ಜಮ್ಮು ಕಾಶ್ಮೀರದಲ್ಲಿ ಪೊಲೀಸರ ಮೇಲೆ ಉಗ್ರರ ದಾಳಿ: ಇಬ್ಬರು ಸಿಬ್ಬಂದಿ ಬಲಿ
ಪುಲ್ವಾಲ, ಜೂನ್ 12: ಜಮ್ಮು ಕಾಶ್ಮೀರದ ಪುಲ್ವಾಲದ ಪೊಲೀಸ್ ಗಾರ್ಡ್ ಪೋಸ್ಟ್ ವೊಂದರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಮೃತರಾಗಿದ್ದಾರೆ.
ಇಂದು(ಜೂನ್ 12) ಬೆಳಗ್ಗಿನ ಜಾವ ನಡೆದ ಘಟನೆಯಲ್ಲಿ ಮೂವರು ಪೊಲೀಸರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 3-4 ಭಯೋತ್ಪಾದಕರು ಪೊಲೀಸ್ ಗಾರ್ಡ್ ಪೋಸ್ಟ್ ಬಳಿ ಹಠಾತ್ ದಾಳಿ ಆರಂಭಿಸಿಸದ್ದು, ಯಾವುದೇ ಮುನ್ಸೂಚನೆ ಇಲ್ಲದ ಕಾರಣ ತಕ್ಷಣ ಪ್ರತಿದಾಳಿ ನಡೆಸುವುದಕ್ಕೆ ಪೊಲೀಸರಿಗೆ ಸಾಧ್ಯವಾಗಿಲ್ಲ.

ಕೆಲಹೊತ್ತಿನ ಬಳಿಕ ಚೇತರಿಸಿಕೊಂಡು ಪೊಲೀಸರು ಪ್ರತಿದಾಳಿ ನಡೆಸಿದರಾದರೂ ಭಯೋತ್ಪಾದಕರು ಘಟನೆಯ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ 10 ಸಿಆರ್ ಪಿಎಫ್ ಯೋಧರಿಗೆ ಸಹ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆ ಬೆಳಗ್ಗಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.












Click it and Unblock the Notifications