ದೇಶದಲ್ಲಿ 12,881 ಹೊಸ ಕೋವಿಡ್ ಪ್ರಕರಣ ಪತ್ತೆ: ಸಕ್ರಿಯ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ

ನವದೆಹಲಿ, ಫೆಬ್ರವರಿ 18: ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗಿದ್ದು, ಇದರಿಂದ ಸಕ್ರಿಯ ಪ್ರಕರಣಗಳಲ್ಲಿ ಪುನಃ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಗಿಂತ ಹೊಸ ಸೋಂಕಿತರ ಸಂಖ್ಯೆ ಹೆಚ್ಚಿದೆ. ಅಲ್ಲದೆ ಸತತ ಎರಡನೆಯ ದಿನ 100ರಷ್ಟು ಸಾವುಗಳು ವರದಿಯಾಗಿದೆ. ಭಾರತದಲ್ಲಿ ಬ್ರಿಟನ್ ರೂಪಾಂತರದ ಜತೆಗೆ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ರೂಪಾಂತರ ಕೋವಿಡ್ ಸೋಂಕು ಪತ್ತೆಯಾಗಿದ್ದರ ಜತೆಗೆ ಎರಡನೆಯ ಅಲೆಯ ಭೀತಿ ಕೂಡ ಉಂಟಾಗಿದೆ.

ದೇಶದಲ್ಲಿ ಬುಧವಾರ 12,881 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. 11,987 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಂದೇ ದಿನದಲ್ಲಿ 101 ಸೋಂಕಿತರು ಮೃತಪಟ್ಟಿದ್ದಾರೆ ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 1,09,50,201ಕ್ಕೆ ತಲುಪಿದೆ. ಇದುವರೆಗೂ ಒಟ್ಟು 1,06,56,845 ಮಂದಿ ಸೋಂಕಿತರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 1,56,014 ಮಂದಿ ಜೀವ ಕಳೆದುಕೊಂಡಿದ್ದಾರೆ. ಹೊಸ ಪ್ರಕರಣಗಳ ಏರಿಕೆಯಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1,37,342ಕ್ಕೆ ಹೆಚ್ಚಳವಾಗಿದೆ.

ದೇಶದಲ್ಲಿ ಇದುವರೆಗೂ ಒಟ್ಟು 94,22,228 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರದ ತನ್ನ ವರದಿಯಲ್ಲಿ ಮಾಹಿತಿ ನೀಡಿದೆ. ದೇಶದಲ್ಲಿನ ಚೇತರಿಕೆ ಪ್ರಮಾಣ ಶೇ 97.32ರಷ್ಟಿದೆ. ಕೋವಿಡ್ ಮರಣ ಸಂಖ್ಯೆ ಶೇ 1.42ಕ್ಕೆ ಕುಸಿದಿದೆ.

 12,881 New Covid-19 Cases, 101 Deaths Reported Across India, 11,987 Discharged

ಭಾರತವು 23 ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ರವಾನಿಸಿದ್ದು, ಇನ್ನೂ 40 ದೇಶಗಳಿಂದ ಬೇಡಿಕೆ ಬಂದಿದೆ. 50 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಮಾರ್ಚ್ ತಿಂಗಳಿನಿಂದ ಲಸಿಕೆ ನೀಡಲು ಉದ್ದೇಶಿಸಿದ್ದು, ಅದಕ್ಕಾಗಿ ಸ್ವಯಂ ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕೋ-ವಿನ್ ಆಪ್‌ನ 2.0 ಆವೃತ್ತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+