ಸಹೋದರನನ್ನು ಹೆಗಲ ಮೇಲೆ ಹೊತ್ತು ತಂದಳಾ ಬಾಲಕಿ!
ಜಾರ್ಖಂಡ್, ಸೆಪ್ಟೆಂಬರ್, 08 : ಬಡತನ ಮನುಷ್ಯರ ಮೇಲೆ ಸವಾರಿ ಮಾಡುತ್ತಾ..ಅಥವಾ ಮನುಷ್ಯರು ಬಡತನದಲ್ಲಿ ಸವಾರಿ ಮಾಡುತ್ತಾರಾ ಎಂದು ಬಡತನದ ಮಾತು ಬಂದಾಗಲೆಲ್ಲಾ ಈ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತದೆ.
ಈ ಮಾತುಗಳಿಗೆ ಪೂರಕವಾಗಿ ಜಾರ್ಖಂಡ್ ನ ಮಾಲ್ಡಾ ಎಂಬ ನಗರದಲ್ಲಿ ಮಂಗಳವಾರ ಒಂದು ಮನಕಲುಕುವ ಘಟನೆ ಸಂಭವಿಸಿದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಬಡತನದ ಬೇಗೆಯಲ್ಲಿ ಬೇಯುತ್ತಿರುವ 11 ವರ್ಷದ ಬಾಲಕಿಯೊಬ್ಬಳು 8 ಕಿ.ಮೀ ದೂರದ ಆಸ್ಪತ್ರೆಗೆ ತನ್ನ ಸಹೋದರನನ್ನು ಹೆಗಲ ಮೇಲೆ ಹೊತ್ತು ಬಂದಿದ್ದಾಳೆ.[ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು]

ಈ ಇಬ್ಬರು ಮಕ್ಕಳಲ್ಲಿ ಅಕ್ಕ ಮಾಲತಿ ತುಡು 7 ವರ್ಷದ ಸಹೋದರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ತಿಳಿದು ಮಂಗಳವಾರ ಬೆಳಿಗ್ಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದಿದ್ದಾಳೆ. ಕಡು ಕಷ್ಟದಲ್ಲಿ ಬದುಕುತ್ತಿರುವ ಇವರಿಗೆ ಬಸ್ಸಿನಲ್ಲಿ ಬರುವುದಕ್ಕೂ ಪುಡಿ ಕಾಸಿಲ್ಲ.
ನಡು ರಸ್ತೆಯಲ್ಲಿ ಈ ಬಾಲಕಿ ತನ್ನ ಸಹೋದರನನ್ನು ಹೊತ್ತು ಬರುವುದನ್ನು ಜನರು ನೋಡಿದರೂ ಸಹಾಯಕ್ಕೆ ಧಾವಿಸಲಿಲ್ಲ. ಆದರೂ ಧೃತಿಗೆಡದ ಈಕೆ ತನ್ನ ತಮ್ಮನ ಆರೋಗ್ಯಕ್ಕಾಗಿ ಬಾಲ್ಯಕ್ಕೆ ಮೀರಿದ ಕಾರ್ಯ ಮಾಡಿ ಸೈ ಎನಿಸಿಕೊಂಡಿದ್ದಾಳೆ.
ತಂದೆ ತಾಯಿ ಪ್ರೀತಿ ಕಾಣದ ಬಾಲಕಿ 'ನಮ್ಮನ್ನು ಅಜ್ಜಿ ಕೂಲಿ ಮಾಡಿ ಬಂದ ಹಣದಲ್ಲಿ ನಮ್ಮನ್ನು ಸಾಕುತ್ತಿದ್ದಾರೆ. ಈ ಬಡತನದ ಮಧ್ಯೆ ನನ್ನ ತಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾನೆ' ಎಂದು ನೋವಿನ ದನಿಯಲ್ಲಿ ನುಡಿಯುತ್ತಾಳೆ ಮಾಲತಿ ತುಡು.












Click it and Unblock the Notifications