2ಜಿ ಸ್ಪೆಕ್ಟ್ರಂ ತೀರ್ಪು: ನ್ಯಾಯಾಂಗದ ವಿರುದ್ಧ ಛೂಬಿಟ್ಟ ಟೀಕಾಸ್ತ್ರ!

Posted By:
Subscribe to Oneindia Kannada
   2ಜಿ ಸ್ಪೆಕ್ಟ್ರಮ್ ಹಗರಣದ ತೀರ್ಪು : ಟ್ವಿಟ್ಟಿಗರು ಫುಲ್ ಗರಂ | Oneindia Kannada

   ಭಾರತ ಸರ್ಕಾರದ ಬೊಕ್ಕಸಕ್ಕೆ ಬಹುಕೋಟಿ ನಷ್ಟವನ್ನುಂಟು ಮಾಡಿದ 2 ಜಿ ಹಗರಣದ ತೀರ್ಪು ಇಂದು ಹೊರಬಿದ್ದಿದ್ದು, ಅಂದುಕೊಂಡಿದ್ದೇ ಒಂದು, ಆದದ್ದೇ ಒಂದು ಎಂಬಂತಾಗಿದೆ! ಸೂಕ್ತ ಸಾಕ್ಷ್ಯಾಧಾರವಿಲ್ಲ ಎಂಬ ಕಾರಣಕ್ಕೆ ಪ್ರಮುಖ ಆರೋಪಿಗಳಾಗಿದ್ದ ಎ.ರಾಜಾ ಮತ್ತು ಕನ್ನಿಮೋಳಿ ಸೇರಿದಂತೆ 17 ಆರೋಪಿಗಳನ್ನು ದೆಹಲಿಯ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

   2ಜಿ ಸ್ಪೆಕ್ಟ್ರಂ ಹಗರಣ: ಎಲ್ಲಾ ಆರೋಪಿಗಳು ಖುಲಾಸೆ

   ಕೋರ್ಟು ಈ ರೀತಿ ತೀರ್ಪು ನೀಡುತ್ತಿದ್ದಂತೆಯೇ ಎ.ರಾಜಾ, ಕನ್ನಿಮೋಳಿ ಅಭಿಮಾನಿಗಳು ಹರ್ಷಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಟ್ವಿಟ್ಟರ್ ನಲ್ಲಿ ಈ ತೀರ್ಪಿನ ಕುರಿತು ಆಕ್ರೋಶ ವ್ಯಕ್ತವಾಗಿದೆ. 1.76 ಲಕ್ಷ ಕೋಟಿ ರೂ. ನಷ್ಟಕ್ಕೆ ಹೊಣೆಯಾರು ಎಂಬ ಪ್ರಶ್ನೆ ಎದ್ದಿದೆ.

   2ಜಿ ಹಗರಣ : 'ಸುಳ್ಳು ವರದಿ ನೀಡಿದ ವಿನೋದ್ ರೈ ಕ್ಷಮೆಯಾಚಿಸಲಿ'

   ಮತ್ತೂ ಕೆಲವರು ಮೋದಿ ಸರ್ಕಾರವನ್ನು ಕಾಲೆಳೆಯುವಲ್ಲಿಯೂ ಹಿಂದೆಬಿದ್ದಿಲ್ಲ! ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಹಗರಣಗಳಲ್ಲಿ ಪ್ರಮುಖವಾದ 2 ಜಿ ಹಗರಣವನ್ನೇ ಮುಂದಿಟ್ಟುಕೊಂಡು ಅಧಿಕಾರ ಪಡೆದಿದ್ದ ಬಿಜೆಪಿಗೆ ಈ ತೀರ್ಪು ಮುಖಭಂಗವನ್ನುಂಟು ಮಾಡಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

   2ಜಿ ಸ್ಪೆಕ್ಟ್ರಂ, ಏನಿದು ಹಗರಣ? ಇಲ್ಲಿದೆ ಟೈಮ್ ಲೈನ್

   ಬಿಜೆಪಿ ಈಗ ಕ್ಷಮೆ ಕೇಳುತ್ತದೆಯೇ?

   ಬಿಜೆಪಿ ಈಗ ಕ್ಷಮೆ ಕೇಳುತ್ತದೆಯೇ?

   ಈ ತೀರ್ಪು ಬಂದ ನಂತರ ಬಿಜೆಪಿ ಕ್ಷಮೆ ಕೇಳುತ್ತದೆಯೇ? ಸುಖಾ ಸುಮ್ಮನೆ ಎಲ್ಲರ ಮೇಲೂ ಆರೋಪ ಹೊರಿಸಿ, ಸಂಸತ್ತಿನ ಅಮೂಲ್ಯ ಸಮಯವನ್ನು ದುರುಪಯೋಗಪಡಿಸಿಕೊಂಡ, ಆಗಿನ ಸರ್ಕಾರವನ್ನು ದೋಷಿಯ ಸ್ಥಾನದಲ್ಲಿ ಕೂರಿಸಿದ ಬಿಜೆಪಿಯ ಮುಖ್ಯ ಗುರಿ 'ಅಧಿಕಾರ' ಎಂಬುದು ಇದರಿಂದ ಸಾಬೀತಾಗಿದೆ. ಇಂಥ ಅಧಿಕಾರ ದಾಹದ ರಾಜಕೀಯಕ್ಕೆ ಧಿಕ್ಕಾರ ಎಂದು ಪ್ರಿಯಾಂಕಾ ಚತುರ್ವೇದಿ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಇದೇನು ತಮಾಷೆಯಾ..?

   ಸುಪ್ರೀಂ ಕೋರ್ಟ್ 2012 ರಲ್ಲಿ 2ಜಿ ಗೆ ಸಂಬಂಧಿಸಿದ ಎಲ್ಲಾ ಲೈಸೆನ್ಸ್ ಗಳನ್ನೂ ರದ್ದುಗೊಳಿಸಿತ್ತು. ಆದರೆ ಈಗ ಎಲ್ಲಾ ಆರೋಪಿಗಳನ್ನೂ ಖುಲಾಸೆ ಮಾಡಲಾಗಿದೆ. ಇದೇನು ತಮಾಷೆಯಾ? ಇನ್ನು ಮೇಲೆ ಕಾಮಲ್ ವೆಲ್ತ್ ಹಗರಣ, ಅಗಸ್ಟಾ ವೆಸ್ಟ್ ಲ್ಯಾಂಡ್, ನ್ಯಾಶನಲ್ ಹೆರಾಲ್ಡ್ ಹಗರಣಗಳ ಕುರಿತು ಏನನ್ನೂ ನಿರೀಕ್ಷಿಸದಿರುವುದು ಒಳಿತು. ಇವೆಲ್ಲ ಚುನಾವಣೆಯ ಭಾಷಣಕ್ಕಷ್ಟೇ ಸೀಮಿತ ಎಂದು ಅಂಶುಲ್ ಸಕ್ಸೇನಾ ಟ್ವೀಟ್ ಮಾಡಿದ್ದಾರೆ.

   ನ್ಯಾಯಾಂಗದ ಬಗ್ಗೆ ಜಿಗುಪ್ಸೆ!

   ಭಾರತೀಯ ನ್ಯಾಯಾಲಯಗಳಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ. ಬಹುಶಃ ನ್ಯಾಯಾಧೀಶರುಗಳೇ 2ಜಿ ಸ್ಪೆಕ್ಟ್ರಂ ಪ್ರಕರಣದಿಂದ ಸಾಕಷ್ಟು ಹಣ ಮಾಡಿಕೊಂಡಿರಬೇಕು ಎಂದು ಆಕ್ರೋಶದಿಂದ ಟ್ವೀಟ್ ಮಾಡಿದ್ದಾರೆ ಫಾತಿಮಾ ಆರ್ಯಾ ಎಂಬುವವರು.

   ಇಷ್ಟು ಬೇಗ ಉದಾಹರಣೆ ಸಿಕ್ಕಿತು!

   'ನಿನ್ನೆ ನಾನು ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಹೇಳುತ್ತಿದ್ದೆ. ಆರೋಪಿಗಳು ಖುಲಾಸೆಯಾಗುವಾಗ ಎರಡು ಹಂತಗಳಿರುತ್ತವೆ. 1. ಅವರು ನಿರಪರಾಧಿಯಾಗಿರಬೇಕು, 2. ಅಥವಾ ಅವರ ವಿರುದ್ಧ ವಾದ ಮಂಡಿಸುವವರು ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿರಬೇಕು! ಈ ಮಾತಿಗೆ ಇಷ್ಟು ಬೇಗ ಉದಾಹರಣೆ ಸಿಕ್ಕುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ' ಎಂದು ಸುಮಿತ್ ನಾಗ್ಪಾಲ್ ಎಂಬ ವಕೀಲರೊಬ್ಬರು ಟ್ವೀಟ್ ಮಾಡಿದ್ದಾರೆ.

   ನಗೆಪಾಟಲಾಗಿದೆ ನ್ಯಾಯಾಂಗ!

   ಈ ತೀರ್ಪು ನ್ಯಾಯಾಂಗವನ್ನು ನಗೆಪೀಟಲಾಗುವಂತೆ ಮಾಡಿದೆ. ಈ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ತಕ್ಷಣವೇ ಹೈಕೋರ್ಟ್ ಮೊರೆಹೋಗಬೇಕಿದೆ ಎಂದು ಡಾ.ಅರುಣ್ ಸೋಮಣ್ಣ ಎಂಬುವವರು ಟ್ವೀಟ್ ಮಾಡಿದ್ದಾರೆ.

   ದೇಶ ಈ ತೀರ್ಪನ್ನು ಒಪ್ಪೋದಿಲ್ಲ!

   2 ಜಿ ತೀರ್ಪು ಆರೋಪಿಗಳಿಗೆ ನೈತಿಕ ಬಲ ನೀಡಿದೆ. ಅವರಿಗೆ ಮುಂದಿನ ಹಗರಣಕ್ಕೂ ಇದು ಸ್ಫೂರ್ತಿಯಾದೀತು. ಈ ದೇಶದ ಯಾರೂ ಈ ತೀರ್ಪನ್ನು ಒಪ್ಪಿಕೊಳ್ಳುವುದಿಲ್ಲ. ದೇಶದ ಬೊಕ್ಕಸಕ್ಕೆ ನಷ್ಟವಾದ 1.76 ಲಕ್ಷ ಕೋಟಿ ರೂ. ಬಗ್ಗೆ ಏನಂತೀರಿ? ಸಿಎಜಿ ವರದಿ ಸುಳ್ಳಾ? ಈ ಕುರಿತು ವಿಚಾರಣೆ ಮತ್ತೆ ಮುಂದುವರಿಯಲೇಬೇಕು ಎಂದು ಚಂದನ್ ರಾಯ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ನ್ಯಾಯಾಂಗ ಶ್ರೀಮಂತರ ಗುಲಾಮ!

   ನೀವು ಶ್ರೀಮಂತರು ಅಥವಾ ಪ್ರಭಾವಿಗಳಾಗಿದ್ದರೆ, ಅಥವಾ ಎರಡೂ ಆಗಿದ್ದರೆ ನ್ಯಾಯಾಂಗ ನಿಮ್ಮ ಗುಲಾಮನಂತೇ ಇರುತ್ತದೆ! ಸುಪ್ರೀಂ ಕೋರ್ಟ್ ಲೈಸೆನ್ಸ್ ಗಳನ್ನು ರದ್ದು ಮಾಡುತ್ತದೆ, ಅದರ ಅಧೀನ ನ್ಯಾಯಾಲಯ ಆರೋಪಿಗಳಲನ್ನು ಖುಲಾಸೆಗೊಳಿಸುತ್ತದೆ! ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಮೂರ್ಖತನ ಎಂದು ನಾಗೇಶ್ ಸಿಎಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಭಾರತೀಯ ನ್ಯಾಯಾಂಗದ ಮೇಲೆ ಕಳ್ಳರಿಗಷ್ಟೇ ನಂಬಿಕೆ!

   ಜಸ್ಸಿಕಾಳನ್ನು ಯಾರೂ ಸಾಯಿಸಲಿಲ್ಲ, ಕೃಷ್ಣಮೃಗವನ್ನೂ ಯಾರೂ ಸಾಯಿಸಲಿಲ್ಲ, ಯಾರೂ ಕಾರು ಓಡಿಸುತ್ತಿರಲಿಲ್ಲ, ಯಾರೂ ಹಗರಣ ಮಾಡುತ್ತಿರಲಿಲ್ಲ...? ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆ ಇರುವುದು ಕಳ್ಳರಿಗೆ ಮತ್ತು ರಾಜಕಾರಣಿಗಳಿಗೆ ಮಾತ್ರ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ ಶರದ್ ತಿವಾರಿ.

   ಲಂಚ ನೀಡಿಲ್ಲವೆಂದು ಏನು ಗ್ಯಾರಂಟಿ?

   ನೆನಪಿರಲಿ, ಅದು 1,76 ಲಕ್ಷ ಕೋಟಿ ರೂ. ಹಗರಣ. ಅಷ್ಟೆಲ್ಲ ಮೊತ್ತದ ಹಗರಣ ಮಾಡಿರುವವರು ಒಂದು ಕೋರ್ಟಿನ ನ್ಯಾಯಾಧೀಶರಿಗೆ ಲಂಚ ನೀಡುವುದಿಲ್ಲ ಎಂದು ನಂಬುವುದು ಹೇಗೆ ಎಂದು ಸಾಗರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಭ್ರಷ್ಟಾಚಾರಕ್ಕೆ ಪ್ರೋತ್ಸಾಹ!

   ಈ ತೀರ್ಪಿನ ದಿನ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಅತ್ಯಂತ ಕರಾಳ ದಿನ. ಈ ತೀರ್ಪು ಭಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದೆಯಷ್ಟೆ ಎಂದು ಪಂಕಜ್ ಅಂತೂ ಎಂಬುವವರು ಟ್ವೀಟ್ ಮಾಡಿದ್ದಾರೆ.

   ನನಗಿನ್ನೂ ಮೋದಿಯವರ ಮೇಲೆ ನಂಬಿಕೆಯಿದೆ!

   ಪ್ರವಾಹ ನನ್ನ ವಿರುದ್ಧ ಬಂದಾಗ ನಾನು ನನ್ನ ಬ್ಯಾಗ್ ಗಳನ್ನು ಜೀಪಿಗೆ ತುಂಬಿ, ಪರ್ವತಗಳತ್ತ ಹೊರಡುತ್ತೇನೆ. ಈಗ ಮತ್ತೊಮ್ಮೆ ಪರ್ವತಗಳು ನನ್ನನ್ನು ಕರೆಯುತ್ತಿವೆ... ನನಗೆ ಈಗಲೂ ನರೇಂದ್ರ ಮೋದಿಯವರ ಮೇಲೆ ನಂಬಿಕೆ ಇದೆ. ಅವರು ನನ್ನ ದೇಶವನ್ನು ಮಾರುವುದಿಲ್ಲ ಎಂದು! ಎಂಬ ಗೌರವ್ ಪ್ರಧಾನ್ ಟ್ವೀಟ್ 2 ಜಿ ತೀರ್ಪಿನ ಕುರಿತ ಅವರ ಅಸಮಾಧಾನವನ್ನು ಹೊರಹಾಕಿದೆ.

   ಸರ್ಕಾರ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲಿ...

   ಈ ತೀರ್ಪಿನ ವಿರುದ್ಧ ತಕ್ಷಣವೇ ಹೈಕೋರ್ಟ್ ಮೊರೆಹೋಗುವ ಮೂಲಕ ಸರ್ಕಾರ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಿಕೊಳ್ಳಬೇಕಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

   2 ಜಿ ಹಗರಣ ನಡೆದಿಲ್ಲವೆಂದರೆ, ಈ ಪ್ರಶ್ನೆಗಳಿಗೆ ಉತ್ತರಿಸಿ...

   ಅಕಸ್ಮಾತ್ 2 ಜಿ ಸ್ಪೆಕ್ಟ್ರಂ ಎಂಬ ಹಗರಣ ನಡೆದೇ ಇಲ್ಲ ಎಂದಾಗಿದ್ದರೆ...

   * 122 ದೂರಸಂಪರ್ಕ ಪರವಾನಗಿ(ಟೆಲಿಕಾಂ ಲೈಸೆನ್ಸ್) ಗಳನ್ನು ಸುಪ್ರೀಂ ಕೋರ್ಟ್ ಏಕೆ ರದ್ದು ಮಾಡುತ್ತಿತ್ತು?

   * 122 ಲೈಸೆನ್ಸ್ ಗಳಲ್ಲಿ 85 ಲೈಸೆನ್ಸ್ ಗಳು ಅರ್ಹತೆಯ ಮಾನದಂಡದಿಂದ ಹೊರಗಿದೆ ಎಂದು ಸುಪ್ರೀಂ ಏಕೆ ಹೇಳಿತ್ತು?

   * ಎಲ್ಲಾ 122 ಲೈಸೆನ್ಸ್ ಗಳನ್ನೂ ಅಸಾಂವಿಧಾನಿಕ ಕ್ರಮದಲ್ಲಿ ನೀಡಲಾಗಿದೆ ಎಂದು ಸುಪ್ರೀಂ ಹೇಳಿದ್ದೇಕೆ?

   ಈ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ಅಂಶುಲ್ ಸಕ್ಸೇನಾ ಟ್ವೀಟ್ ಮಾಡಿದ್ದಾರೆ.

   ಬಿಜೆಪಿಯ ಸಮರ್ಥನೆ ಸಮಂಜಸವಲ್ಲ

   2 ಜಿ ತೀರ್ಪಿನ ಬಗ್ಗೆ ಬಿಜೆಪಿಯ ಸಮರ್ಥನೆಯನ್ನು ನೋಡುತ್ತಿದ್ದೀರಾ? 'ಸಿಬಿಐ' ಗೆ ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ ಎಂದು ಈ ಹಗರಣವೇ ಇರಲಿಲ್ಲ ಎನ್ನುವುದಕ್ಕಾಗುವುದಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಇದೇ ರೀತಿ ಗೋಧ್ರಾ ಪ್ರಕರಣದಲ್ಲಿ ಮೋದಿ ಪಾತ್ರ ಮತ್ತು ಸೊಹ್ರಾಬುದ್ದಿನ್ ಕೊಲೆ ಪ್ರಕರಣದಲ್ಲಿ ಅಮಿತ್ ಶಾ ಇದೆ ಎಂದರೆ ಹೇಗಾಗುತ್ತದೆ? ಎಂದು ಸಂಜುಕ್ತಾ ಬಸು ಎಂಬುವವರು ಟ್ವೀಟ್ ಮಾಡಿದ್ದಾರೆ.

   ಗೋಧ್ರಾ ಪ್ರಕರಣದಲ್ಲೂ ಹೀಗೇ ಆಗಿದೆಯೇ?

   2 ಜಿ ಹಗರಣದಲ್ಲಿ ನ್ಯಾಯಾಧೀಶರಿಗೆ ಲಂಚ ನೀಡಲಾಗಿದೆ ಎಂದಾದರೆ, 2002 ರ ಗೋಧ್ರಾ ಪ್ರಕರಣದಲ್ಲೂ ಮೋದಿಯವರು ಅದನ್ನೇ ಮಾಡಿದರು ಎನ್ನಬಹುದೇ ಎಂದು ಪ್ರಶ್ನಿಸಿದ್ದಾರೆ ಆಗಮ್ ಶಾ ಎಂಬುವವರು!

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   All accused in the 2G spectrum allocation scam cases - including former telecom minister A Raja and DMK MP Kanimozhi - have been acquitted by a Special court in Delhi. Here are few tweets on 2G scam verdict, in which some people show their anger against Indian Judiciary. And many celebrate the verdict.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ