ಪಾಕಿಸ್ತಾನದ 320ಕ್ಕೂ ಹೆಚ್ಚು ಉಗ್ರರಿಂದ ಭಾರತದೊಳಗೆ ನುಸುಳಲು ಯತ್ನ

ನವದೆಹಲಿ, ಜುಲೈ 31: ಪಾಕಿಸ್ತಾನದ 27 ಲಾಂಚ್ ಪ್ಯಾಡ್‌ಗಳು ಸಕ್ರಿಯವಾಗಿದ್ದು, 320ಕ್ಕೂ ಹೆಚ್ಚು ಉಗ್ರರು ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಕಳೆದ ವರ್ಷ 60 ಭಯೋತ್ಪಾದಕರು ಒಳನುಸುಳಿದ್ದರು, ಈ ವರ್ಷ 35 ಮಂದಿ ಉಗ್ರರು ಮಾತ್ರ ಭಾರತಕ್ಕೆ ನುಸುಳಿದ್ದಾರೆ, 2020 ರ ಮೊದಲ ವರ್ಷದಲ್ಲಿ 429 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ಇದೇ ಸಮಯಕ್ಕೆ 605 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದವು.

ಅನೇಕ ಸಂಭಾಷಣೆಗಳನ್ನು ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ ತಡೆಹಿಡಿದಿದೆ ಮತ್ತು ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮುಖ್ಯವಾಗಿ ಒಳನುಸುಳುವಿಕೆ ಬಗ್ಗೆ ಎಚ್ಚರಿಕೆ ನೀಡಿದೆ.

320 Terrorists Ready To Enter India

ಶಸ್ತ್ರಾಸ್ತ್ರ ಮತ್ತು ಗ್ರೆನೇಡ್‌ಗಳಲ್ಲಿ ಚೀನಾದ ಗುರುತುಗಳಿದ್ದು, ಇವುಗಳನ್ನು ಗಡಿಯಿಂದ ಸಾಗಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ, ಈ ಶಸ್ತ್ರಾಸ್ತ್ರಗಳನ್ನು ದಕ್ಷಿಣ ಕಾಶ್ಮೀರದಲ್ಲಿ ಸ್ಪೋಟಿಸಲು ಸಾಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಯಂತ್ರಣ ರೇಖೆಯ ಉದ್ದಕ್ಕೂ ಜಾಗರೂಕತೆಯಿಂದಾಗಿ, ಕುಪ್ವಾರದಲ್ಲಿ ಭದ್ರತಾ ಪಡೆಗಳು ಪಿಕ್-ಅಪ್ ವಾಹನವನ್ನು ತಡೆದು ಅವರಿಂದ 10 ಕೆಜಿ ಬ್ರೌನ್ ಶುಗರ್ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+