ಮಾರ್ಚ್ 2 ರವರೆಗೆ 25 ರೈಲುಗಳು ರದ್ದು: ಎಲ್ಲೆಲ್ಲಿ ಅನ್ನೋ ಮಾಹಿತಿ ಇಲ್ಲಿದೆ

ಪಾಟ್ನಾ ಡಿಸೆಂಬರ್ 3: ಡಿಸೆಂಬರ್ 1 ರಿಂದ ಮಾರ್ಚ್ 2ರವರೆಗೆ ಮಂಜು ಕವಿದ ವಾತಾವರಣದ ಹಿನ್ನೆಲೆಯಲ್ಲಿ ಕನಿಷ್ಠ 25 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ. ಈ ಬಗ್ಗೆ ಇಸಿಆರ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಬೀರೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ. ಹಾಗಾದರೆ ಯಾವೆಲ್ಲಾ ರೈಲುಗಳು ರದ್ದಾಗಲಿದೆ, ಎಷ್ಟು ದಿನ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಯಾಗ್‌ರಾಜ್ ರಾಮ್‌ಬಾಗ್-ಮುಜಾಫರ್‌ಪುರ ಎಕ್ಸ್‌ಪ್ರೆಸ್ (12537/12538) ಡಿಸೆಂಬರ್ 4 ರಿಂದ ಫೆಬ್ರವರಿ 28ರವರೆಗೆ ರದ್ದಾಗಲಿದೆ ಮತ್ತು ಅಮೃತಸರ-ಬನ್ಮಂಖಿ ಎಕ್ಸ್‌ಪ್ರೆಸ್ (14617/14618) ಡಿಸೆಂಬರ್ 1 ರಿಂದ ಫೆಬ್ರವರಿ 29ರವರೆಗೆ ರದ್ದಾಗಲಿದೆ.

25 trains canceled till March 2: Heres all the information

ಡಿಸೆಂಬರ್ 2 ರಿಂದ ಫೆಬ್ರವರಿ 29 ರವರೆಗೆ ಅಂಬಾಲಾ-ಬರೌನಿ ಎಕ್ಸ್‌ಪ್ರೆಸ್ (14523/14524), ಡಿಸೆಂಬರ್ 1 ರಿಂದ ಫೆಬ್ರವರಿ 29 ರವರೆಗೆ ಆನಂದ್ ವಿಹಾರ್-ಸೀತಾಮರ್ಹಿ ಎಕ್ಸ್‌ಪ್ರೆಸ್ (14005/14006), ಅಮೃತಸರ-ಜಯನಗರ ಎಕ್ಸ್‌ಪ್ರೆಸ್ (14673/14674) ಫೆಬ್ರವರಿ 29 ರವರೆಗೆ ರದ್ದಾದ ಇತರ ರೈಲುಗಳಾಗಿವೆ.

ಬೀರಂಗ್ನಾ ಲಕ್ಷ್ಮೀಬಾಯಿ ಝಾನ್ಸಿ-ಕೋಲ್ಕತ್ತಾ ಎಕ್ಸ್‌ಪ್ರೆಸ್ (24197/24198) ಡಿಸೆಂಬರ್ 2 ರಿಂದ ಫೆಬ್ರವರಿ 25 ರವರೆಗೆ, ನವದೆಹಲಿ-ಮಾಲ್ಡಾ ಟೌನ್ ಎಕ್ಸ್‌ಪ್ರೆಸ್ (14003/14004) ಡಿಸೆಂಬರ್ 3 ರಿಂದ ಮಾರ್ಚ್ 2 ರವರೆಗೆ, ಟಾಟಾ-ಅಮೃತಸರ ಎಕ್ಸ್‌ಪ್ರೆಸ್ (18103/1810) ಡಿಸೆಂಬರ್ 4 ರಿಂದ ಮಾರ್ಚ್ 1 ರವರೆಗೆ ಮತ್ತು ಅಮೃತಸರ-ಜಯನಗರ ವಿಶೇಷ (04651/04652) ಡಿಸೆಂಬರ್ 1 ರಿಂದ ಮಾರ್ಚ್ 1 ರವರೆಗೆ ರದ್ದಾಗಲಿದೆ.

ಅದೇ ರೀತಿ ಕಾಮಾಖ್ಯ-ಆನಂದ್ ವಿಹಾರ್ (15621/15622) ಡಿಸೆಂಬರ್ 7 ರಿಂದ ಮಾರ್ಚ್ 1 ರವರೆಗೆ ಚಲಿಸುವುದಿಲ್ಲ ಮತ್ತು ಹಟಿಯಾ-ಆನಂದ್ ವಿಹಾರ್ (12873/12874) ಡಿಸೆಂಬರ್ 4 ರಿಂದ ಮಾರ್ಚ್ 1 ರವರೆಗೆ ರದ್ದಾಗಲಿದೆ. ಡಿಸೆಂಬರ್ 4 ರಿಂದ ಫೆಬ್ರವರಿ 27 ರವರೆಗೆ ಸಂತ್ರಗಚಿ-ಆನಂದ್ ವಿಹಾರ್ (22857/22858) ಮತ್ತು ಡಿಸೆಂಬರ್ 5 ರಿಂದ ಫೆಬ್ರವರಿ 28 ರವರೆಗೆ ಕಾಮಾಖ್ಯ-ರಾಂಚಿ (15661/15662) ರದ್ದಾದ ಇತರ ರೈಲುಗಳಾಗಿವೆ.

25 trains canceled till March 2: Heres all the information

ಆದರೆ ಹೌರಾ-ಮಥುರಾ (12177/12178) ಸೇರಿದಂತೆ 22 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಕಡಿಮೆಗೊಳಿಸಲಾಗಿದೆ.

ನಾನಾ ದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ

ಡಿಸೆಂಬರ್ 1 ರಿಂದ ದೇಶಕ್ಕೆ ಭೇಟಿ ನೀಡುವ ಚೀನಾ ಮತ್ತು ಭಾರತೀಯ ನಾಗರಿಕರಿಗೆ ವೀಸಾ ಅಗತ್ಯತೆಗಳನ್ನು ರದ್ದುಗೊಳಿಸಲು ಮಲೇಷ್ಯಾ ಯೋಜಿಸಿದೆ. ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ತಮ್ಮ ಪಕ್ಷದ ಕಾಂಗ್ರೆಸ್‌ನಲ್ಲಿ ಮಾಡಿದ ಭಾಷಣದಲ್ಲಿ ಈ ಬದಲಾವಣೆಯನ್ನು ಘೋಷಿಸಿದರು.

ಚೈನೀಸ್ ಮತ್ತು ಭಾರತೀಯ ಪ್ರಜೆಗಳು ವೀಸಾ ಇಲ್ಲದೆ 30 ದಿನಗಳವರೆಗೆ ಮಲೇಷ್ಯಾದಲ್ಲಿ ಇರಲು ಸಾಧ್ಯವಾಗುತ್ತದೆ. ಜೊತೆಗೆ ಅವರು ಭದ್ರತಾ ತಪಾಸಣೆಗೆ ಒಳಪಟ್ಟಿರುತ್ತಾರೆ. ಈ ಕ್ರಮವು ಈ ದೇಶಗಳಿಂದ ಹೆಚ್ಚಿನ ಪ್ರವಾಸಿಗರು ಮತ್ತು ಹೂಡಿಕೆದಾರರನ್ನು ಆಕರ್ಷಿಸುತ್ತದೆ ಎಂದು ಮಲೇಷ್ಯಾ ಆಶಿಸಿದೆ. ಇನ್ನೂ ಮಲೇಷ್ಯಾ ಸೇರಿದಂತೆ ಆರು ದೇಶಗಳ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶವನ್ನು ಚೀನಾ ಘೋಷಿಸಿದೆ. ವಿರಾಮ, ವ್ಯಾಪಾರ ಮತ್ತು ಕುಟುಂಬ ಪ್ರಯಾಣಿಕರಿಗೆ 15 ದಿನಗಳವರೆಗೆ ಚೀನಾದಲ್ಲಿ ಉಳಿಯಲು ಅವಕಾಶ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+