just in: ದೇಶದ 4 ಕೋಟಿ ಜನರು ಕೊರೊನಾ ಲಸಿಕೆಯ ಒಂದೂ ಡೋಸ್ ಪಡೆದಿಲ್ಲ!
ನವದೆಹಲಿ, ಜುಲೈ 23; ಅಂದಾಜು 4 ಕೋಟಿ ಅರ್ಹ ಫಲಾನುಭವಿಗಳು ಜುಲೈ 18 ರವರೆಗೆ ಕೊರೊನಾ ಲಸಿಕೆಯ ಒಂದು ಡೋಸ್ ಕೂಡ ತೆಗೆದುಕೊಂಡಿಲ್ಲ ಎಂದು ಆರೋಗ್ಯ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಲೋಕಸಭೆಗೆ ತಿಳಿಸಿದ್ದಾರೆ.
ಜುಲೈ 18 ರವರೆಗೆ ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ (ಸಿವಿಸಿ) ಒಟ್ಟು 1,78,38,52,566 ಲಸಿಕೆ ಡೋಸ್‌ಗಳನ್ನು (ಶೇ 97.34) ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.
ಕೊರೊನಾ ಲಸಿಕೆ ತೆಗೆದುಕೊಳ್ಳದ ಜನಸಂಖ್ಯೆ ಮತ್ತು ಶೇಕಡಾವಾರಿನ ಬಗೆಗಿನ ಪ್ರಶ್ನೆಗೆ ಉತ್ತರಿಸಿರುವ ಅವರು,"ಜುಲೈ 18 ರ ಹೊತ್ತಿಗೆ, ಅಂದಾಜು 4 ಕೋಟಿ ಅರ್ಹ ಫಲಾನುಭವಿಗಳು ಒಂದೇ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಸಹ ತೆಗೆದುಕೊಂಡಿಲ್ಲ" ಎಂದಿದ್ದಾರೆ.

ಈಗಾಗಲೇ ದೇಶದಲ್ಲಿ ಕೊರೊನಾ ಬೂಸ್ಟರ್ ಡೋಸ್ ಕೂಡ ಲಭ್ಯವಿದೆ. ಆರೋಗ್ಯ ಕಾರ್ಯಕರ್ತರು (HCWs), ಮುಂಚೂಣಿ ಕೆಲಸಗಾರರು (FLWs) ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಫಲಾನುಭವಿಗಳಿಗೆ ಈ ವರ್ಷ ಮಾರ್ಚ್ 16 ರಿಂದ ಸರ್ಕಾರಿ ಕೊರೊನಾ ಲಸಿಕೆ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿವೆ. 18 ರಿಂದ 59 ವರ್ಷ ವಯಸ್ಸಿನವರಿಗೆ ಖಾಸಗಿ ಕೊರೊನಾ ಲಸಿಕಾ ಕೇಂದ್ರಗಳಲ್ಲಿ ಏಪ್ರಿಲ್ 10 ರಿಂದ ಮುನ್ನೆಚ್ಚರಿಕೆ ಡೋಸ್‌ಗಳು ಲಭ್ಯವಿವೆ.
ಜುಲೈ 15 ರಿಂದ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮುನ್ನೆಚ್ಚರಿಕೆಗಳ ಡೋಸ್‌ಗಳನ್ನು ನೀಡಲು ವಿಶೇಷ 75 ದಿನಗಳ ಲಸಿಕೆ ಉತ್ಸವ ಪ್ರಾರಂಭವಾಗಿದೆ.
ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಅರ್ಹ ಜನಸಂಖ್ಯೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ 'ಕೊರೊನಾ ಲಸಿಕೆ ಅಮೃತ ಮಹೋತ್ಸವ' ಚಾಲನೆಯಾಗಿದೆ.
ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಭಾರತದ ವಯಸ್ಕ ಜನಸಂಖ್ಯೆಯ 98 ಪ್ರತಿಶತದಷ್ಟು ಜನರು ಕೊರೊನಾ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ, ಆದರೆ 90 ಪ್ರತಿಶತದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ.












Click it and Unblock the Notifications