ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳೆಷ್ಟು, ಬಲಿಯಾದವರೆಷ್ಟು?
ನವದೆಹಲಿ, ಜೂನ್.22: ಭಾರತದಲ್ಲಿ ನೊವೆಲ್ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಮತ್ತೊಮ್ಮೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಮಹಾಮಾರಿ ಕೊವಿಡ್-19 ಅಟ್ಟಹಾಸಕ್ಕೆ ಒಂದೇ ದಿನ 445 ಮಂದಿ ಪ್ರಾಣ ಬಿಟ್ಟಿದ್ದಾರೆ.
ದೇಶದಲ್ಲಿ ಕೊರೊನಾವೈರಸ್ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲೇ ಭಾರತದಲ್ಲಿ 14,821 ಮಂದಿಗೆ ಕೊವಿಡ್-19 ಸೋಂಕು ಅಂಟಿಕೊಂಡಿರುವುದು ದೃಢಪಟ್ಟಿದೆ.
ಭಾರತದಲ್ಲಿ ಮಹಾಮಾರಿ ಕೊವಿಡ್-19 ಸೋಂಕಿಗೆ ಇದುವರೆಗೂ 13,699 ಮಂದಿ ಅಸುನೀಗಿದ್ದಾರೆ. ಒಟ್ಟು 4,25,282 ಮಂದಿ ಕೊರೊನಾವೈರಸ್ ಸೋಂಕಿತರ ಪೈಕಿ 2,37,196ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. 1,74,387 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳು:
ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ಸಿಂಹಪಾಲಿದೆ. ಮಹಾರಾಷ್ಟ್ರ ಒಂದರಲ್ಲೇ 1,28,205 ಮಂದಿಗೆ ಸೋಂಕು ದೃಢಪಟ್ಟಿದೆ. ತಮಿಳುನಾಡು 56,845, ದೆಹಲಿ 56,746, ಗುಜರಾತ್ 26,680, ಉತ್ತರ ಪ್ರದೇಶ 16,594, ರಾಜಸ್ಥಾನ 14,536, ಪಶ್ಚಿಮ ಬಂಗಾಳ 13,531 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ-ಅಂಶಗಳು ದೃಢಪಡಿಸಿವೆ.












Click it and Unblock the Notifications