ಭಾರತದಲ್ಲಿ 4 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ನವದೆಹಲಿ, ಮೇ 1: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4 ಲಕ್ಷ ದಾಟಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ಒಂದು ದಿನದಲ್ಲಿ 4,01,993, ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 3523 ಮಂದಿ ಸಾವನ್ನಪ್ಪಿದ್ದು, 2,99,988 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಒಟ್ಟು 1,91,64,969 ಪ್ರಕರಣಗಳಿವೆ, 32,68,710 ಸಕ್ರಿಯ ಪ್ರಕರಣಗಳಿವೆ, ಇದುವರೆಗೆ 2,11,853 ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಿಂದ ಒಟ್ಟು 1,56,84,406 ಮಂದಿ ಬಿಡುಗಡೆಗೊಂಡಿದ್ದಾರೆ.

ಇದುವರೆಗೂ 15,49,89,635 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ, ಏಪ್ರಿಲ್ 30ರವರೆಗೆ 28,83,37,385 ಮಾದರಿಗಳನ್ನು ಪರೀಕ್ಷಿಸಲಾಗಿದೆ ಏಪ್ರಿಲ್ 30 ರಂದು 19,45,299 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.












Click it and Unblock the Notifications