ಡಿಆರ್‌ಡಿಒ ನ ಆಂಟಿ ಕೋವಿಡ್‌ ಔಷಧ ಮಾರುಕಟ್ಟೆಗೆ: ಡಾ. ರೆಡ್ಡಿ'ಸ್ ಲ್ಯಾಬೊರೇಟರೀಸ್ ಘೋಷಣೆ

ನವದೆಹಲಿ, ಜೂ.28: ಕೊರೊನಾ ಸೋಂಕಿನಿಂದ ಚೇತರಿಕೆಯ ವೇಗವನ್ನು ಹೆಚ್ಚಿಸುವ ಮತ್ತು ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಔಷಧ ತಯಾರಕ ಸಂಸ್ಥೆ ಡಾ. ರೆಡ್ಡಿ'ಸ್ ಲ್ಯಾಬೊರೇಟರೀಸ್ ಪ್ರಕಟಿಸಿದೆ.

2-ಡಿಜಿ ಔಷಧಿಗಳ ಕ್ಲಿನಿಕಲ್ ಪ್ರಯೋಗದಲ್ಲಿ ಈ ಔಷಧಿಯು ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.

ಕೊರೊನಾ ಎರಡನೇ ಅಲೆಯ ಈ ತೀವ್ರತೆಯ ಮಧ್ಯೆ ಔಷಧ ತಯಾರಕ ಸಂಸ್ಥೆ ಡಾ. ರೆಡ್ಡಿ'ಸ್ ಲ್ಯಾಬೊರೇಟರೀಸ್ 2-ಡಿಜಿ ಔಷಧಿಯು ಇನ್ನು ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಘೋಷಣೆ ಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

 ಈ ಔಷಧಿ ತಯಾರಕರು ಯಾರು?

ಈ ಔಷಧಿ ತಯಾರಕರು ಯಾರು?

ಈ ಔಷಧಿಯನ್ನು ಹೈದರಾಬಾದ್‌ನ ಡಾ. ರೆಡ್ಡಿ'ಸ್ ಲ್ಯಾಬೊರೇಟರೀಸ್ (ಡಿಆರ್‌ಎಲ್) ಸಹಯೋಗದೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯೋಗಾಲಯವಾದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (ಐಎನ್‌ಎಂಎಎಸ್) ಅಭಿವೃದ್ಧಿಪಡಿಸಿದೆ.

 ಡಿಆರ್‌ಡಿಒ ಆಂಟಿ-ಕೋವಿಡ್ ಔಷಧಿ: ಎಷ್ಟು ಪರಿಣಾಮಕಾರಿ?

ಡಿಆರ್‌ಡಿಒ ಆಂಟಿ-ಕೋವಿಡ್ ಔಷಧಿ: ಎಷ್ಟು ಪರಿಣಾಮಕಾರಿ?

ಕೋವಿಡ್‌ ಸಂದರ್ಭದಲ್ಲಿ ಹೊಸ ಭರವಷೆಯಾಗಿರುವ ಈ 2-ಡಿಜಿ ಔಷಧವು ಪುಡಿ ರೂಪದಲ್ಲಿ ಲಭ್ಯವಾಗಲಿದ್ದು, ಅದನ್ನು ನೀರಿನಲ್ಲಿ ಹಾಕಿ ಸೇವಿಸಬೇಕು. ಔಷಧವು ಕೋವಿಡ್‌ ವೈರಸ್-ಸೋಂಕಿತ ಕೋಶಗಳಲ್ಲಿ ಸಂಗ್ರಹಗೊಂಡು, ವೈರಸ್‌ ಬೆಳವಣಿಗೆಯನ್ನು ತಡೆಯುತ್ತದೆ. ಈ ಔಷಧಿಯು ವೈರಸ್‌ ಹೆಚ್ಚಳವಾಗುವುದನ್ನು ತಡೆಯುತ್ತದೆ.

 ಡಿಆರ್‌ಡಿಒ ಆಂಟಿ-ಕೋವಿಡ್ ಔಷಧ ಬೆಲೆ ಎಷ್ಟು?

ಡಿಆರ್‌ಡಿಒ ಆಂಟಿ-ಕೋವಿಡ್ ಔಷಧ ಬೆಲೆ ಎಷ್ಟು?

ಪ್ರತಿ ಡಬ್ಬ ಔಷಧಿಗೆ ಗರಿಷ್ಠ ಚಿಲ್ಲರೆ ದರವನ್ನು (ಎಂಆರ್‌ಪಿ) ರೂ. 990 ಎಂದು ನಿಗದಿಪಡಿಸಲಾಗಿದೆ. ಸರ್ಕಾರಿ ಸಂಸ್ಥೆಗಳಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಸದ್ಯಕ್ಕೆ ಔಷಧವು ಮಹಾನಗರಗಳು ಮತ್ತು ಶ್ರೇಣಿ 1 ನಗರಗಳಲ್ಲಿನ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ. ಇನ್ನು ಶೀಘ್ರದಲ್ಲೇ ಭಾರತದ ಉಳಿದ ಭಾಗಗಳಲ್ಲಿಯೂ ಲಭ್ಯವಾಗಲಿದೆ.

 ಕೋವಿಡ್‌ ರೂಪಾಂತರಗಳ ವಿರುದ್ದ ಈ ಔಷಧಿ ಪರಿಣಾಮವೇನು?

ಕೋವಿಡ್‌ ರೂಪಾಂತರಗಳ ವಿರುದ್ದ ಈ ಔಷಧಿ ಪರಿಣಾಮವೇನು?

ಕ್ಲಿನಿಕಲ್ ಪ್ರಯೋಗಗಳ ಪ್ರಕಾರ, ಈ ಔಷಧಿಯು ವೈರಸ್‌ ಹೆಚ್ಚಳವಾಗುವುದನ್ನು ತಡೆಯುತ್ತದೆ ಎಂದು ತಿಳಿದು ಬಂದಿದೆ. ಹಾಗೆಯೇ ಈ ಔಷಧವು ಯಾವುದೇ ರೂಪಾಂತರವನ್ನು ಗುಣಪಡಿಸುವ ಶಕ್ತಿ ಇದೆ ಎಂಬುವುದು ಕೂಡಾ ತಿಳಿದು ಬಂದಿದೆ ಎಂದು ವರದಿಯಾಗಿದೆ. ಎಲ್ಲಾ ರೂಪಾಂತರಗಳ ವಿರುದ್ದ ಈ ಔಷಧಿಯು ಪರಿಣಾಮಕಾರಿ ಎಂದು ಹೇಳಲಾಗಿದೆ.

 ಗೇಮ್ ಚೇಂಜರ್‌ ಆಗುತ್ತಾ ಡಿಆರ್‌ಡಿಒ ಆಂಟಿ-ಕೋವಿಡ್ ಔಷಧಿ?

ಗೇಮ್ ಚೇಂಜರ್‌ ಆಗುತ್ತಾ ಡಿಆರ್‌ಡಿಒ ಆಂಟಿ-ಕೋವಿಡ್ ಔಷಧಿ?

ಡಿಆರ್‌ಡಿಒನ ಆಂಟಿ-ಕೋವಿಡ್ ಔಷಧವು ಗೇಮ್ ಚೇಂಜರ್ ಆಗಿ ಪರಿಗಣಿಸಲಾಗುತ್ತಿದೆ. ಏಕೆಂದರೆ ಈ ಔಷಧಿಯು ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವ ಔಷಧಿಯಾಗಿದೆ. ಹಾಗೆಯೇ ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುವ ಔಷಧಿ ಇದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಆರ್‌ಡಿಒ, "2-ಡಿಜಿ ಗಮನಾರ್ಹವಾಗಿ ಹೆಚ್ಚಿನ ರೋಗಿಗಳಲ್ಲಿ ರೋಗಲಕ್ಷಣವನ್ನು ಸುಧಾರಿಸಿದೆ. ಈ ಔಷಧಿ ಪಡೆದವರು ಪೂರಕ ಆಮ್ಲಜನಕ ಅವಲಂಬನೆಯಿಂದ ಮುಕ್ತರಾಗಿದ್ದಾರೆ. ಇದು ಆಮ್ಲಜನಕ ಚಿಕಿತ್ಸೆ / ಅವಲಂಬನೆಯನ್ನು ಕಡಿಮೆ ಮಾಡಲಿದೆ. 65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ರೋಗಿಗಳಲ್ಲಿ ಈ ಬದಲಾವಣೆ ಕಂಡು ಬಂದಿದೆ," ಎಂದು ತಿಳಿಸಿದೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+