918 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿರುವ 10 ಕೋಟಿ ಮತದಾರರು

ನವದೆಹಲಿ, ಮೇ 19: ಕಳೆದ 40 ದಿನಗಳಿಂದ ಭಾರತದಲ್ಲಿ ನಡೆಯುತ್ತಿರುವ ಮತೋತ್ಸವಕ್ಕೆ ಭಾನುವಾರ ಸಂಜೆ ಆರು ಗಂಟೆಗೆ ತೆರೆ ಬೀಳಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಂದು ಏಳನೇ ಹಂತದ ಮತದಾನಕ್ಕೆ ಏಳು ರಾಜ್ಯ ಹಾಗೂ 1ಕೇಂದ್ರಾಡಳಿತ ಸೇರಿ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸುಮಾರು 10.01 ಕೋಟಿ ಮತದಾರರು 918 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.

ಮತದಾನಕ್ಕಾಗಿ ಈ 59 ಕ್ಷೇತ್ರಗಳಲ್ಲಿ 1.12 ಲಕ್ಷ ಮತಗಟ್ಟೆಗಳನ್ನು ತೆರೆಯಲಾಗಿದೆ.59 ಲೋಕಸಭಾ ಕ್ಷೇತ್ರಗಳ ಜೊತೆಗೆ ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದಲ್ಲಿ ಆಯ್ದ ಮತಗಟ್ಟೆಗಳಲ್ಲಿ ಮರು ಮತದಾನವೂ ನಡೆಯಲಿದೆ.

10 crore voters will decide 918 candidates fate

ಕಳೆದ ಆರು ಹಂತಗಳಲ್ಲಿ ಶೇ.66.88 ಸರಾಸರಿ ಮತದಾನ ದಾಖಲಾಗಿದೆ. ಕೊನೆಯ ಹಂತದಲ್ಲಿ ಎಷ್ಟು ಮತಪ್ರಮಾಣವಾಗುತ್ತದೆ ಎಂದು ಕಾದುನೋಡಬೇಕಿದೆ.

ಎಲ್ಲಾ ಏಳು ಹಂತಗಳಲ್ಲಿ ಒಟ್ಟು 542 ಕ್ಷೇತ್ರಗಳಿಗೆ ಮತದಾನವಾದಂತಾಗಲಿದೆ. ತಮಿಳುನಾಡಿನ ವೆಲ್ಲೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮದ ಕಾರಣದಿಂದ ಮತದಾನ ಮುಂದೂಡಲಾಗಿತ್ತು. ಹೀಗಾಗಿ ಮೇ 23ರಂದು 542 ಕ್ಷೇತ್ರಗಳ ಮತ ಎಣಿಕೆ ಮಾತ್ರ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+