ಅಂತ್ಯ ಸಂಸ್ಕಾರಕ್ಕೆಂದು ಹೊರಟವರು ದುರಂತ ಅಂತ್ಯಕಂಡರು!
ಮೊರೆನಾ, ಜೂನ್ 21: ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆಂದು ತೆರಳುತ್ತಿದ್ದ ಒಂದೇ ಕುಟುಂಬದ 15 ಜನ ಅಪಘಾತವೊಂದರಲ್ಲಿ ಸಾವಿಗೀಡಾದ ದುರಂತ ಘಟನೆ ಮಧ್ಯಪ್ರದೇಶದ ಮೊರೆನಾ ಎಂಬಲ್ಲಿ ನಡೆದಿದೆ.
ಗ್ವಾಲಿಯರ್ ನಿಂದ ಮೊರೆನಾಕ್ಕೆ ಒಂದೇ ಕುಟುಂಬದ 20 ಜನ ಒಂದೇ ಜೀಪಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯೊಂದು ಜೀಪಿಗೆ ಡಿಕ್ಕಿಹೊಡೆದ ಪರಿಣಾಮ 15 ಜನ ಮೃತರಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರೆಲ್ಲರೂ ಗ್ವಾಲಿಯರ್ ಮೂಲದವರೆಂಬುದು ತಿಳಿದುಬಂದಿದೆ. ಗಾಯಗೊಂಡವರಿಗೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ರ್ಯಾಕ್ಟರ್ ಟ್ರಾಲಿಯ ಚಾಲಕ ಅಕ್ರಮ ಮರಳನ್ನು ಟ್ರಾಲಿ ಮೂಲಕ ಸಾಗಿಸುತ್ತಿದ್ದ ಎಂಬ ಮಾಹಿತಿ ಸಹ ಲಭ್ಯವಾಗಿದೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications