ಮೂವರು ಖಲಿಸ್ತಾನ್ ಭಯೋತ್ಪಾದಕರ ಬಂಧನ
ಭೋಪಾಲ್, ಆಗಸ್ಟ್ 10: ಐಎಸ್ಐ ಮತ್ತು ಖಲಿಸ್ತಾನ್ ಲಿಬರೇಷನ್ ಫೋರ್ಸ್ ನ ಮೂವರು ಉಗ್ರರನ್ನು ಮಧ್ಯ ಪ್ರದೇಶ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಮೊಕ್ಕಾಂ ಹೂಡಿದ್ದ ಪಂಜಾಬ್ ಪೊಲೀಸರು ಕೊನೆಗೂ ಮಧ್ಯ ಪ್ರದೇಶ ಪೊಲೀಸರ ಸಹಾಯದೊಂದಿಗೆ ಈ ಉಗ್ರರನ್ನು ಬಂಧಿಸಿದ್ದಾರೆ.
ಬಲ್ವಿಂದರ್ ಗಿಲ್, ಬಲ್ಕರ್ ಸಿಂಗ್ ಮತ್ತು ಸತ್ಯೇಂದ್ರ ರಾವತ್ ಬಂಧಿತ ಉಗ್ರರಾಗಿದ್ದಾರೆ. ಇವರಲ್ಲಿ ಇಬ್ಬರು ಖಲಿಸ್ತಾನ್ ಸಂಘಟನೆಗೆ ಸೇರಿದ್ದರೆ, ಓರ್ವ ಐಎಸ್ಐ ಜತೆ ಸಂಪರ್ಕ ಹೊಂದಿದ್ದ ಎಂದು ಮೂಲಗಳು ಹೇಳಿವೆ.
ಗ್ವಾಲಿಯರ್ ನ ದಬ್ರಾ, ಚಿನೋರ್ ಮತ್ತು ದುಲ್ಪಾರದಲ್ಲಿ ಈ ಉಗ್ರರು ಅಡಗಿಕೊಂಡಿದ್ದರು. ಖಚಿತ ಗುಪ್ತಚರ ಮಾಹಿತಿಯ ಮೇಲೆ ಇವರನ್ನು ಎಟಿಎಸ್ ಪೊಲೀಸರು ಬಂಧಿಸಿದ್ದಾರೆ. ಕಳೆದ ಜೂನ್ ನಲ್ಲಿ ಬಂಧಿತರಾಗಿದ್ದ ಗುರ್ದೀಯಲ್ ದಿಂಗ್, ಜಾಗ್ರೂಪ್ ಸಿಂಗ್ ಮತ್ತು ಸತ್ವೆಂದರ್ ಸಿಂಗ್ ಈ ಉಗ್ರರ ಬಗ್ಗೆ ಸುಳಿವು ನೀಡಿದ್ದರು ಎ ನ್ನಲಾಗಿದೆ.

ವಿಚಾರಣೆ ವೇಳೆ ಈ ಉಗ್ರರು ಸಿಖ್ಖ್ ವಿರೋಧಿ ಶಕ್ತಿಗಳ ವಿರುದ್ಧ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂದು ತಿಳಿದು ಬಂದಿದೆ. ಇದಕ್ಕಾಗಿ 2016ರಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ತರಬೇತಿಯನ್ನೂ ಪಡೆದಿದ್ದರು.












Click it and Unblock the Notifications