Operation Sindoor: ಮೇ 10ರ ವರೆಗೂ 27 ವಿಮಾನ ನಿಲ್ದಾಣಗಳು ಬಂದ್

Operation Sindoor: ಆಪರೇಷನ್‌ ಸಿಂಧೂರ್ ಎಫೆಕ್ಟ್‌ ಹಿನ್ನೆಲೆ ದೇಶದ ಹಲವೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರತದ ಪ್ರಮುಖ 27 ವಿಮಾನ ನಿಲ್ದಾಣಗಳನ್ನು ಮೇ 10ರ ವರೆಗೂ ಬಂದ್‌ ಮಾಡಲಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತೀಯ ಸೇನೆ ಬುಧವಾರ ಬೆಳಗ್ಗೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹಿನ್ನೆಲೆ ವಿಮಾನ ಹಾರಾಟಗಳಲ್ಲಿ ವ್ಯತ್ಯಯ ಆಗಿದೆ. ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತದ 27 ವಿಮಾನ ನಿಲ್ದಾಣಗಳನ್ನು ಮೇ 10ರ ಶನಿವಾರ ಬೆಳಗ್ಗೆ 5.29ರ ವರೆಗೆ ಇದೀಗ ಬಂದ್‌ ಮಾಡಲಾಗಿದೆ.

27 airports closed till May 10 Know details

ಅಷ್ಟೇ ಅಲ್ಲದೆ, ಭಾರತೀಯ ವಿಮಾನಯಾನ ಸಂಸ್ಥೆಗಳು ಗುರುವಾರ ಒಟ್ಟು 430 ವಿಮಾನಗಳನ್ನು ರದ್ದುಗೊಳಿಸಿವೆ. ಇದು ದೇಶದ ಒಟ್ಟು ನಿಗದಿತ ವಿಮಾನಗಳ ಶೇಕಡಾ 3 ರಷ್ಟನ್ನು ಒಳಗೊಂಡಿದ್ದು, ಇವು ಇಂದು ಹಾರಾಟ ರದ್ದು ಮಾಡಿವೆ. ವಿಮಾನಗಳ ಹಾರಾಟದ ಮಾಹಿತಿಯನ್ನು ನೀಡುವ ಫ್ಲೈಟ್‌ರಾಡರ್ 24 ಪ್ರಕಾರ, ಪಾಕಿಸ್ತಾನ ಮತ್ತು ಭಾರತದ ಪಶ್ಚಿಮ ಭಾಗದ ಕಾಶ್ಮೀರ ಮತ್ತು ಗುಜರಾತ್ ನಡುವಿನ ವಾಯು ಪ್ರದೇಶದಲ್ಲಿ ಯಾವುದೇ ನಾಗರಿಕ ವಿಮಾನ ಸಂಚಾರ ಇರಲಿಲ್ಲ.

ಹೆಚ್ಚಿನ ವಿದೇಶಿ ವಿಮಾನಯಾನ ಸಂಸ್ಥೆಗಳು ಪಾಕಿಸ್ತಾನದ ವಾಯು ಪ್ರದೇಶವನ್ನು ಬಳಸುವುದನ್ನು ನಿಲ್ಲಿಸಲಾಗಿದೆ. ಪಾಕ್ ವಾಯುಪ್ರದೇಶದ ಬದಲಿಗೆ, ಮುಂಬೈ ಮತ್ತು ಅಹಮದಾಬಾದ್ ಮೂಲಕ ತಮ್ಮ ಮಾರ್ಗವನ್ನು ಬದಲಾಯಿಸಿವೆ ಎಂದು ತಿಳಿದುಬಂದಿದೆ.

ಎಲ್ಲೆಲ್ಲಿ ಬಂದ್‌?: ಶ್ರೀನಗರ, ಜಮ್ಮು, ಲೇಹ್, ಚಂಡೀಗಢ, ಅಮೃತಸರ, ಲೂಧಿಯಾನ, ಪಟಿಯಾಲ, ಬಟಿಂಡಾ, ಹಲ್ವಾರ, ಪಠಾಣ್‌ಕೋಟ್, ಭುಂಟರ್, ಶಿಮ್ಲಾ, ಗಗ್ಗಲ್, ಧರ್ಮಶಾಲಾ, ಕಿಶನ್‌ಗಢ, ಜೈಸಲ್ಮೇರ್, ಜೋಧ್‌ಪುರ, ಬಿಕಾನೇರ್, ಮುಂಡ್ರಾ, ಜಾಮ್‌ನಗರ, ರಾಜ್‌ಕೋಟ್, ಪೋರಬಂದರ್, ಕಾಂಡ್ಲಾ, ಕೇಶೋಡ್, ಭುಜ್, ಗ್ವಾಲಿಯರ್ ಮತ್ತು ಹಿಂಡನ್ ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಂದ ಈ ನಗರಗಳಿಗೆ ಆಗಮಿಸಬೇಕಿದ್ದ ವಿಮಾನಗಳ ಸಂಚಾರವನ್ನೂ ಕೂಡ ತಾತ್ಕಾಲಿಕಾವಾಗಿ ಬಂದ್‌ ಮಾಡಲಾಗಿದೆ. ವಿಮಾನ ನಿಲ್ದಾಣಗಳನ್ನು ಎಷ್ಟು ದಿನ ಬಂದ್‌ ಮಾಡಲಾಗುವುದು ಎಂಬುದನ್ನು ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿಲ್ಲ.

ಆದರೆ ಇಂಡಿಗೊ ಮಾತ್ರ ಮೇ 10ರ ವರೆಗೂ ದೇಶೀಯ ವಿಮಾನ ಸೇವೆ ಇರುವುದಿಲ್ಲಎಂದು ತಿಳಿಸಿದೆ. ಪ್ರಯಾಣಿಕರಿಗೆ ಟಿಕೆಟ್‌ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಹಲವು ವಿಮಾನಯಾನ ಸಂಸ್ಥೆಗಳು ಘೋಷಿಸಿವೆ. ಮುಂದಿನ ಸೂಚನೆ ಬರುವವರೆಗೂ ವಿಮಾನಯಾನ ಸೇವೆ ಇರುವುದಿಲ್ಲ. ಪ್ರಯಾಣಿಕರು ಪೂರ್ಣ ಮರುಪಾವತಿ ಪಡೆಯಬಹುದು, ಇಲ್ಲವೇ ಬದಲಿ ವಿಮಾನವನ್ನು ಆಯ್ಕೆ ಮಾಡಬಹುದು ಎಂದು ಎಂದು ಸ್ಪೈಸ್‌ ಜೆಟ್‌ ಘೋಷಿಸಿದೆ.

ಮಿಲಿಟರಿ ಚಾರ್ಟರ್‌ಗಳನ್ನು ಮಾತ್ರ ನಿರ್ವಹಿಸುವ ವಿಮಾನ ನಿಲ್ದಾಣಗಳನ್ನೂ ಸಹ ಬಂದ್‌ ಮಾಡಲಾಗಿದೆ. ಬುಧವಾರ ಸುಮಾರು 250 ವಿಮಾನಗಳು ರದ್ದಾಗಿದ್ದವು. ಏರ್‌ ಇಂಡಿಯಾವು ತನ್ನ ಎರಡು ಅಂತಾರಾಷ್ಟ್ರೀಯ ವಿಮಾನಗಳನ್ನು ಅಮೃತಸರಕ್ಕೆ ಹೋಗುವ ಮಾರ್ಗದಲ್ಲಿ ದೆಹಲಿಗೆ ತಿರುಗಿಸಿತು ಎಂದು ಹೇಳಿದೆ. ಅಮೇರಿಕನ್ ಏರ್ ಬುಧವಾರ ತನ್ನ ದೆಹಲಿ-ನ್ಯೂಯಾರ್ಕ್ ವಿಮಾನವನ್ನು ರದ್ದುಗೊಳಿಸಿತು.

ಭಾರತದ ಸಿಂಧೂರ್ ಕಾರ್ಯಾಚರಣೆ ನಂತರ ಪಾಕ್‌ನಲ್ಲಿ ಇಸ್ಲಾಮಾಬಾದ್ ಮತ್ತು ಲಾಹೋರ್‌ಗೆ ಹೋಗುವ ಎಲ್ಲಾ ವಿಮಾನಗಳನ್ನು ಕರಾಚಿ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಇದರಿಂದ ವಿಮಾನ ಕಾರ್ಯಾಚರಣೆಗಳ ಮೇಲೆ ತೀವ್ರ ಒತ್ತಡ ಉಂಟಾಯಿತು. ಬಳಿಕ ಕೆಲವು ಅಗತ್ಯ ವಿಮಾನಗಳನ್ನು ಹೊರತುಪಡಿಸಿ, ಸಂಪೂರ್ಣ ವಾಯು ಮಾರ್ಗವನ್ನು ಬಂದ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+