ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ ಭಾರತದ 14 ನಗರಗಳು!
Recommended Video

ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ ಭಾರತದ 14 ನಗರಗಳು | Oneindia Kannada
ನವದೆಹಲಿ, ಮೇ 02: ವಿಶ್ವದ 20 ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದ 14 ನಗರಗಳ ಹೆಸರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಗಳು ಆತಂಕವನ್ನುಂಟುಮಾಡಿವೆ.
ಈ ಪಟ್ಟಿಯಲ್ಲಿ ರಾಜಧಾನಿ ದೆಹಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯೂ ಸೇರಿರುವುದು ಗಮನಾರ್ಹ. ಇನ್ನುಳಿದಂತೆ, ಉತ್ತರ ಪ್ರದೇಶದ ಹಲವು ನಗರಗಳು ಈ ಪಟ್ಟಿಯಲ್ಲಿವೆ. ಕಾನ್ಪುರ, ಫರೀದಾಬಾದ್, ಗಯಾ, ಪಾಟ್ನಾ, ಆಗ್ರಾ, ಮುಜಾಫರ್ಪುರ, ಶ್ರೀನಗರ, ಗುರ್ಗಾಂವ್, ಜೈಪುರ, ಪಟಿಯಾಲಾ ಮತ್ತು ಜೋಧಪುರಗಳ ಹೆಸರು ಪಟ್ಟಿಯಲ್ಲಿದೆ.

ಜಗತ್ತಿನಲ್ಲಿ ಮಾಲಿನ್ಯದಿಂದಿ ಪ್ರತಿ 10 ಜನರಲ್ಲಿ ಒಂಭತ್ತು ಜನರು ಶುದ್ಧ ಗಾಳಿ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ಸಹ ಈ ವರದಿ ಹೇಳಿದೆ.












Click it and Unblock the Notifications