Delhi Election 2025: ದೆಹಲಿ ಚುನಾವಣಾ ರಣಾಂಗಣಕ್ಕೆ ಇಳಿದ ಬಿಎಸ್‌ಪಿ, ಎಎಪಿಗೆ ಶಾಕ್!
ದೆಹಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಎಲ್ಲಾ ಪಕ್ಷಗಳು ಅಲರ್ಟ್ ಆಗಿವೆ. ಇನ್ನು ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಸ್ತಿತ್ವವನ್ನು ಎದುರಿಸುತ್ತಿರುವ. ಒಂದು ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರ ನಡೆಸಿದ್ದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಇದೀಗ ದೆಹಲಿ ವಿಧಾನಸಭೆ ಚುನಾವಣೆ ಅಖಾಡಕ್ಕೆ ಧುಮುಕುವ ಮುನ್ಸೂಚನೆ ಕೊಟ್ಟಿದೆ. ದೆಹಲಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ದೆಹಲಿ ವಿಧಾನಸಭೆಯು 70 ಸೀಟುಗಳನ್ನು ಹೊಂದಿದ್ದು, 70 ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಬಿಎಎಸ್‌ಪಿಯು ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಪಾಡಿಕೊಂಡಿದೆ.
ಜನವರಿ ಎರಡನೇ ವಾರದಲ್ಲಿ ಬಿಎಸ್‌ಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನು ದೆಹಲಿಯನ್ನು ಐದು ವಲಯಗಳನ್ನಾಗಿ ವಿಂಗಡಿಸಿಕೊಂಡಿದ್ದು. ವಲಯವಾರು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಚಿಂತನೆ ನಡೆದಿದೆ. ಇಲ್ಲಿ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳಲ್ಲೂ ಜಿದ್ದಾಜಿದ್ದಿನ ಪೈಪೋಟಿ ಇದೆ. ಆಮ್ ಆದ್ಮಿ ಪಾರ್ಟಿಯು ಇಲ್ಲಿ ಕಳೆದ ಎರಡು ಅವಧಿಯಿಂದ ಇಲ್ಲಿ ಅಧಿಕಾರದಲ್ಲಿ ಇದೆ. ಆದರೆ, ಆಮ್ ಆದ್ಮಿ ಪಾರ್ಟಿಗೆ ಈ ಬಾರಿ ಪೂರಕ ವಾತಾವರಣ ಇಲ್ಲ. ಮದ್ಯ ನೀತಿ ಹಗರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಅವರು ಸೇರಿದಂತೆ ಹಲವು ಪ್ರಮುಖ ಸಚಿವರೇ ಜೈಲು ಸೇರಿದ್ದರು. ಹೀಗಾಗಿ, ಎಎಪಿಗೆ ಹಿನ್ನಡೆ ಉಂಟಾಗಿದೆ.

ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಅಲ್ಲದೆ ಹಲವು ಸಮಸ್ಯೆಗಳಿವೆ. ಎಎಪಿ ಕಳೆದ ಮೂರು ವರ್ಷಗಳಿಂದ ಗವರ್ನರ್‌ನೊಂದಿಗೆ ಗುದ್ದಾಟ ಹಾಗೂ ಮದ್ಯ ನೀತಿ ಹಗರಣದ ಸಂಕಷ್ಟದಲ್ಲೇ ಕಳೆದಿದೆ. ಹೀಗಾಗಿ, ಕಳೆದ ಬಾರಿಯಂತೆ ದೆಹಲಿಯಲ್ಲಿ ಆಡಳಿತ ನೀಡಲು ಸಾಧ್ಯವಾಗಿಲ್ಲ. ಈ ಎಲ್ಲಾ ಕಾರಣಗಳಿಂದ ಎಎಪಿಗೆ ಈಗಾಗಲೇ ಈ ಚುನಾವಣೆ ಸವಾಲಾಗಿದೆ. ಇದರ ನಡುವೆ ಚುನಾವಣಾ ರಣಾಂಗಣಕ್ಕೆ ಬಿಎಸ್‌ಪಿ ಎಂಟ್ರಿ ಕೊಡ್ತಿದೆ. ಇದು ಎಎಪಿಗೆ ಡಬ್ಬಲ್ ಟೆನ್ಶನ್ ಮಾಡಿದೆ.
15ರ ಒಳಗೆ ಅಂತಿಮ ಪಟ್ಟಿ: ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಬಿಎಸ್‌ಪಿ ಜನವರಿ 15ರ ಒಳಗಾಗಿ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ. ಸ್ಥಳೀಯ ನಾಯಕರು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಅಭ್ಯರ್ಥಿಗಳ ಲಿಸ್ಟ್ ಕಳುಹಿಸಲಿದ್ದಾರೆ. ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಬಿಎಸ್‌ಪಿ ಪಕ್ಷವು 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೂ. ಸೊನ್ನೆ ಸುತ್ತಿತ್ತು. ಆದರೆ, ಮತ ವಿಭಜನಗೆ ಕಾರಣವಾಗಿತ್ತು. ಶೇಕಡಾ 0.71 ರಷ್ಟು ಮತಗಳನ್ನು ಈ ಪಕ್ಷ ಗಳಿಸಿತ್ತು. 2015, 2013 ಹಾಗೂ 2008 ರಲ್ಲಿಯೂ ಬಿಎಸ್‌ಪಿ ಪಕ್ಷ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿತ್ತು.
ವಿಶೇಷ ಕಾರ್ಯಸೂಚಿ: ದೆಹಲಿಯಲ್ಲಿ ವಿಶೇಷ ಕಾರ್ಯಸೂಚಿಯನ್ನು ಬಿಎಸ್‌ಪಿ ಅನುಸರಿಸುತ್ತಿದೆ ಎನ್ನಲಾಗಿದೆ. ದೆಹಲಿಯಲ್ಲಿ ಸಣ್ಣ ಸಣ್ಣ ಸಭೆಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಪಕ್ಷದ ಕಾರ್ಯಸೂಚಿ ಹಾಗೂ ಚುನಾವಣೆಗೆ ಯಾವ ಅಜೆಂಡ್ ಇರಬೇಕು ಎನ್ನುವ ಬಗ್ಗೆಯೂ ಪಕ್ಷದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.












Click it and Unblock the Notifications