ತಿಂಗಳಿಗೆ ₹3 ಲಕ್ಷ ಸಂಬಳ ಬಂದರೂ ನೆಮ್ಮದಿ ಇಲ್ಲ! 2 ಸಂಬಳ ಸಾಕಾಗದಿರಲು ಇದೇ ಕಾರಣ

ನವದೆಹಲಿ: ತಿಂಗಳಿಗೆ ₹3 ಲಕ್ಷ ಆದಾಯ ಬರುತ್ತಿದೆ ಎಂದರೆ ಆ ಕುಟುಂಬ ಐಷಾರಾಮಿ ಜೀವನ ನಡೆಸುತ್ತಿರಬೇಕು ಎಂಬುದು ಸಾಮಾನ್ಯ ಕಲ್ಪನೆ. ಆದರೆ ವಾಸ್ತವದಲ್ಲಿ ಹೆಚ್ಚಿನ ಆದಾಯವಿದ್ದರೂ ಕೆಲ ಕುಟುಂಬಗಳು ತಿಂಗಳ ಕೊನೆಯಲ್ಲಿ ಹಣಕಾಸಿನ ಒತ್ತಡ ಎದುರಿಸುತ್ತಿರುತ್ತವೆ. ಆದಾಯ ಹೆಚ್ಚಾದಂತೆ ಜೀವನಶೈಲಿ ಮತ್ತು ಮಾಸಿಕ ಬದ್ಧತೆಗಳೂ ಹೆಚ್ಚಾಗುವುದೇ ಇದಕ್ಕೆ ಪ್ರಮುಖ ಕಾರಣವಾಗಬಹುದು.

ಉದ್ಯಮಿ ಡಾ. ಸನ್ನಿ ಗರ್ಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ವೊಂದರಲ್ಲಿ ಎರಡು ಮಂದಿ ದುಡಿಯುವ ಕುಟುಂಬಕ್ಕೆ ತಿಂಗಳಿಗೆ ₹3 ಲಕ್ಷ ಆದಾಯ ಇದ್ದರೂ ಏಕೆ ಆರ್ಥಿಕವಾಗಿ ಸ್ವತಂತ್ರವಾಗಿರಲು ಸಾಧ್ಯವಾಗುವುದಿಲ್ಲ ಎಂಬುದನ್ನು ಉದಾಹರಣೆಯ ಮೂಲಕ ವಿವರಿಸಿದ್ದಾರೆ.

3 lakh salary Earning Lakh a Month But Still Not Financially Free Here Why Two Salaries May Not Be Enough

₹3 lakh salary:ಇಬ್ಬರಿಗೆ ₹1.5 ಲಕ್ಷ: ಒಟ್ಟು ಆದಾಯ ₹3 ಲಕ್ಷ

ಗರ್ಗ್ ನೀಡಿರುವ ಉದಾಹರಣೆಯಲ್ಲಿ ದಂಪತಿಯಿಬ್ಬರೂ ತಲಾ ₹1.5 ಲಕ್ಷ ಸಂಪಾದಿಸುತ್ತಾರೆ. ಹೀಗಾಗಿ ಕುಟುಂಬದ ಒಟ್ಟು ಮಾಸಿಕ ಆದಾಯ ₹3 ಲಕ್ಷ. ಆದರೆ ಈ ₹3 ಲಕ್ಷದಲ್ಲಿ ಮನೆ ಬಾಡಿಗೆ ಅಥವಾ ಗೃಹಸಾಲದ EMIಗೆ ₹60,000-70,000, ಮಕ್ಕಳ ಶಾಲಾ ಶುಲ್ಕಕ್ಕೆ ₹25,000-30,000 ಖರ್ಚಾಗಬಹುದು. ಇದಕ್ಕೆ ಕಾರಿನ EMI, ಪೆಟ್ರೋಲ್‌ ಅಥವಾ ಸಾರಿಗೆ ವೆಚ್ಚ, ಪೋಷಕರಿಗೆ ನೀಡುವ ಹಣ, SIP ಹೂಡಿಕೆ, ವಾರಾಂತ್ಯದ ಹೊರಸುತ್ತಾಟ, ವಿವಿಧ ಸಬ್‌ಸ್ಕ್ರಿಪ್ಷನ್‌ಗಳು ಸೇರಿದಂತೆ ಹಲವು ಖರ್ಚುಗಳು ಸೇರುತ್ತವೆ.

ಹೀಗೆ ಒಂದರ ಹಿಂದೆ ಒಂದರಂತೆ ಮಾಸಿಕ ಬದ್ಧತೆಗಳು ಹೆಚ್ಚಾದಾಗ ₹3 ಲಕ್ಷ ಸಂಬಳ ಎಂಬ ದೊಡ್ಡ ಮೊತ್ತ ಇದ್ದರೂ ಕೈಯಲ್ಲಿ ಉಳಿಯುವ ಹಣ ನಿರೀಕ್ಷೆಗಿಂತ ಕಡಿಮೆಯಾಗಬಹುದು.

ಎರಡು ಸಂಬಳ ಇದೆ ಎಂಬ ಕಾರಣಕ್ಕೆ ಹೆಚ್ಚುವರಿ ಖರ್ಚು?

ಗರ್ಗ್ ಅವರ ಪ್ರಕಾರ, ಕುಟುಂಬದಲ್ಲಿ ಇಬ್ಬರು ದುಡಿಯುತ್ತಿದ್ದಾರೆ ಎಂಬ ಕಾರಣಕ್ಕೆ ಜನರು ದೊಡ್ಡ ಮನೆ, ದುಬಾರಿ ಶಾಲೆ, ಹೊಸ ಕಾರು ಹಾಗೂ ಹೆಚ್ಚಿನ ಜೀವನಶೈಲಿ ವೆಚ್ಚಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಅವರು ತಮ್ಮ ಪೋಸ್ಟ್‌ನಲ್ಲಿ, "ಎರಡು ಆದಾಯ ಇದೆ ಎಂಬ ಕಾರಣಕ್ಕೆ ಮನೆ ಆಯ್ಕೆ ಮಾಡಿದೆವು, ಶಾಲೆ ಆಯ್ಕೆ ಮಾಡಿದೆವು, ಕಾರು ಅಪ್‌ಗ್ರೇಡ್ ಮಾಡಿದೆವು, ಜೀವನಶೈಲಿಯನ್ನು ರೂಪಿಸಿಕೊಂಡೆವು" ಎಂಬ ಅರ್ಥದಲ್ಲಿ ವಿವರಿಸಿದ್ದಾರೆ. ಅಂದರೆ, ಆದಾಯ ಹೆಚ್ಚಾದಾಗ ಕೇವಲ ಉಳಿತಾಯ ಹೆಚ್ಚಾಗುವುದಿಲ್ಲ. ಅದೇ ಸಮಯದಲ್ಲಿ ಆದಾಯಕ್ಕೆ ತಕ್ಕಂತೆ ಜೀವನಶೈಲಿಯ ವೆಚ್ಚವೂ ಏರಿಕೆಯಾಗಬಹುದು.

₹3 lakh salary:ಒಂದು ಸಂಬಳ ನಿಂತರೆ ಏನಾಗುತ್ತದೆ?

ಇಲ್ಲಿಯೇ ಗರ್ಗ್ ಅವರು ಹಣಕಾಸಿನ ಭದ್ರತೆಯ ಪ್ರಮುಖ ಪ್ರಶ್ನೆಯನ್ನು ಮುಂದಿಡುತ್ತಾರೆ. ದಂಪತಿಯ ಒಟ್ಟು ಆದಾಯ ₹3 ಲಕ್ಷ ಇದ್ದರೂ, ಅವರ ಜೀವನಶೈಲಿ ಮತ್ತು EMIಗಳು ಎರಡೂ ಸಂಬಳಗಳ ಮೇಲೆ ಅವಲಂಬಿತವಾಗಿದ್ದರೆ ಒಂದು ಆದಾಯ ನಿಂತಾಗ ಕುಟುಂಬದ ಹಣಕಾಸಿನ ಸ್ಥಿತಿ ಏಕಾಏಕಿ ಒತ್ತಡಕ್ಕೆ ಸಿಲುಕಬಹುದು.

ಅವರ ಅಭಿಪ್ರಾಯದಲ್ಲಿ, ಹೆಚ್ಚು ಸಂಪಾದಿಸುವುದಷ್ಟೇ ಸಂಪತ್ತು ಅಥವಾ ಆರ್ಥಿಕ ಸ್ವಾತಂತ್ರ್ಯದ ಮಾನದಂಡವಲ್ಲ. ಒಂದು ಆದಾಯ ಕೆಲವು ಕಾಲ ನಿಂತರೂ ಜೀವನ ಕುಸಿದು ಹೋಗದಂತೆ ಹಣಕಾಸಿನ ವ್ಯವಸ್ಥೆ ರೂಪಿಸಿಕೊಳ್ಳುವುದು ಮುಖ್ಯ.

ಆದಾಯ ಹೆಚ್ಚಿದಂತೆ ಖರ್ಚೂ ಹೆಚ್ಚಾಗುತ್ತಿದೆಯೇ?

ತಮ್ಮ ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿ ಗರ್ಗ್, ತಿಂಗಳಿಗೆ ₹3 ಲಕ್ಷ ಆದಾಯವು ಕಾಗದದ ಮೇಲೆ ಶ್ರೀಮಂತಿಕೆಯಂತೆ ಕಾಣಬಹುದು. ಆದರೆ ನಿಜ ಜೀವನದಲ್ಲಿ ಅದು ಸಾಕಾಗದಂತೆ ಅನಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಕಾರಣ, ಆದಾಯ ಹೆಚ್ಚಾದಂತೆ ಆ ಆದಾಯವನ್ನು ಆಧರಿಸಿ ಕಟ್ಟಿಕೊಳ್ಳುವ ಜೀವನಶೈಲಿಯೂ ದೊಡ್ಡದಾಗುತ್ತದೆ. ದೊಡ್ಡ ಮನೆ, ಕಾರು, ಮಕ್ಕಳ ಶಿಕ್ಷಣ, EMI, ಹೂಡಿಕೆ, ಪ್ರವಾಸ ಹಾಗೂ ಮನರಂಜನೆ ಸೇರಿದಂತೆ ಖರ್ಚುಗಳು ಕ್ರಮೇಣ ಸಾಮಾನ್ಯ ಜೀವನದ ಭಾಗವಾಗುತ್ತವೆ.

ಹೀಗಾಗಿ "ನಾನು ಎಷ್ಟು ಸಂಪಾದಿಸುತ್ತೇನೆ?" ಎನ್ನುವುದಕ್ಕಿಂತ ನನ್ನ ಆದಾಯದಲ್ಲಿ ಎಷ್ಟು ಹಣವನ್ನು ಸ್ವತಂತ್ರವಾಗಿ ಬಳಸಬಹುದು ಮತ್ತು ಒಂದು ಸಂಬಳ ನಿಂತರೂ ಎಷ್ಟು ದಿನ ಜೀವನ ನಡೆಸಬಹುದು?" ಎಂಬ ಪ್ರಶ್ನೆ ಹೆಚ್ಚು ಮುಖ್ಯವಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಗರ್ಗ್ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದಲೂ ಹಲವು ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದು, EMIಗಳ ಹೊರೆ ಹೆಚ್ಚಾದಾಗ ಹೆಚ್ಚಿನ ಆದಾಯವಿದ್ದರೂ ತಿಂಗಳ ಕೊನೆಯಲ್ಲಿ ಹಣದ ಕೊರತೆ ಎದುರಾಗಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು, ₹2 ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುವ ದಂಪತಿಗಳಿದ್ದರೂ EMIಗಳ ಕಾರಣದಿಂದ ತಿಂಗಳ ಕೊನೆಯಲ್ಲಿ ಹಣದ ಸಮಸ್ಯೆ ಎದುರಿಸುತ್ತಾರೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇನ್ನೊಬ್ಬ ಬಳಕೆದಾರರು ಮನೆ, ಕಾರು ಖರೀದಿ, SIP ಹೂಡಿಕೆ ಸೇರಿದಂತೆ ವಿವಿಧ ಹಣಕಾಸಿನ ನಿರ್ಧಾರಗಳ ನಡುವೆ ಬಂಡವಾಳ ವೆಚ್ಚ ಮತ್ತು ನಿಯಮಿತ ಆದಾಯ-ವೆಚ್ಚದ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+