ನೂತನ ಸಂಸತ್ ಉದ್ಘಾಟನೆ ಸಮಾರಂಭ ಬಹಿಷ್ಕರಿಸಿದ 19 ವಿರೋಧ ಪಕ್ಷಗಳು: ಪ್ರಜಾಪ್ರಭುತ್ವಕ್ಕೆ ಅಗ್ನಿ ಪರೀಕ್ಷೆಯ ಕಾಲ?

ಕಾಂಗ್ರೆಸ್ ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸೇರಿದಂತೆ ಹತ್ತೊಂಬತ್ತು ವಿರೋಧ ಪಕ್ಷಗಳು ನೂತನ ಸಂಸತ್ ಉದ್ಘಾಟನೆ ಸಮಾರಂಭವನ್ನು ಬಹಿಸ್ಕರಿಸಿವೆ. ಈ ವಾರಾಂತ್ಯದಲ್ಲಿ ದೆಹಲಿಯಲ್ಲಿ ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೇರವೇರಿಸಲಿದ್ದಾರೆ.

ಈ ವಿಚಾರವಾಗಿ ಪತ್ರ ಬರೆದಿರುವ ವಿರೋಧ ಪಕ್ಷಗಳು, 'ಪ್ರಜಾಪ್ರಭುತ್ವದ ಆತ್ಮವೇ ನಾಶವಾದಾಗ, ನಾವು ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯವನ್ನು ಕಾಣಲಾರೆವು. ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ನಮ್ಮ ಸಾಮೂಹಿಕ ನಿರ್ಧಾರವನ್ನು ನಾವು ಪ್ರಕಟಿಸುತ್ತೇವೆ' ಎಂದು ತಿಳಿಸಿವೆ.

19 opposition parties boycotted the inauguration ceremony of the new parliament

'ನಾವು ಹೋರಾಟವನ್ನು ಮುಂದುವರೆಸುತ್ತೇವೆ. ಈ ಸರ್ವಾಧಿಕಾರಿ ಪ್ರಧಾನ ಮಂತ್ರಿ ಮತ್ತು ಅವರ ಸರ್ಕಾರದ ವಿರುದ್ಧವಾಗಿ ನಾವು ಹೋರಾಟ ನಡೆಸುತ್ತೇವೆ. ನಮ್ಮ ಸಂದೇಶವನ್ನು ನೇರವಾಗಿ ಭಾರತದ ಜನರಿಗೆ ಕೊಂಡೊಯ್ಯುತ್ತೇವೆ' ಎಂದು ಹೇಳಿವೆ.

'ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ಕಟ್ಟಡವನ್ನು ಸ್ವತಃ ಉದ್ಘಾಟಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣವಾಗಿ ಬದಿಗಿಟ್ಟಿದ್ದಾರೆ. ಇದು ಘೋರ ಅವಮಾನ ಮಾತ್ರವಲ್ಲದೆ ನಮ್ಮ ಪ್ರಜಾಪ್ರಭುತ್ವದ ಮೇಲೆ ನೇರ ಆಕ್ರಮಣವಾಗಿದೆ' ಎಂದು ತಿಳಿಸಿವೆ.

ಸಂವಿಧಾನದ 79 ನೇ ವಿಧಿಯನ್ನು ಉಲ್ಲೇಖಿಸಿರುವ ವಿರೋಧ ಪಕ್ಷಗಳು ಮುರ್ಮು 'ರಾಷ್ಟ್ರದ ಮುಖ್ಯಸ್ಥೆ ಮಾತ್ರವಲ್ಲದೆ ಸಂಸತ್ತಿನ ಅವಿಭಾಜ್ಯ ಅಂಗ' ಎಂದು ಹೇಳಿವೆ.

19 opposition parties boycotted the inauguration ceremony of the new parliament

'ಅಧ್ಯಕ್ಷರಿಲ್ಲದೆ ಸಂಸತ್ತು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದರೂ, ಅವರು ಇಲ್ಲದೆ ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಲು ಪ್ರಧಾನಿ ನಿರ್ಧರಿಸಿದ್ದಾರೆ' ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

'ಮೋದಿ ಉಪನಾಮ' ಪ್ರಕರಣದಲ್ಲಿ ದೋಷಾರೋಪಣೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಹೊರಹಾಕಲಾಗಿದೆ. ಅಂದಿನಿಂದ ಬಿಜೆಪಿ ವಿರುದ್ಧ ಸ್ಥಿರವಾಗಿ ಒಗ್ಗೂಡಿರುವ ಪ್ರತಿಪಕ್ಷಗಳು ಜಂಟಿ ಹೇಳಿಕೆ ನೀಡಿವೆ.

ಯಾವ ಪಕ್ಷಗಳು ಹೇಳಿಕೆಗೆ ಸಹಿ ಹಾಕಿವೆ?

ಈ ಹೇಳಿಕೆಗೆ ಸಹಿ ಹಾಕಿದ ಪಕ್ಷಗಳೆಂದರೆ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಸಹ ಸಹಿ ಹಾಕಿದೆ.

19 opposition parties boycotted the inauguration ceremony of the new parliament

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ (ಕಾಂಗ್ರೆಸ್ ಮಿತ್ರ ಪಕ್ಷವೂ ಸಹ), ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವೂ ಸಹ ಪಟ್ಟಿಯಲ್ಲಿದೆ. ಬಿಹಾರದ ರಾಷ್ಟ್ರೀಯ ಜನತಾ ದಳದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೂ ಸಹಿ ಹಾಕಿದ್ದಾರೆ.

ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್ (ಮಣಿ), ವಿದುತಲೈ ಚಿರುತೈಗಲ್ ಕಚ್ಚಿ, ರಾಷ್ಟ್ರೀಯ ಲೋಕದಳ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಮತ್ತು ಒಮರ್ ಅಬ್ದುಲ್ಲಾ ಅವರ ನ್ಯಾಷನಲ್‌ ಅಲಯನ್ಸ್‌, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ, ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷವೂ ಸಮಾರಂಭವನ್ನು ಬಹಿಷ್ಕರಿಸಲಿದೆ.

ಭಾನುವಾರ ಮಧ್ಯಾಹ್ನ ನೂತನ ಸಂಸತ್ ಭವನವನ್ನು ಮೋದಿ ಉದ್ಘಾಟಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+