Mann Ki Baat: ‘ಮನ್ ಕೀ ಬಾತ್’ 100ನೇ ಸಂಚಿಕೆ ಪ್ರಸಾರ: ಇಂದು 100 ರೂಪಾಯಿ ನಾಣ್ಯ ಬಿಡುಗಡೆ- ಹೇಗಿದೆ ಈ ನಾಣ್ಯ?
ದೆಹಲಿ ಏಪ್ರಿಲ್ 30: ಪ್ರಧಾನಿ ನರೇಂದ್ರ ಮೋದಿ ಅವರ 'ವಾಯ್ಸ್ ಆಫ್ ಮೈಂಡ್' ಕಾರ್ಯಕ್ರಮದ 100ನೇ ಸಂಚಿಕೆ 'ಮನ್ ಕೀ ಬಾತ್' ಇಂದು ಪ್ರಸಾರವಾಗಲಿದೆ. ಇದರ ಸ್ಮರಣಾರ್ಥ ಇಂದು 100 ರೂಪಾಯಿಯ ನಾಣ್ಯವನ್ನು ಪರಿಚಯಿಸಲಾಗುವುದು. ಈ ನಾಣ್ಯ ಹೇಗಿದೆ? ಅದರ ವಿಶೇಷತೆ ಏನು? ಆ ಬಗ್ಗೆ ಈಗ ಮಾಹಿತಿ ಹೊರಬಿದ್ದಿದೆ.
ನರೇಂದ್ರ ಮೋದಿ ಅವರು 2014 ರಿಂದ ಭಾರತದ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ಮಾತನಾಡುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನರೊಂದಿಗೆ ಮಾತನಾಡುತ್ತಿದ್ದಾರೆ. ಅಲ್ಲದೇ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಿದವರನ್ನು ಪ್ರಧಾನಿ ಮೋದಿ ಹೊಗಳಿದ್ದಾರೆ. ಇದು ದೇಶದೆಲ್ಲಡೆ ಜನರ ಮನಸ್ಸನ್ನು ಮುಟ್ಟಿದೆ.
ಈ ಮನ್ ಕೀ ಬಾತ್' ನ 100ನೇ ಶೋ ಇಂದು ನಡೆಯಲಿದೆ. ಇದನ್ನು ವಿಶೇಷ ರೀತಿಯಲ್ಲಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. ಮತ್ತು ಈ ಮನ್ ಕೀ ಬಾತ್' ಕಾರ್ಯಕ್ರಮವನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಸಾರ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಭಾರತದ 4 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರಸಾರ ಮಾಡಲು ಬಿಜೆಪಿ ವ್ಯವಸ್ಥೆ ಮಾಡುತ್ತಿದೆ. ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲೂ ಇದು ನೇರ ಪ್ರಸಾರವಾಗಲಿದೆ. ಈ ಮೂಲಕ ವಿಶ್ವದಾದ್ಯಂತ 'ಮನ್ ಕೀ ಬಾತ್' ಕಾರ್ಯಕ್ರಮ ಪ್ರಸಾರವಾಗಲಿದೆ.
ಈ ಹಿನ್ನೆಲೆಯಲ್ಲಿ 100ನೇ 'ಮನ್ ಕಿ ಬಾತ್' ಕಾರ್ಯಕ್ರಮದ ಸ್ಮರಣಾರ್ಥ ಕೇಂದ್ರ ಸರ್ಕಾರದ ವತಿಯಿಂದ 100 ರೂಪಾಯಿ ನಾಣ್ಯ ಬಿಡುಗಡೆ ಮಾಡಲಾಗುತ್ತಿದೆ. ಈ ಸಂಬಂಧ ಆರ್ಥಿಕ ವ್ಯವಹಾರಗಳ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

100ನೇ 'ಮನ್ ಕೀ ಬಾತ್' ನೆನಪಿಗಾಗಿ 100 ರೂಪಾಯಿ ನಾಣ್ಯ ಬಿಡುಗಡೆ ಮಾಡಲಾಗುವುದು. ನಾಣ್ಯದ ಮುಂಭಾಗವು ಅಶೋಕ ಚಿಹ್ನೆಯಲ್ಲಿ ಸಿಂಹಗಳ ಮುಖಗಳನ್ನು ಹೊಂದಿದೆ. ಅದರ ಕೆಳಗೆ ಹಿಂದಿಯಲ್ಲಿ ''ಸತ್ಯಮೇವ ಜಯತೇ'' ಎಂದು ಬರೆಯಲಾಗಿದ್ದು, ನಾಣ್ಯದ ಮುಖಬೆಲೆ 100 ಆಗಿದೆ. ಜೊತೆಗೆ ನಾಣ್ಯದ ಮುಂಭಾಗದ ಬಲಭಾಗದಲ್ಲಿ 'ಭಾರತ್' ಎಂದು ಬರೆಯಲಾಗಿದ್ದು ಎಡಭಾಗದಲ್ಲಿ 'ಇಂಡಿಯಾ' ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ.
ನಾಣ್ಯದ ಇನ್ನೊಂದು ಬದಿಯಲ್ಲಿ ಮೈಕ್ರೊಫೋನ್‌ನೊಂದಿಗೆ ಧ್ವನಿ ತರಂಗವನ್ನು ಪ್ರತಿನಿಧಿಸುವ ಸಂಕೇತವೂ ಇದೆ. ಪ್ರಧಾನಿ ಮೋದಿಯವರ 100ನೇ ಮನ್ ಕೀ ಬಾತ್ ಸ್ಮರಣಾರ್ಥ ಈ ಚಿಹ್ನೆ ಇರಲಿದೆ. ಇದರೊಂದಿಗೆ ಮೇಲಿನ ಮತ್ತು ಕೆಳಗಿನ ಭಾಗದಲ್ಲಿ ಮನ್ ಕೀ ಬಾತ್ ಬರೆಯಲಾಗುವುದು.
ಅಲ್ಲದೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡ ಈ 100 ರೂ. ನಾಣ್ಯದ ಕುರಿತು ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಮಾಹಿತಿ ನೀಡಿದ ಸಚಿವಾಲಯ, 'ಮನ್ ಕೀ ಬಾತ್' ನ 100ನೇ ಸಂಚಿಕೆ ನೆನಪಿಗಾಗಿ ಬಿಡುಗಡೆ ಮಾಡಲಿರುವ 100 ರೂಪಾಯಿ ನಾಣ್ಯವು 35 ಗ್ರಾಂ ತೂಕವನ್ನು ಹೊಂದಿರುತ್ತದೆ. ಈ ನಾಣ್ಯವನ್ನು 50 ಪ್ರತಿಶತ ಬೆಳ್ಳಿ, 40 ಪ್ರತಿಶತ ತಾಮ್ರ, 5 ಪ್ರತಿಶತ ನಿಕಲ್ ಮತ್ತು ಸತುವುಗಳಿಂದ ತಯಾರಿಸಲಾಗಿದೆ ಎಂದು ಅದು ಹೇಳಿದೆ.












Click it and Unblock the Notifications