ವೇಗದ ರೈಲು: ದೆಹಲಿ ಟು ಆಗ್ರಾ 90 ನಿಮಿಷ
ನವದೆಹಲಿ,ಜು. 4: ಪ್ರಧಾನಿ ನರೇಂದ್ರ ಮೋದಿಯವರ ಹೈ ಸ್ಪೀಡ್ ರೈಲಿನ ಕನಸು ನನಸಾಗುವ ಕಾಲ ಸಮೀಪಿಸಿದೆ. ನವೆಂಬರ್‌ನಿಂದ ದೆಹಲಿ-ಆಗ್ರಾ ರೈಲು ಪ್ರಯಾಣಕ್ಕೆ ಕೇವಲ 90 ನಿಮಿಷ ಸಾಕಾಗಲಿದೆ.
ಗಂಟೆಗೆ ಬರೋಬ್ಬರಿ 160 ಕಿ.ಮೀ. ಸಂಚರಿಸುವ ಸೆಮಿ ಹೈಸ್ಪೀಡ್ ರೈಲಿನ ಪ್ರಾಯೋಗಿಕ ಸಂಚಾರ ಗುರುವಾರ ಯಶಸ್ವಿಯಾಗಿ ಕೇವಲ 90 ನಿಮಿಷಗಳಲ್ಲಿ ರೈಲು ಆಗ್ರಾ ತಲುಪಿದ್ದು ದೇಶದ ಇತಿಹಾಸದಲ್ಲಿ ದಾಖಲಾಗಿದೆ. ದೆಹಲಿಯಿಂದ ಬೆಳಗ್ಗೆ 11.15ಕ್ಕೆ ಗಂಟೆಗೆ ಹೊರಟ ರೈಲು 200 ಕಿ.ಮೀ ದೂರದಲ್ಲಿರುವ ಆಗ್ರಾವನ್ನು 99 ನಿಮಿಷಗಳಲ್ಲಿ ತಲುಪಿದೆ.
ದೆಹಲಿಯ ನಿಜಾಮುದ್ದೀನ್ ಸ್ಟೇಷನ್‌ನಿಂದ ಹೋಲಿಸಿದರೆ ನಿಗದಿತ 90 ನಿಮಿಷದಲ್ಲಿ ಆಗ್ರಾ ತಲುಪಿದೆ. ಸಾಮಾನ್ಯವಾಗಿ ಇದೇ ಮಾರ್ಗದಲ್ಲಿ ಸಂಚರಿಸುವ ಉಳಿದ ರೈಲುಗಳು ಆಗ್ರಾ ತಲುಪಲು ಎರಡು ಗಂಟೆ ತಗೆದುಕೊಳ್ಳುತ್ತದೆ.[ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಬಳಸಿ ಎಸೆಯಬಲ್ಲ ಹಾಸಿಗೆ?]

ಪ್ರಸ್ತುತ ಗಂಟೆಗೆ 150 ಕಿ.ಮೀ. ವೇಗದಲ್ಲಿ ಓಡುತ್ತಿರುವ ದಿಲ್ಲಿ - ಭೋಪಾಲ್ ನಡುವೆ ಸಂಚರಿಸುವ ಶತಾಬ್ದಿ ರೈಲು ದೇಶದ ಅತ್ಯಂತ ವೇಗದ ರೈಲಾಗಿದೆ. ಚೀನಾ, ಇಟಲಿ,ಜರ್ಮನಿ, ಜಪಾನ್‌ಗೆ ಹೋಲಿಸಿದರೆ ಭಾರತದ ರೈಲಿನ ವೇಗ ತುಂಬಾ ಕಡಿಮೆ.












Click it and Unblock the Notifications