ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ: 4 ಸಾವು, 50 ಮಂದಿಗೆ ಗಾಯ
ಭುದಾನ್ಪುರ(ಉತ್ತರ ಪ್ರದೇಶ), ಸೆಪ್ಟೆಂಬರ್ 20: ಉತ್ತರ ಪ್ರದೇಶದ ಭುದಾನ್ಪುರದಲ್ಲಿ ಲಾರಿ ಮತ್ತು ಟ್ರಾಕ್ಟರ್ ನಡುವೆ ನಿನ್ನೆ(ಸೆ.19) ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದು, 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಎರಡೂ ವಾಹನದ ಚಾಲಕರೂ ಮದ್ಯಪಾನ ಮಾಡಿದ್ದರು ಎಂಬ ಅನುಮಾನ ವ್ಯಕ್ತವಾಗಿದ್ದು, ಗಾಯಗೊಂಡವರನ್ನೆಲ್ಲ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ಭುದಾನ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications