗಳಿಗೆ ಹೇಳಿದ್ದಾರೆ.

ಡಿ.29 ರಂದು ಮಹಾರಾಷ್ಟ್ರದ ಮುಂಬೈನ ಕಮಲ್ ಮಿಲ್ಸ್ ಹೊಟೇಲ್ ನಲ್ಲಿ ನಡೆದ ಬೆಂಕಿ ಅವಘಡದಲ್ಲಿ 14 ಜನ ಮೃತರಾಗಿದ್ದರು. ಈ ದುರಂತ ಘಟನೆ ಅಂತಾರಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.












Click it and Unblock the Notifications