Breaking; ಭಾರತದಲ್ಲಿ 3451 ಹೊಸ ಕೋವಿಡ್ ಪ್ರಕರಣಗಳು ದಾಖಲು

ನವದೆಹಲಿ, ಮೇ 08; ಭಾರತದಲ್ಲಿ 3451 ಹೊಸ ಕೋವಿಡ್ ಪ್ರಕರಣಗಳು 24 ಗಂಟೆಯಲ್ಲಿ ದಾಖಲಾಗಿವೆ. ದೇಶದ ಸಕ್ರಿಯ ಪ್ರಕರಣಗಳು 20,635ಕ್ಕೆ ಏರಿಕೆಯಾಗಿದೆ.

ಭಾನುವಾರದ ಕೇಂದ್ರ ಆರೋಗ್ಯ ಸಚಿವಾಲಯದ ಹೆಲ್ತ್ ಬುಲೆಟಿನ್ ಪ್ರಕಾರ 24 ಗಂಟೆಯಲ್ಲಿ ದೇಶದಲ್ಲಿ 40 ಜನರು ಮೃತಪಟ್ಟಿದ್ದಾರೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 332 ಅಧಿಕವಾಗಿದೆ.

3451 New Covid 19 Cases Reported In India

24 ಗಂಟೆಯಲ್ಲಿ 3,60,613 ಮಾದರಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದುವರೆಗೂ ದೇಶದಲ್ಲಿ 42557495 ಜನರು ಗುಣಮುಖಗೊಂಡಿದ್ದಾರೆ. 524064 ಜನರು ಮೃತಪಟ್ಟಿದ್ದಾರೆ.

ಶನಿವಾರ ಅಂಡಮಾನ್‌ನಲ್ಲಿ ಒಂದು ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 14 ದಿನಗಳ ಬಳಿಕ ಕೇಂದ್ರಾಡಳಿತ ಪ್ರದೇಶದಲ್ಲಿ ಒಂದು ಕೋವಿಡ್ ಪ್ರಕರಣ ಪತ್ತೆಯಾಗಿದೆ.

ಕರ್ನಾಟಕದಲ್ಲಿ 171, ಮಹಾರಾಷ್ಟ್ರದಲ್ಲಿ 253, ನವದೆಹಲಿಯಲ್ಲಿ 1407, ಒಡಿಶಾದಲ್ಲಿ 14 ಹೊಸ ಕೋವಿಡ್ ಪ್ರಕರಣಗಳು ಶನಿವಾರ ದಾಖಲಾಗಿವೆ.

ಇನ್ನು ಕೋವಿಡ್ ಸಾವಿನ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಅಂಕಿ-ಅಂಶವನ್ನು ನಾವು ಒಪ್ಪುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಈ ಕುರಿತು ಹೇಳಿಕೆ ನೀಡಿದ್ದು, "ವಿಶ್ವ ಆರೋಗ್ಯ ಸಂಸ್ಥೆ ಅಂಕಿಅಂಶಗಳನ್ನು ತಿರಸ್ಕರಿಸಲು ನಾವು ತೀರ್ಮಾನ ಮಾಡಿದ್ದೇವೆ. ನಾವು 1969ರಿಂದ ಕಾನೂನು ಬದ್ಧವಾಗಿ ಜನನ ಮತ್ತು ಮರಣದ ಅಂಕಿ-ಅಂಶಗಳನ್ನು ದಾಖಲಿಸುತ್ತಿದ್ದೇವೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+