• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಗಳಲ್ಲಿ: ಜೈಲಿನಿಂದ ಹೊರ ನಡೆದ ಜಗನ್ ರೆಡ್ಡಿ

By Mahesh
|

ಹೈದರಾಬಾದ್, ಸೆ.24 : ಅಕ್ರಮ ಆಸ್ತಿ ಪ್ರಕರಣದ ಆರೋಪಿಯಾಗಿ ಜೈಲು ಸೇರಿ ಸುಮಾರು 16 ತಿಂಗಳ ನಂತರ ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಬಂಧಮುಕ್ತರಾಗಿದ್ದಾರೆ. ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಸೆ.23ರಂದು ಜಾಮೀನು ಮಂಜೂರು ಮಾಡಿತ್ತು. ಆದರೆ, ಜಗನ್ ಗೆ ಮಂಗಳವಾರ ಮಧ್ಯಾಹ್ನ ಬಿಡುಗಡೆ ಸಿಕ್ಕಿದೆ.

ಸೋಮವಾರ ಸಂಜೆಯಿಂದಲೆ ವೈಎಸ್ಸಾರ್ ಪಕ್ಷದ ಕಾರ್ಯಕರ್ತರು, ರಾಯಲಸೀಮಾದಿಂದ ಬಂದಿದ್ದ ಅಭಿಮಾನಿಗಳು ಚಂಚಲಗುಡ ಜೈಲಿನ ಸುತ್ತ ನೆರೆದಿದ್ದರು. 40 ವರ್ಷದ ಕಡಪ ಸಂಸದ ಜಗನ್ ಮೋಹನ್ ರೆಡ್ಡಿಗೆ ಭರ್ಜರಿ ಸ್ವಾಗತ ನೀಡಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಜಗನ್ ಮೇಲಿನ ಕೇಸುಗಳನ್ನು ನಾಲ್ಕು ತಿಂಗಳಿನಲ್ಲಿ ಮುಕ್ತಾಯಗೊಳಿಸುವಂತೆ ಸಿಬಿಐ ತಂಡಕ್ಕೆ ಸುಪ್ರೀಂಕೊರ್ಟ್ ಕಳೆದ ಮೇ ತಿಂಗಳಿನಲ್ಲಿ ಆದೇಶಿಸಿತ್ತು. ಅದರಂತೆ ನಿನ್ನೆ ವರದಿ ನೀಡಿದ ಸಿಬಿಐ ತನಿಖೆ ಮುಕ್ತಾಯವಾಗಿ ಎಂದು ಘೋಷಿಸಿ ಜಾಮೀನಿಗೆ ಯಾವುದೇ ಅಡ್ಡಿ ಪಡಿಸಿರಲಿಲ್ಲ. ಹೀಗಾಗಿ ಜಗನ್ ಗೆ ಜಾಮೀನು ಹಾಗೂ 8 ಸಂಸ್ಥೆಗಳಿಗೆ ನಿರಾಳತೆ ಮೂಡಿತ್ತು.

ಅಖಂಡ ಆಂಧ್ರ ಹಾಗೂ ತೆಲಂಗಾಣ ರಚನೆ ವಿರೋಧಿಸಿ ಸೀಮಾಂಧ್ರ ಭಾಗದಲ್ಲಿ ಮಂಗಳವಾರಿ ಬಂದ್ ಆಚರಿಸಲಾಗುತ್ತಿದೆ. ಹೈದರಾಬಾದಿನಲ್ಲಿ ಜಗನ್ ಬಿಡುಗಡೆ ಸಂಭ್ರಮ ಮನೆ ಮಾಡಿದೆ. ಜಗನ್ ಬಿಡುಗಡೆ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ ನೋಡಿ...

ಅಭಿಮಾನಿಗಳಲ್ಲಿ ಹರುಷ

ಅಭಿಮಾನಿಗಳಲ್ಲಿ ಹರುಷ

ಹೈದರಾಬಾದ್ ; ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಬಳಿ ಸೋಮವಾರ ಜಗನ್ ಗೆ ಜಾಮೀನು ಸುದ್ದಿ ಹೊರಬೀಳುತ್ತಿದ್ದಂತೆ ವೈಎಸ್ಸಾರ್ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ ಪಟ್ಟರು

ಪತಿ ನಿರೀಕ್ಷೆಯಲ್ಲಿ

ಪತಿ ನಿರೀಕ್ಷೆಯಲ್ಲಿ

ಜಗನ್ ಮೋಹನ್ ರೆಡ್ಡಿ ಅವರ ಪತ್ನಿ ಭಾರತಿ ಅವರು ಅಭಿಮಾನಿಗಳಿಗೆ ವಂದಿಸುತ್ತಾ ಜಗನ್ ಗಾಗಿ ನಿರೀಕ್ಷಿಸಿದ್ದು ಹೀಗೆ

ಜೈಲಿನ ಬಳಿ ಅಪಾರ ಜನಸ್ತೋಮ

ಜೈಲಿನ ಬಳಿ ಅಪಾರ ಜನಸ್ತೋಮ

ಚಂಚಲಗುಡ ಜೈಲಿನ ಬಳಿ ಅಪಾರ ಜನಸ್ತೋಮ ನೆರೆದಿದ್ದು, ಜಗನ್ ಅವರನ್ನು ಬುಲೆಟ್ ಪ್ರೂಫ್ ಕಾರಿನಲ್ಲಿ ಕರೆದೊಯ್ಯಲಾಗುತ್ತಿದೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ ಅವರಿಗೆ 6 ಬಾರಿ ಜಾಮೀನು ಅರ್ಜಿ ತಿರಸ್ಕರಿಸಲಾಗಿತ್ತು.

ಮುಂದೇನು?

ಮುಂದೇನು?

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವೈಎಸ್ಸಾರ್ ಪಕ್ಷ ಗಳಿಸುತ್ತಿರುವ ಜನಪ್ರಿಯತೆ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಟಿಆರ್ಎಸ್, ಬಿಜೆಪಿ ಹಾಗೂ ಟಿಡಿಪಿ ಕೂಡಾ ಬಿರುಸಿನ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿವೆ

ಜಗನ್ ಜನಪ್ರಿಯತೆ

ಜಗನ್ ಜನಪ್ರಿಯತೆ

ಸೀಮಾಂಧ್ರ ಭಾಗದಲ್ಲಿ ಅಂದರೆ ರಾಯಲಸೀಮೆ, ಕರಾವಳಿ(ಕೋಸ್ತಾ)ಆಂಧ್ರದಲ್ಲಿ ಜಗನ್ ಜನಪ್ರಿಯತೆ ಇದ್ದೇ ಇದೆ. ಹೈದರಾಬಾದ್ ಕೂಡಾ ಜಗನ್ ಪರ ವಾಲುವ ಸಾಧ್ಯತೆ ಹೆಚ್ಚಿದೆ. ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಹೀಗೂ ಒಂದಷ್ಟು ಸ್ಥಾನ ಗಳಿಸುವ ನಿರೀಕ್ಷೆ ಹೊಂದಿದೆ.

ಜಗನ್ ನಡೆ ನಿಗೂಢ

ಜಗನ್ ನಡೆ ನಿಗೂಢ

ಜಗನ್ ಮೊದಲ ಹೆಜ್ಜೆ ಯಾವ ಕಡೆ ಎಂಬುದು ಕುತೂಹಲಕಾರಿಯಾಗಿದೆ. ಸೀಮಾಂಧ್ರದಲ್ಲಿ ಮಂಗಳವಾರ ಬಂದ್ ನಡೆಸಲಾಗಿದೆ. ಅಖಂಡ ಆಂಧ್ರಕ್ಕಾಗಿ ವೈಎಸ್ ವಿಜಯಮ್ಮ ನಂತರ ಜಗನ್ ಕೂಡಾ ಉಪವಾಸ ಕೈಗೊಂಡಿದ್ದರು.

ಟಿಡಿಪಿಗೆ ನಡುಕ

ಟಿಡಿಪಿಗೆ ನಡುಕ

ಆಕ್ರಮ ಆಸ್ತಿ ಪ್ರಕರಣದ ಆರೋಪ ಹೊರೆಸಿದ್ದು ಕಾಂಗ್ರೆಸ್ ಶಾಸಕರಾದರೂ ವೈಎಸ್ಸಾರ್ ಪಕ್ಷದ ವಿರುದ್ಧ ಸತತ ಹೋರಾಟ ನಡೆಸುತ್ತಾ ಬಂದ ತೆಲುಗುದೇಶಂ ಪಕ್ಷದ ವಿರುದ್ಧ ಜಗನ್ ತಿರುಗಿ ಬೀಳಬಹುದು.

ಜಗನ್ ಸೋದರಿ ಶರ್ಮಿಳಾ ಅವರು ಕೂಡಾ ತಮ್ಮ ಪಾದಯಾತ್ರೆ ವೇಳೆ ಟಿಡಿಪಿ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದರು. ಚಿತ್ರದಲ್ಲಿ(ಎಡದಿಂದ) ವೈಎಸ್ ಶರ್ಮಿಳಾ, ವಿಜಯಮ್ಮ, ಭಾರತಿ

ಜಗನ್ ಮನೆಯಲ್ಲಿ

ಜಗನ್ ಮನೆಯಲ್ಲಿ

ಜಗನ್ ಮೋಹನ್ ರೆಡ್ಡಿ ಮನೆಯಲ್ಲಿ ಸೋಮವಾರದಿಂದ ಸಂಭ್ರಮ ಮನೆ ಮಾಡಿದೆ. ಎಲ್ಲರ ಮುಖದಲ್ಲೂ ಸಂತಸದ ನಗೆ ಹಬ್ಬಿದೆ

ನಾಯ್ಡು ಗರಂ

ನಾಯ್ಡು ಗರಂ

ತೆಲುಗುದೇಶಂ ಪಾರ್ಟಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮಾತನಾಡಿ, ಇನ್ಮುಂದೆ ಕಾಂಗ್ರೆಸ್ ಆಂಧ್ರದಲ್ಲಿ ಎರಡು ಕಚೇರಿ ಹೊಂದಲಿದೆ. ತೆಲಂಗಾಣ ರಾಷ್ಟ್ರೀಯ ಸಮಿತಿ ಕಚೇರಿ ಹಾಗೂ ವೈಎಸ್ಸಾರ್ ಪಕ್ಢದ ಕಚೇರಿ ಎಂದಿದ್ದಾರೆ.

ಕಾಂಗ್ರೆಸ್ ಹಾಗೂ ವೈಎಸ್ಸಾರ್ ಪಕ್ಷ ನಡುವಿನ ಒಳ ಒಪ್ಪಂದದ ಫಲವೇ ಜಗನ್ ಗೆ ಜಾಮೀನು ಸಿಕ್ಕಿದೆ ಎಂದು ಟಿಡಿಪಿ ಆರೋಪಿಸಿದೆ.

ಲೋಕಸಭೆ ಲೆಕ್ಕಾಚಾರ

ಲೋಕಸಭೆ ಲೆಕ್ಕಾಚಾರ

42 ಲೋಕಸಭೆ ಸೀಟುಗಳು(17 ತೆಲಂಗಾಣದಲ್ಲಿ ಹಾಗೂ 25 ಸೀಮಾಂಧ್ರದಲ್ಲಿದೆ)

294 ಅಸೆಂಬ್ಲಿ ಸೀಟುಗಳಲ್ಲಿ (149 ತೆಲಂಗಾಣದಲ್ಲಿ 175 ಸೀಮಾಂಧ್ರದಲ್ಲಿದೆ)

ಕಾಂಗ್ರೆಸ್ ನಡೆ

ಕಾಂಗ್ರೆಸ್ ನಡೆ

ಟಿಆರ್ ಎಸ್ ಪಕ್ಷದ ಜತೆ ಕಾಂಗ್ರೆಸ್ ವಿಲೀನ ಮಾಡಿಕೊಂಡು 17 ಸಂಸದರನ್ನು ಹೊಂದುವ ನಿರೀಕ್ಷೆಯಲ್ಲಿದೆ

ವೈಎಸ್ಸಾರ್ ಕಾಂಗ್ರೆಸ್ ವಿಜಯೋತ್ಸವ

ವೈಎಸ್ಸಾರ್ ಕಾಂಗ್ರೆಸ್ ವಿಜಯೋತ್ಸವ

ಜಗನ್ ಬಿಡುಗಡೆ ಹಿನ್ನೆಲೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದು ಹೀಗೆ

ವೈಎಸ್ಸಾರ್ ಕಾಂಗ್ರೆಸ್ ವಿಜಯೋತ್ಸವ

ವೈಎಸ್ಸಾರ್ ಕಾಂಗ್ರೆಸ್ ವಿಜಯೋತ್ಸವ

ಹೈದರಾಬಾದ್ : ಜಗನ್ ಬಿಡುಗಡೆ ಹಿನ್ನೆಲೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್ ಕಚೇರಿ ಬಳಿ ಕಾರ್ಯಕರ್ತರು ಸಂಭ್ರಮಿಸಿದ್ದು ಹೀಗೆ

ವೈಎಸ್ಸಾರ್ ಕಾಂಗ್ರೆಸ್ ವಿಜಯೋತ್ಸವ

ವೈಎಸ್ಸಾರ್ ಕಾಂಗ್ರೆಸ್ ವಿಜಯೋತ್ಸವ

ಹೈದರಾಬಾದ್ : ಜಗನ್ ಬಿಡುಗಡೆ ಹಿನ್ನೆಲೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್ ಕಚೇರಿ ಬಳಿ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದು ಹೀಗೆ

ವೈಎಸ್ಸಾರ್ ಕಾಂಗ್ರೆಸ್ ವಿಜಯ

ವೈಎಸ್ಸಾರ್ ಕಾಂಗ್ರೆಸ್ ವಿಜಯ

ಹೈದರಾಬಾದ್ : ಜಗನ್ ಬಿಡುಗಡೆ ಹಿನ್ನೆಲೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್ ಕಚೇರಿ ಬಳಿ ಮಹಿಳಾ ಕಾರ್ಯಕರ್ತರ ಸಂಭ್ರಮ

ವೈಎಸ್ಸಾರ್ ಕಾಂಗ್ರೆಸ್ ವಿಜಯ

ವೈಎಸ್ಸಾರ್ ಕಾಂಗ್ರೆಸ್ ವಿಜಯ

ಹೈದರಾಬಾದ್ : ಜಗನ್ ಬಿಡುಗಡೆ ಹಿನ್ನೆಲೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

ಅಭಿಮಾನಿಗಳಲ್ಲಿ ಹರುಷ

ಅಭಿಮಾನಿಗಳಲ್ಲಿ ಹರುಷ

ಜಗನ್ ಬಿಡುಗಡೆ ಸಂಭ್ರಮಕ್ಕೆ ದೂರದ ಊರುಗಳಿಂದ ಹೈದರಾಬಾದಿನತ್ತ ಬಂದ ಜನ

ವೈಎಸ್ಸಾರ್ ಕಾಂಗ್ರೆಸ್ ನಡೆ

ವೈಎಸ್ಸಾರ್ ಕಾಂಗ್ರೆಸ್ ನಡೆ

ವೈಎಸ್ಸಾರ್ ಪಕ್ಷ ಕಾಂಗ್ರೆಸ್ ಗೆ ಷರತ್ತು ಬದ್ಧ ಬೆಂಬಲ ವ್ಯಕ್ತಪಡಿಸಬಹುದು. ಮುಂದೆ ಜಗನ್ ಸಿಎಂ ಸ್ಥಾನಕ್ಕೆ ಕಣ್ಣಿಡಬಹುದು. ಆದರೆ, ಸೀಮಾಂಧ್ರ ರಾಜಧಾನಿ

ಅಭಿಮಾನಿಗಳಲ್ಲಿ ಹರುಷ

ಅಭಿಮಾನಿಗಳಲ್ಲಿ ಹರುಷ

ಜಗನ್ ಬಿಡುಗಡೆ ನಂತರ ಅಭಿಮಾನಿಗಳತ್ತ ಕೈ ಬೀಸಿ ವಂದನೆ ಸಲ್ಲಿಸಿದ್ದಾರೆ

ಕಾಂಗ್ರೆಸ್ ರೆಡಿ

ಕಾಂಗ್ರೆಸ್ ರೆಡಿ

ಆಂಧ್ರಪ್ರದೇಶದಿಂದ ಒಟ್ಟಾರೆ 25 ಸಂಸದರನ್ನು ಹೊಂದಲು ಯೋಜಿಸಿದೆ. ಹೀಗಾಗಿ ವೈಎಸ್ಸಾರ್ ಪಕ್ಷದ ಜತೆ ಕೈ ಜೋಡಿಸಲು ಕಾಂಗ್ರೆಸ್ ರೆಡಿ ಎನ್ನಲಾಗಿದೆ

ಜೈಲಿನಿಂದ ಹೊರ ಬಂದ

ಜೈಲಿನಿಂದ ಹೊರ ಬಂದ

ಚಂಚಲಗುಡ ಜೈಲಿನಿಂದ ಹೊರ ಬಂದ ನಂತರ ಅಭಿಮಾನಿಗಳತ್ತ ಕೈ ಬೀಸಿ ವಂದನೆ ಸಲ್ಲಿಸಿದ್ದಾರೆ

ಜೈಲಿನಿಂದ ಹೊರಕ್ಕೆ

ಜೈಲಿನಿಂದ ಹೊರಕ್ಕೆ

ಚಂಚಲಗುಡ ಜೈಲಿನಿಂದ ಹೊರ ಬಂದ ಜಗನ್ ಅವರನ್ನು ಬುಲೆಟ್ ಪ್ರೂಫ್ ಕಾರಿನಲ್ಲಿ ಕರೆದೊಯ್ಯಲಾಗಿದೆ

8 ಸಂಸ್ಥೆಗಳಿಗೆ ನಿರಾಳತೆ

8 ಸಂಸ್ಥೆಗಳಿಗೆ ನಿರಾಳತೆ

ಜಗನ್ ಗೆ ಜಾಮೀನು ಹಾಗೂ 8 ಸಂಸ್ಥೆಗಳಿಗೆ ನಿರಾಳತೆ ಮೂಡಿದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Supporters of YSR Congress chief Jaganmohan Reddy, along with scores of party workers, today assembled outside the Chenchalguda Central prison welcomed their leader’s release after he was granted bail in the alleged quid pro quo investments case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more