ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮು ಮತ್ತು ಕಾಶ್ಮೀರ, ಜೂನ್ 21: ಜಮ್ಮು ಮತ್ತು ಕಾಶ್ಮೀರದ ಸೋಪೊರೆಯಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ಸುಮಾರು 3 ಗಂಟೆಗಳ ಗುಂಡಿನ ಚಕಮಕಿಯ ನಂತರ ಉಗ್ರರನ್ನು ಹತ್ಯೆ ಮಾಡಲಾಗಿದೆ.

ಬುಧವಾರ ಮುಂಜಾನೆ ಭದ್ರತಾ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ಆರಂಭಿಸುವುದರೊಂದಿಗೆ ಈ ಸಂಘರ್ಷ ಆರಂಭವಾಗಿದೆ. ನಂತರ ಉಗ್ರರ ಮೇಲೆ ತಾವೂ ಗುಂಡಿನ ದಾಳಿ ಆರಂಭಿಸಿ ಸೇನಾಪಡೆಗಳು ಉಗ್ರರನ್ನು ಹೊಡೆದುರುಳಿಸಿವೆ.

 2 terrorists gunned down in Sopore encounter, J&K

ಸಾವಿಗೀಡಾದ ಉಗ್ರರು ಝೈಂಗೀರ್ ಪ್ರದೇಶದವರು ಎನ್ನಲಾಗಿದ್ದು ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಘಟನೆಯಲ್ಲಿ ಅದೃಷ್ಟಾವಶಾತ್ ಭಾರತೀಯ ಸೈನಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಈ ಘಟನೆಗೂ ಮೊದಲು ಟ್ರಾಲ್ ಭಾಗದಲ್ಲಿ ಸಿಆರ್'ಪಿಎಫ್ ನ 180ನೇ ಬೆಟಾಲಿಯನ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+