ಕೇಂದ್ರ ಬಜೆಟ್ ಅತ್ಯದ್ಭುತವೆಂದ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್
ನವದೆಹಲಿ,ಫೆಬ್ರವರಿ 01:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ 2021 ಬಜೆಟ್ ಅತ್ಯದ್ಭುತವಾಗಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.
ಈ ಬಜೆಟ್ ಕೇವಲ ಕೊರೊನಾ ನಂತರದ ಅವಧಿಯಲ್ಲಿ ದೇಶದಲ್ಲಿ ಆರ್ಥಿಕತೆಗೆ ಶಕ್ತಿ ತುಂಬುವುದಲ್ಲದೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ದೇಶದ ಸದೃಢ ಬೆಳವಣಿಗೆಗೂ ಕಾರಣವಾಗಲಿದೆ ಎಂದರು.
ಈ ಬಜೆಟ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದಿರುವ ಕಾಂತ್ ವಾಸ್ತವ ಹಾಗೂ ಅಭಿವೃದ್ಧಿ ಪರ ಬಜೆಟ್ ಆಗಿದೆ ಎಂದು ಹೇಳಿದ್ದಾರೆ. ಆದಾಗ್ಯೂ ದೇಶದ ಜನರ ಮೇಲೆ ಹೊಸ ತೆರಿಗೆಯ ಹೊರೆ ಹೊರಿಸಲಾಗಿಲ್ಲ ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.

ಬಜೆಟ್ ಬಗ್ಗೆ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮಾತನಾಡಿ, ದೇಶದ ಜನರ ಆಶೋತ್ತರವನ್ನು ಈಡೇರಿಸುವ ನಿಟ್ಟಿನಲ್ಲಿ ಪೂರಕವಾದ ಬಜೆಟ್ ಇದು ಎಂದಿದ್ದಾರೆ.
ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಮೀಸಲು
- ರೈಲ್ವೇ ಇಲಾಖೆಗೆ 1,10,055 ಕೋಟಿ
- ಉತ್ಪಾದನಾ ವಲಯಕ್ಕೆ 1.94 ಕೋಟಿ ರೂಪಾಯಿ ಅನುದಾನ
- ಮೀನುಗಾರಿಕೆ: 2 ಸಾವಿರ ಕೋಟಿ
- ಸಂಶೋಧನಾ ವಲಯ: ರೂ.50 ಸಾವಿರ ಕೋಟಿ
- ರಕ್ಷಣಾ ಇಲಾಖೆ: ರೂ.4.78 ಲಕ್ಷ ಕೋಟಿ
- ಗೃಹ ಇಲಾಖೆ: ರೂ.1.66 ಕೋಟಿ
- ಕೃಷಿ ಕ್ಷೇತ್ರ: ಕೃಷಿ ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ
- ರೈಲ್ವೇ ವಲಯಕ್ಕೆ: 1,10,055 ಕೋಟಿ












Click it and Unblock the Notifications