2019 ರ ಟಾಪ್ 8 ಭ್ರಷ್ಟ ರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಯಾವ ಸ್ಥಾನ?

ನವದೆಹಲಿ, ನವೆಂಬರ್ 30: ಈ ವರ್ಷದ ಸಾಲಿನ ಟಾಪ್ 10 ಭ್ರಷ್ಟ ರಾಜ್ಯಗಳ ಪಟ್ಟಿ ಬಿಡುಗಡೆ ಆಗಿದ್ದು, ಕರ್ನಾಟಕ ಅಲ್ಪ ಸಮಾಧಾನಕರ ಸ್ಥಾನದಲ್ಲಿದೆ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಇಂಡಿಯಾ ಸಂಸ್ಥೆಯು ಸ್ಥಳೀಯರೊಂದಿಗೆ ಸೇರಿ ಮಾಡಿದ ಸರ್ವೆ ಪ್ರಕಾರ ಭಾರತದ ಅತ್ಯಂತ ಭ್ರಷ್ಟ ರಾಜ್ಯ ರಾಜಸ್ಥಾನವಂತೆ.

ಕರ್ನಾಟಕವು ಈ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 63% ಶೇಕಡಾ ಜನ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡುತ್ತಾರಂತೆ. ಕೇವಲ 9% ಜನ ಮಾತ್ರವೇ ಹಣ ಕೊಡದೇ ಕೆಲಸ ಮಾಡಿಸಿಕೊಂಡಿದ್ದಾರೆ. ಉಳಿದಂತೆ ಒಂದೆರಡು ಬಾರಿ ಲಂಚ ಕೊಟ್ಟಿರುವವರ ಸಂಖ್ಯೆ ಹೆಚ್ಚಿದೆ.

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ರಾಜಸ್ಥಾನ ಇದೆ. ಈ ರಾಜ್ಯದಲ್ಲಿ 78% ಜನ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಲಂಚ ಕೊಡುತ್ತಾರಂತೆ. ದೇಶದ ಅತಿ ಭ್ರಷ್ಟ ರಾಜ್ಯ ರಾಜಸ್ಥಾನ.

ಸುಧಾರಣೆ ಕಾಣದ ಬಿಹಾರ ರಾಜ್ಯ

ಸುಧಾರಣೆ ಕಾಣದ ಬಿಹಾರ ರಾಜ್ಯ

ಎರಡನೇ ಅತಿ ಭ್ರಷ್ಟ ರಾಜ್ಯ ಸ್ಥಾನ ಬಿಹಾರಕ್ಕೆ ಹೋಗಿದೆ. ಈ ರಾಜ್ಯವು ಹಲವು ವರ್ಷಗಳಿಂದ ಭ್ರಷ್ಟಾಚಾರದ ಪಟ್ಟಿಯಲ್ಲಿದೆ. ಯಾವುದೇ ಸರ್ಕಾರಗಳು ಬಂದರು ಹೆಚ್ಚಿನ ಬದಲಾವಣೆಗಳು ಆಗುತ್ತಿಲ್ಲ. ಇಲ್ಲಿ 75% ಜನ ಲಂಚ ಕೊಡುತ್ತಾರಂತೆ.

ಸಣ್ಣ ರಾಜ್ಯದಲ್ಲಿ ಇಷ್ಟೋಂದು ಭ್ರಷ್ಟಾಚಾರ!

ಸಣ್ಣ ರಾಜ್ಯದಲ್ಲಿ ಇಷ್ಟೋಂದು ಭ್ರಷ್ಟಾಚಾರ!

ಸಣ್ಣ ರಾಜ್ಯವಾದರೂ ಜಾರ್ಖಂಡ್‌ ಭ್ರಷ್ಟಾಚಾರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ 74% ಜನ ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡುತ್ತಾರೆಂದು ವರದಿ ಹೇಳಿದೆ.

ಯೋಗಿ ಸರ್ಕಾರಕ್ಕೆ ಎಷ್ಟನೇ ಸ್ಥಾನ?

ಯೋಗಿ ಸರ್ಕಾರಕ್ಕೆ ಎಷ್ಟನೇ ಸ್ಥಾನ?

ನಾಲ್ಕನೇ ಸ್ಥಾನವನ್ನು ಉತ್ತರ ಪ್ರದೇಶ ಪಡೆದುಕೊಂಡಿದೆ. ಈ ರಾಜ್ಯದಲ್ಲಿ ಸಹ 74% ಜನ ಲಂಚ ನೀಡಿಯೇ ಕೆಲಸ ಮಾಡಿಸಿಕೊಳ್ಳುತ್ತಾರಂತೆ. ಐದನೇ ಸ್ಥಾನದಲ್ಲಿ ಪಕ್ಕದ ತೆಲಂಗಾಣ ಇದೆ. ಮೊದಲ ಐದು ಸ್ಥಾನದಲ್ಲಿರುವ ದಕ್ಷಿಣದ ರಾಜ್ಯ ತೆಲಂಗಾಣವಾಗಿದೆ. ಈ ರಾಜ್ಯದಲ್ಲಿ 67% ಜನ ಲಂಚ ಕೊಡುತ್ತಾರಂತೆ.

ತಮಿಳುನಾಡಿಗೆ ಯಾವ ಸ್ಥಾನ?

ತಮಿಳುನಾಡಿಗೆ ಯಾವ ಸ್ಥಾನ?

ಪಂಜಾಬ್‌ ರಾಜ್ಯವು ಆರನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ 63% ಜನ ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡುತ್ತಾರೆ. ಏಳನೇ ಸ್ಥಾನದಲ್ಲಿ ಕರ್ನಾಟಕ ಸ್ಥಿತವಾಗಿದೆ. ಎಂಟನೇ ಸ್ಥಾನದಲ್ಲಿ ತಮಿಳುನಾಡು ರಾಜ್ಯವಿದೆ. ಈ ರಾಝ್ಯದಲ್ಲಿ 62% ಜನ ಲಂಚ ನೀಡುತ್ತಾರಂತೆ.

ಅತ್ಯಂತ ಕಡಿಮೆ ಭ್ರಷ್ಟ ರಾಜ್ಯ ಯಾವುದು?

ಅತ್ಯಂತ ಕಡಿಮೆ ಭ್ರಷ್ಟ ರಾಜ್ಯ ಯಾವುದು?

ಕೇರಳ ದೇಶದ ಅತ್ಯಂತ ಕಡಿಮೆ ಭ್ರಷ್ಟ ರಾಜ್ಯವೆಂದು ವರದಿ ಹೇಳಿದೆ. ಕೇರಳದಲ್ಲಿ ಕೇವಲ 10% ಮಂದಿ ಮಾತ್ರವೇ ಲಂಚ ಕೊಡುತ್ತಾರಂತೆ. ಮಧ್ಯಪ್ರದೇಶ, ಗೋವಾ, ಗುಜರಾತ್, ಪಶ್ಚಿಮಬಂಗಾಳ ರಾಜ್ಯಗಳಲ್ಲಿಯೂ ಸಹ ಹೆಚ್ಚು ಭ್ರಷ್ಟಾಚಾರ ನಡೆಯುವಿದಿಲ್ಲವೆಂದು ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+