Get Updates
Get notified of breaking news, exclusive insights, and must-see stories!

ದೇಶದ ವಿವಿಧೆಡೆ 2 ಬಿಎಚ್‌ಕೆ ಮನೆ ಬಾಡಿಗೆ ಏರಿಕೆ, ಎಲ್ಲಿ ಎಷ್ಟು ತಿಳಿಯಿರಿ

1,000 ಚದರ ಅಡಿ ವಿಸ್ತೀರ್ಣದ 2 ಬಿಎಚ್‌ಕೆ ಫ್ಲಾಟ್‌ಗಳಿಗೆ ಮಾಸಿಕ ಬಾಡಿಗೆಗಳು 2019 ರಿಂದ 2022 ರವರೆಗೆ 7 ಪ್ರಮುಖ ನಗರಗಳಲ್ಲಿ 23% ರಷ್ಟು ಹೆಚ್ಚಾಗಿದೆ

ನವದೆಹಲಿ, ಫೆಬವರಿ 13: ದೇಶಾದ್ಯಂತ ಫ್ಲಾಟ್‌ಗಳ ಬಾಡಿಗೆ ಮನೆ ದರಗಳು ಹೆಚ್ಚಾಗಿವೆ. ಇದು ಪ್ರದೇಶವಾರು ಏರಿಕೆ ಕಂಡಿದ್ದು, ಹೆಚ್ಚುತ್ತಿರುವ ಬೆಲೆಗಳ ಪರಿಣಾಮವಾಗಿದೆ.

1,000 ಚದರ ಅಡಿ ವಿಸ್ತೀರ್ಣದ 2 ಬಿಎಚ್‌ಕೆ ಫ್ಲಾಟ್‌ಗಳಿಗೆ ಮಾಸಿಕ ಬಾಡಿಗೆಗಳು 2019 ರಿಂದ 2022 ರವರೆಗೆ 7 ಪ್ರಮುಖ ನಗರಗಳಲ್ಲಿ 23% ರಷ್ಟು ಹೆಚ್ಚಾಗಿದೆ ಎಂದು ಪ್ರಾಪರ್ಟಿ ಸಲಹೆಗಾರ ಸಂಸ್ಥೆ ಅನರಾಕ್ ವರದಿಯಲ್ಲಿ ತಿಳಿಸಿದೆ.

ನೋಯ್ಡಾದಿಂದ ಬಾಡಿಗೆ ದರವವು ಅತಿ ಹೆಚ್ಚು ಏರಿಕೆಯಾಗಿದೆ ಎಂದು ಇದು ತಿಳಿಸಿದೆ. ನೋಯ್ಡಾದ ಸೆಕ್ಟರ್ 150 ಬಾಡಿಗೆ ಬೆಲೆಗಳು 23% ರಷ್ಟು ಏರಿಕೆ ಕಂಡಿದೆ. ಈ ಪ್ರದೇಶದಲ್ಲಿ ಸರಾಸರಿ 1000 ಚದರ ಅಡಿ 2 ಬಿಎಚ್‌ಕೆ ಫ್ಲಾಟ್‌ಗೆ ಬಾಡಿಗೆ 15,500 ರೂಪಾಯಿಯಿಂದ 19,000 ರೂ.ಗೆ ಏರಿದೆ.

ಬಾಡಿಗೆ ಏರಿಕೆ ಕಂಡಿರುವ ದೆಹಲಿ ಎನ್‌ಸಿಆರ್ ಪ್ರದೇಶದ ಇತರ ಸ್ಥಳಗಳೆಂದರೆ ಸೋಹ್ನಾ ರಸ್ತೆ, ಗುರುಗ್ರಾಮ್ ಮತ್ತು ದ್ವಾರಕಾ ಪ್ರದೇಶದಲ್ಲಿ ಬಾಡಿಗೆ ಮನೆಗಳ ಬೆಲೆ ಗಮನಾರ್ಹ ಏರಿಕೆ ಕಂಡುಬಂದಿದೆ. ಗುರ್‌ಗಾಂವ್‌ನ ಸೊಹ್ನಾ ರಸ್ತೆ ಪ್ರದೇಶದಲ್ಲಿನ ಬಾಡಿಗೆ ದರ ಶೇಕಡಾ 14 ರಷ್ಟು ಏರಿಕೆಯಾಗಿದೆ. ಇದು 2019 ರಿಂದ ತಿಂಗಳಿಗೆ ಸರಾಸರಿ 25,000 ರಿಂದ 28,500 ರೂ.ಗೆ ಏರಿಕೆಯಾಗಿದೆ. ದೆಹಲಿಯ ದ್ವಾರಕಾ ಪ್ರದೇಶದಲ್ಲಿ, 1000 ಚದರ ಅಡಿ ವಿಸ್ತೀರ್ಣದ 2 ಬಿಎಚ್‌ಕೆ ಫ್ಲಾಟ್‌ನ ಸರಾಸರಿ ಬಾಡಿಗೆ 13 ಪ್ರತಿಶತ ಹೆಚ್ಚಳವಾಗಿದ್ದು 19,500 ರೂ. 22,000ಕ್ಕೆ ಏರಿಕೆ ಕಂಡಿದೆ.

2022 ರಲ್ಲಿ ಬಾಡಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಅನರಾಕ್ ಗ್ರೂಪ್‌ನ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ. ಹೈಬ್ರಿಡ್ ಮೋಡ್ ಸೇರಿದಂತೆ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸುವುದರೊಂದಿಗೆ ಎರಡು ಕೋವಿಡ್ -19 ಅಲೆಗಳ ಸಮಯದಲ್ಲಿ ಕುಸಿದ ಮನೆ ಬಾಡಿಗೆ ಈಗ 7 ನಗರಗಳಲ್ಲಿ ಈಗ ಬೇಡಿಕೆ ಹೆಚ್ಚುತ್ತಿದೆ. 2023ರಲ್ಲಿ ಬಾಡಿಗೆ ಬೇಡಿಕೆ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು.

ಹೈದರಾಬಾದ್‌ನಲ್ಲಿ ಬಾಡಿಗೆ ಹೆಚ್ಚಳ

ಹೈದರಾಬಾದ್‌ನಲ್ಲಿ ಬಾಡಿಗೆ ಹೆಚ್ಚಳ

ಇದಲ್ಲದೆ ದೇಶದ ಇತರ ಬೇಡಿಕೆ ನಗರಗಳಾದ ಹೈದರಾಬಾದ್‌ನ ಹೈಟೆಕ್ ಸಿಟಿ ಬಾಡಿಗೆ ಶೇಕಡಾ 7ರಷ್ಟು ಏರಿಕೆ ಕಂಡಿದೆ. ಇಲ್ಲಿನ ಗಚಿಬೌಲಿ ಪ್ರದೇಶದಲ್ಲಿ ಬಾಡಿಗೆ ಶೇಕಡಾ 6ರಷ್ಟು ಏರಿಕೆಯಾಗಿದೆ. ಮುಂಬೈ ಮಹಾನಗರ ಪ್ರದೇಶದ ಚೆಂಬೂರ್ (ಎಂಎಂಆರ್‌), 13 ಪ್ರತಿಶತದಷ್ಟು ಸರಾಸರಿ ಬಾಡಿಗೆ 45,000 ರಿಂದ 51,000ಕ್ಕೆ ಏರಿದೆ. ಕೋಲ್ಕತ್ತಾದಲ್ಲಿ ಸರಾಸರಿ ಬಾಡಿಗೆ ಶೇಕಡಾ 11 ರಿಂದ 16 ರವರೆಗೆ ಏರಿದೆ. ವರದಿಯ ಪ್ರಕಾರ ಬೆಂಗಳೂರಿನ ಜನಪ್ರಿಯ ಪ್ರದೇಶಗಳಾದ ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್‌ಗಳಲ್ಲಿ ಸರಾಸರಿ ಬಾಡಿಗೆ ಕ್ರಮವಾಗಿ 14 ಮತ್ತು 18 ರಷ್ಟು ಏರಿಕೆಯಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಹೆಚ್ಚು ಅಗ್ಗ

ಎಲೆಕ್ಟ್ರಾನಿಕ್ ಸಿಟಿ ಹೆಚ್ಚು ಅಗ್ಗ

ಅದ್ಯಾಗೂ ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆಗೆ ಮನೆಗಳು ಸಿಗುವ ಪ್ರದೇಶಗಳು ಇಂತಿವೆ. ಬೆಂಗಳೂರಿನ ಇತರ ಪ್ರಮುಖ ಸ್ಥಳಗಳಿಗೆ ಹೋಲಿಸಿದರೆ ಎಲೆಕ್ಟ್ರಾನಿಕ್ ಸಿಟಿ ಹೆಚ್ಚು ಅಗ್ಗವಾಗಿದೆ. ಇದು ಬಜೆಟ್ ಸ್ನೇಹಿ ಆಯ್ಕೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆಗೆ ಇರುವ ಎಲ್ಲಾ ಮನೆಗಳ ಪೈಕೆ ಸರಿಸುಮಾರು ಶೇ 34ರಷ್ಟು ಮನೆಗಳು ರೂ 5000 ರಿಂದ 10,000ದ ವರೆಗೂ ಲಭ್ಯವಿದೆ.

ಕನಕಪುರ ರಸ್ತೆ ಬೆಲೆ ರೂ. 5000 ರಿಂದ 10000 ಬಾಡಿಗೆ

ಕನಕಪುರ ರಸ್ತೆ ಬೆಲೆ ರೂ. 5000 ರಿಂದ 10000 ಬಾಡಿಗೆ

ಕನಕಪುರ ರಸ್ತೆಯು ಭಾರತದ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಪ್ರಮುಖ ವಸತಿ ಮತ್ತು ವಾಣಿಜ್ಯ ಪ್ರದೇಶವಾಗಿದೆ. ಕನಕಪುರ ರಸ್ತೆಯಲ್ಲಿ ಬಾಡಿಗೆಗೆ ಲಭ್ಯವಿರುವ ಶೇ.15ರಷ್ಟು ಮನೆಗಳ ಬೆಲೆ ರೂ. 5000 ರಿಂದ 10000ರಷ್ಟಿದೆ. ಶೇ 13ರಷ್ಟು ಮನೆಗಳು 10000ದಿಂದ 15000 ರಷ್ಟಿದೆ. ಹೊಸಕೋಟೆಯು ಭಾರತದ ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಪಟ್ಟಣವಾಗಿದೆ. ಹೊಸಕೋಟೆಯಲ್ಲಿ ಸುಮಾರು ಅರ್ಧದಷ್ಟು (46%) ಮನೆಗಳು ಬಾಡಿಗೆಗೆ ರೂ. 5,000 ರಿಂದ 10,000ರಷ್ಟಿದೆ. ಆದರೆ ಶೇ 36ರಷ್ಟು ಮನೆಗಳು ರೂ.10,000 ರಿಂದ 15,000 ವರೆಗೆ ಇರುತ್ತದೆ.

ಬಿಟಿಎಂ ಲೇಔಟ್‌ನಲ್ಲಿ 10000ದಿಂದ ರೂ. 15000 ಬಾಡಿಗೆ

ಬಿಟಿಎಂ ಲೇಔಟ್‌ನಲ್ಲಿ 10000ದಿಂದ ರೂ. 15000 ಬಾಡಿಗೆ

ಬಿಟಿಎಂ ಲೇಔಟ್ ದಕ್ಷಿಣ ಬೆಂಗಳೂರಿನಲ್ಲಿ ನೆಲೆಗೊಂಡಿರುವ ವಸತಿ ಮತ್ತು ವಾಣಿಜ್ಯ ಪ್ರದೇಶವಾಗಿದೆ. ಇಲ್ಲಿ ರೂ. 10000ದಿಂದ ರೂ. 15000ವರಗಿದೆ. ಶೇ 21 ಮನೆಗಳು 5000 ರೂ.ದಿಂದ 10000 ರೂಪಾಯಿವರಗೆ ಇದೆ. ಹೆಬ್ಬಾಳವು ಬೆಂಗಳೂರಿನ ಉತ್ತರ ಭಾಗದಲ್ಲಿರುವ ಜನಪ್ರಿಯ ಪ್ರದೇಶವಾಗಿದೆ. ಹೆಬ್ಬಾಳದಲ್ಲಿ ಸುಮಾರು ಶೇ 16 ಬಾಡಿಗೆ ಮನೆಗಳು ರೂ. 10000 ದಿಂದ 15000 ದವರೆಗಿದೆ. ಶೇ14 ಮನೆಗಳು ರೂ. 5000 ದಿಂದ 10000 ರದವರೆಗೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+