ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳು 2.24 ಲಕ್ಷಕ್ಕೆ ಇಳಿಕೆ
ನವದೆಹಲಿ, ಜನವರಿ 9: ದೇಶದಲ್ಲಿನ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 2.24 ಲಕ್ಷಕ್ಕೆ ಇಳಿಕೆಯಾಗಿದೆ. ಸತತ ಎರಡನೆಯ ದಿನ 18 ಸಾವಿರ ಆಸುಪಾಸಿನಲ್ಲಿ ಪ್ರಕರಣಗಳು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 18,222 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ಶನಿವಾರದ ವರದಿಯಲ್ಲಿ ತಿಳಿಸಿದೆ.
ಶುಕ್ರವಾರ 19,253 ಮಂದಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಗೆಯೇ 228 ಸೋಂಕಿತರು ಸಾವಿಗೀಡಾಗಿದ್ದಾರೆ. ಇದರಿಂದ ದೇಶದಲ್ಲಿ ದಾಖಲಾದ ಒಟ್ಟು ಕೋವಿಡ್ ಸಂಬಂಧಿ ಸಾವಿನ ಸಂಖ್ಯೆ 1,50,798ಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳು 2,24,190ಕ್ಕೆ ಇಳಿದಿವೆ. ಇದುವರೆಗೂ ಒಟ್ಟು 1,04,31,639 ಪ್ರಕರಣಗಳು ದಾಖಲಾಗಿದ್ದು, 1,00,56,651 ಮಂದಿ ಬಿಡುಗಡೆಯಾಗಿದ್ದಾರೆ. ದೇಶದಾದ್ಯಂತ ಈವರೆಗೆ 18 ಕೋಟಿಗೂ ಅಧಿಕ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 9.16 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಶುಕ್ರವಾರ ದೇಶದಲ್ಲಿ ರೂಪಾಂತರ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.

ಬ್ರಿಟನ್ ಮತ್ತು ಭಾರತದ ವಿವಿಧ ನಗರಗಳ ನಡುವೆ ವಿಮಾನ ಸಂಚಾರ ಪುನರಾರಂಭವಾಗಿದೆ. ಬ್ರಿಟನ್‌ನಿಂದ ದೆಹಲಿಗೆ ಬರುವವರು ಏಳು ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ಮತ್ತು ಏಳು ದಿನಗಳ ಹೋಮ್ ಕ್ವಾರೆಂಟೈನ್‌ಗೆ ಒಳಪಡುವುದು ಕಡ್ಡಾಯ ಎಂದು ದೆಹಲಿ ಸರ್ಕಾರ ಹೇಳಿದೆ.
ದೆಹಲಿ ಸರ್ಕಾರದ ಈ ಆದೇಶ ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಗೊಂದಲಕ್ಕೆ ಕಾರಣವಾಯಿತು. ಬ್ರಿಟನ್‌ನಿಂದ ಬಂದ ವಿಮಾನದಲ್ಲಿ 250 ಪ್ರಯಾಣಿಕರು ದೆಹಲಿಗೆ ಆಗಮಿಸಿದ್ದು, ಐಸೋಲೇಷನ್ ನಿಯಮದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications