Dogs Attack: ಹೈದರಾಬಾದ್‌ನಲ್ಲಿ 5 ವರ್ಷದ ಮಗುವಿನ ಮೇಲೆ 4 ನಾಯಿಗಳು ದಾಳಿ: ವಿಡಿಯೋ
ಹೈದರಾಬಾದ್‌ನಲ್ಲಿ ಬೀದಿ ನಾಯಿಗಳ ದಾಳಿಯಿಂದ ಐದು ವರ್ಷದ ಮಗು ಬಲಿಯಾಗಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಹೈದರಾಬಾದ್‌ನಲ್ಲಿ ಮಗುವಿನ ಮೇಲೆ ನಾಯಿಗಳು ದಾಳಿ ಮಾಡಿದ ಹೃದಯ ವಿದ್ರಾವಕ ಘಟನೆ ಸಿಸಿಟಿವಿ ದೃಶ್ಯಗಳಿಂದ ಬೆಳಕಿಗೆ ಬಂದಿದೆ. ಹೈದರಾಬಾದ್‌ನ ಹೌಸಿಂಗ್ ಸೊಸೈಟಿಯಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ 5 ವರ್ಷದ ಬಾಲಕನ ಮೇಲೆ ದಾಳಿ ನಡೆಸಿವೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಭಯಾನಕ ಘಟನೆ ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಿಗೆ ಬಂದಿದೆ. ವಿಡಿಯೊದಲ್ಲಿ ಬೀದಿ ನಾಯಿಗಳ ಗುಂಪೊಂದು ಅವನ ಮೇಲೆ ದಾಳಿ ಮಾಡಿದಾಗ ಹುಡುಗನು ರಸ್ತೆಯಲ್ಲಿ ಒಬ್ಬನೇ ತಿರುಗಾಡುತ್ತಿರುವುದನ್ನು ಕಾಣಬಹುದು. ನಾಯಿಗಳು ದಾಳಿ ಮಾಡಿದ ವೇಳೆ ಮಗು ಓಡಿಹೋಗಲು ಪ್ರಯತ್ನಿಸುತ್ತಾನೆ. ಆದರೆ ಅವನು ತನ್ನನ್ನು ನಾಯಿಗಳಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವುಗಳು ಮಗುವನ್ನು ಬೇಟೆಯಾಡುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ.

4 ನಾಯಿಗಳ ದಾಳಿಗೆ ಬಾಲಕ ಬಲಿ
ಮೂಲಗಳ ಪ್ರಕಾರ, ಮಗುವಿನ ತಂದೆ ಗಂಗಾಧರ್ ಘಟನೆ ನಡೆದ ವಸತಿ ಸಂಕೀರ್ಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗುವಿನ ಅಳಲು ಕೇಳಿದ ತಂದೆ ಸ್ಥಳಕ್ಕೆ ಧಾವಿಸಿ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಚಿಕಿತ್ಸೆ ನೀಡುವಾಗ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ. ಈ ಘಟನೆಯನ್ನು ಫೆಬ್ರವರಿ 19 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. 5 ವರ್ಷದ ಮಗುವಿನ ಹೆಸರು ಪ್ರದೀಪ್ ಎಂದು ಗುರುತಿಸಲಾಗಿದೆ.
|
ಮಗು ಆಟವಾಡುತ್ತಿದ್ದಾಗ ನಾಯಿಗಳು ದಾಳಿ
ಗಂಗಾಧರ್ ತಮ್ಮ ಕುಟುಂಬದೊಂದಿಗೆ ನಿಜಾಮಾಬಾದ್‌ನಿಂದ ಹೈದರಾಬಾದ್‌ಗೆ ಕೆಲಸದ ನಿಮಿತ್ತ ತೆರಳಿದ್ದರು. ಭಾನುವಾರ ಗಂಗಾಧರ್ ತಾವು ಕೆಲಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ಗೆ ತಮ್ಮ ಮಗುವನ್ನು ಕರೆದೊಯ್ದಿದ್ದರು. ಕಾಂಪೌಂಡ್‌ನಲ್ಲಿ ಆಟವಾಡುತ್ತಿದ್ದ ಗಂಗಾಧರ್ ಅವರ ಪುತ್ರನ ಮೇಲೆ ಭಾನುವಾರ ಬೀದಿ ನಾಯಿಗಳು ಬರ್ಬರವಾಗಿ ದಾಳಿ ನಡೆಸಿವೆ. ಮಗು ಕಿರುಚಾಟವನ್ನು ಕೇಳಿ ತಂದೆ ಓಡಿ ಬಂದಿದ್ದಾರೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅದಾಗಲೇ ಮಗು ಸಾವನ್ನಪ್ಪಿತ್ತು ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯಕ್ಷದರ್ಶಿ ಹೇಳಿದ್ದೇನು?
"ನಾನು ಹತ್ತಿರದ ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತೇನೆ. ಭಾನುವಾರ ನಾನು ಕರ್ತವ್ಯದಲ್ಲಿದ್ದಾಗ ವಾಚ್‌ಮೆನ್ ಸಹಾಯಕ್ಕಾಗಿ ಕೂಗುವುದನ್ನು ಕೇಳಿದೆ. ನಾನು ಒಳಗೆ ಹೋದಾಗ ಮಗು ಪ್ರಜ್ಞೆ ತಪ್ಪಿ ಬಿದ್ದಿತ್ತು. ಇದು ಇಲ್ಲಿ ಮೊದಲನೆಯ ಘಟನೆಯಾಗಿದೆ" ಎಂದು ಪ್ರತ್ಯಕ್ಷದರ್ಶಿ ಹತ್ತಿರದ ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಸುದ್ದಿಗಾಗಗರಿಗೆ ಹೇಳಿದರು.

ಫೆಬ್ರವರಿ 8 ರಂದು ಸೂರತ್‌ನಲ್ಲಿ ಬೀದಿ ನಾಯಿ ದಾಳಿ
ಮತ್ತೊಂದು ಆಘಾತಕಾರಿ ಘಟನೆಯಲ್ಲಿ ಭಾನುವಾರ ಸೂರತ್‌ನಲ್ಲಿ ಬೀದಿ ನಾಯಿಗಳು 2 ವರ್ಷದ ಬಾಲಕಿಯ ಮೇಲೆ ದಾಳಿ ನಡೆಸಿವೆ. ಅಂಬೆಗಾಲಿಡುವ ಆಕೆಯ ಕೈಗಳು, ಕಾಲುಗಳು ಮತ್ತು ಹೊಟ್ಟೆಗೆ ತೀವ್ರ ಗಾಯಗಳಾಗಿವೆ. ಸದ್ಯ ಆಕೆಯನ್ನು ಸ್ಥಳೀಯ ಆಸ್ಪತ್ರೆಯ ಐಸಿಯು ವಾರ್ಡ್‌ಗೆ ದಾಖಲಿಸಲಾಗಿದ್ದು, ದಾಳಿಯಿಂದಾಗಿ ಮಗುವಿನ ಶ್ವಾಸಕೋಶಕ್ಕೆ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಫೆಬ್ರವರಿ 8 ರಂದು ಸೂರತ್‌ನಲ್ಲಿ ಬೀದಿ ನಾಯಿ ದಾಳಿಯಿಂದ ಮತ್ತೊಂದು ಮಗು ಸಾವನ್ನಪ್ಪಿತ್ತು.












Click it and Unblock the Notifications