Bank Holidays 2025: ಈ ವರ್ಷದ ಬ್ಯಾಂಕ್ ರಜೆ ದಿನಗಳ ಪಟ್ಟಿ
Bank Holidays 2025: 2024ರ ಕ್ಯಾಲೆಂಡರ್ ಮುಗಿದು 2025ರ ಹೊಸ ವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಈ ನಡುವೆಯೇ ವ್ಯಾವಹಾರಿಕ ವಿಚಾರಕ್ಕೆ ಬಂದರೆ ಇದೀಗ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವ ಪ್ರಕಾರ 2025ರ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಇಲ್ಲಿದೆ ನೀಡಲಾಗಿದೆ ಗಮನಿಸಿ.
2025 ಆರಂಭವಾಗುವ ಹೊತ್ತಿನಲ್ಲಿ ಇಡೀ ವರ್ಷದ ಬ್ಯಾಂಕ್ ರಜಾದಿನಗಳ ಕಡೆಗೆ ಗಮನ ಹರಿಸುವುದು ವಾಡಿಕೆ ಆಗಿದೆ. ಆರ್‌ಬಿಐ ಕೆಲವು ದಿನಗಳ ಹಿಂದೆಯೇ 2025ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಬ್ಯಾಂಕ್ ವಹಿವಾಟುಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳುವುದಕ್ಕಾಗಿ ರಜಾದಿನಗಳ ಬಗ್ಗೆಯೂ ಮುಂಚೆಯೇ ತಿಳಿದುಕೊಂಡಿರಬೇಕಾದ್ದು ಅವಶ್ಯವಾಗಿದೆ. ಆರ್‌ಬಿಐ ಕೇಂದ್ರ ಬ್ಯಾಂಕ್ ಅಧೀನದಲ್ಲಿ ವಾಣಿಜ್ಯ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳಂತಹ ವಿವಿಧ ರೀತಿಯ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ .

ರಾಜ್ಯ ಮತ್ತು ಕೇಂದ್ರ ಸರ್ಕಾರವು ಘೋಷಿಸಿದ ರಜಾದಿನಗಳು ಇದರಲ್ಲಿ ಸೇರಿವೆ. ರಾಜ್ಯ ಸರ್ಕಾರಿ ರಜಾದಿನಗಳು ನಿರ್ದಿಷ್ಟ ರಾಜ್ಯವನ್ನು ಮಾತ್ರ ಅವಲಂಬಿಸಿರುತ್ತವೆ. ಆದರೆ ಕೇಂದ್ರ ಸರ್ಕಾರದ ರಜಾದಿನಗಳು ಇಡೀ ದೇಶಕ್ಕೆ ಅನ್ವಯಿಸುತ್ತವೆ. ಅಲ್ಲದೆ, ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರದಂದು ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇದ್ದೇ ಇರುತ್ತದೆ.
2025ರ ಬ್ಯಾಂಕ್ ರಜಾ ದಿನಗಳ ಪಟ್ಟಿ
* 1 ಜನವರಿ 2025: ಹೊಸ ವರ್ಷ
* 6 ಜನವರಿ 2025: ಗುರು ಗೋಬಿಂದ್ ಸಿಂಗ್ ಜಯಂತಿ
* 12 ಜನವರಿ 2025: ಸ್ವಾಮಿ ವಿವೇಕಾನಂದ ಜಯಂತಿ
* 14 ಜನವರಿ 2025: ಮಕರ ಸಂಕ್ರಾಂತಿ, ಪೊಂಗಲ್
* 23 ಜನವರಿ 2025: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ- ತ್ರಿಪುರಾ, ಒಡಿಶಾ, ಪಂಜಾಬ್, ಸಿಕ್ಕಿಂ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ನವದೆಹಲಿ
* 26 ಜನವರಿ 2025: ಗಣರಾಜ್ಯೋತ್ಸವ
* 3 ಫೆಬ್ರವರಿ 2025: ವಸಂತ್ ಪಂಚಮಿ
* 12 ಫೆಬ್ರವರಿ 2025: ಗುರು ರವಿದಾಸ್ ಜಿ ಜಯಂತಿ
* 26 ಫೆಬ್ರವರಿ 2025: ಮಹಾಶಿವರಾತ್ರಿ
* 14 ಮಾರ್ಚ್ 2025: ಹೋಳಿ
* ಮಾರ್ಚ್ 30: ಯುಗಾದಿ
* 1 ಏಪ್ರಿಲ್ 2025: ಬ್ಯಾಂಕ್ ಖಾತೆಗಳ ವಾರ್ಷಿಕ ಮುಚ್ಚುವಿಕೆ
* 5 ಏಪ್ರಿಲ್ 2025: ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ
* 10 ಏಪ್ರಿಲ್ 2025: ಮಹಾವೀರ ಜಯಂತಿ
* 14 ಏಪ್ರಿಲ್ 2025: ತಮಿಳು ಹೊಸ ವರ್ಷ
* 7 ಮೇ 2025: ಗುರು ರವೀಂದ್ರನಾಥ ಠಾಕೂರರ ಜನ್ಮದಿನ
* 7 ಜೂನ್ 2025: ಈದ್-ಉಲ್-ಜುಹಾ (ಬಕ್ರೀದ್)
* 12 ಮೇ 2025: ಬುದ್ಧ ಪೂರ್ಣಿಮೆ
* 10 ಜೂನ್ 2025: ಶ್ರೀ ಗುರು ಅರ್ಜುನ್ ದೇವ್ ಜಿಯವರ ಹುತಾತ್ಮ ದಿನ
* 27 ಜೂನ್ 2025: ರಥಯಾತ್ರೆ
* 6 ಜುಲೈ 2025: ಮೊಹರಂ
* 9 ಆಗಸ್ಟ್ 2025: ರಕ್ಷಾ ಬಂಧನ
* 15 ಆಗಸ್ಟ್ 2025: ಸ್ವಾತಂತ್ರ್ಯ ದಿನಾಚರಣೆ
* 25 ಆಗಸ್ಟ್ 2025: ಶ್ರೀಮಂತ ಶಂಕರದೇವ ತಿಥಿ
* 26 ಆಗಸ್ಟ್ 2025: ವಿನಾಯಕ ಚತುರ್ಥಿ
* 5 ಸೆಪ್ಟೆಂಬರ್ 2025: ತಿರುವೋಣಂ
* 1 ಅಕ್ಟೋಬರ್ 2025: ಬ್ಯಾಂಕ್ ಖಾತೆಗಳ ಅರ್ಧ-ವಾರ್ಷಿಕ ಮುಚ್ಚುವಿಕೆ
* 2 ಅಕ್ಟೋಬರ್ 2025: ಗಾಂಧಿಜಯಂತಿ, ದಸರಾ
* 20 ಅಕ್ಟೋಬರ್ 2025: ದೀಪಾವಳಿ
* 22 ಅಕ್ಟೋಬರ್ 2025: ಗೋವರ್ಧನ ಪೂಜೆ
* 28 ಅಕ್ಟೋಬರ್ 2025: ಛತ್ ಪೂಜೆ
* 5 ನವೆಂಬರ್ 2025: ಗುರುನಾನಕ್ ಜಯಂತಿ
* 25 ಡಿಸೆಂಬರ್ 2025 ಕ್ರಿಸ್ಮಸ್ ದಿನ
ಕರ್ನಾಟಕದಲ್ಲಿ ಸಾರ್ವಜನಿಕ ರಜಾದಿನಗಳು
* ಜನವರಿ 14: ಮಕರ ಸಂಕ್ರಾಂತಿ
* ಫೆಬ್ರವರಿ 26: ಮಹಾಶಿವರಾತ್ರಿ
* ಮಾರ್ಚ್ 30: ಯುಗಾದಿ
* ಮಾರ್ಚ್ 31: ಈದ್ ಆಲ್ Fitr
* ಏಪ್ರಿಲ್ 10: ಮಹಾವೀರ ಜಯಂತಿ
* ಏಪ್ರಿಲ್ 14: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
* ಮೇ 1: ಕಾರ್ಮಿಕರ ದಿನಾಚರಣೆ
* ಜೂನ್ 6 & 7: ಈದ್ ಅಲ್ Adha
* ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
* ಆಗಸ್ಟ್ 27: ಗಣೇಶ ಚತುರ್ಥಿ
* ಸೆಪ್ಟೆಂಬರ್ 4 & 5: Mawlid
* ಅಕ್ಟೋಬರ್ 1: ಆಯುಧ ಪೂಜೆ, ಮಹಾನವಮಿ
* ಅಕ್ಟೋಬರ್ 2: ಗಾಂಧಿಜಯಂತಿ, ವಿಜಯದಶಮಿ
* ಅಕ್ಟೋಬರ್ 7: Pargat Diwas
* ಅಕ್ಟೋಬರ್ 20: ದೀಪಾವಳಿ
* ನವೆಂಬರ್ 1: ಕರ್ನಾಟಕ ರಾಜ್ಯೋತ್ಸವ
* ನವೆಂಬರ್ 8: ಕನಕದಾಸ ಜಯಂತಿ
* ಡಿಸೆಂಬರ್ 25: ಕ್ರಿಸ್‌ಮಸ್












Click it and Unblock the Notifications