ತರಕಾರಿಗೆ 3 ಗಂಟೆ, ಮದ್ಯಕ್ಕೆ 7 ಗಂಟೆ ಅವಕಾಶ: ಮಹಿಳೆಯರ ಹೋರಾಟ

ವಿಶಾಕಪಟ್ಟಣ, ಮೇ 5: ಮದ್ಯ ಮಾರಾಟ ಅವಕಾಶ ನೀಡಿದ ಬೆನ್ನಲೆ ಅದಕ್ಕೆ ವಿರೋದವೂ ವ್ಯಕ್ತವಾಗಿದೆ. ಆಂಧ್ರ ಪ್ರದೇಶದ ವಿಶಾಕಪಟ್ಟಣದಲ್ಲಿ ಈ ಬಗ್ಗೆ ಮಹಿಳೆಯರು ಹೋರಾಟ ಮಾಡಿದ್ದಾರೆ.

Recommended Video

      ಬಾರ್ ಮುಂದೆ ಸಾಲಾಗಿ ನಿಂತವರಿಗೆ ಹೂವಿನಭಿಷೇಕ | Oneindia Kannada

      ವಿಶಾಕಪಟ್ಟಣದಲ್ಲಿ ಮದ್ಯ ಮಾರಾಟಕ್ಕೆ 7 ಗಂಟೆ ಅವಕಾಶ ನೀಡಲಾಗಿದೆ. ಆದರೆ, ತರಕಾರಿ ಮಾರಾಟಕ್ಕೆ 3 ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನು ಮಹಿಳೆಯರು ವಿರೋಧಿಸಿದ್ದು, ಇಂದು ರಸ್ತೆಗಿಳಿದು ಪ್ರತಿಭಟನೆ ಮಾಡಿದರು.

      ಬೆಳಗ್ಗೆ 11 ಗಂಟೆಯ ಬದಲು, ಮಧ್ಯಾಹ್ನ 12 ರಿಂದ ಸಂಜೆ 7 ರವರೆಗೆ ಮದ್ಯದಂಗಡಿಗಳನ್ನು ತೆರೆಯಲು ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಆದರೆ, ತರಕಾರಿ ಹಾಗೂ ಅಗತ್ಯ ವಸ್ತುಗಳಿಗೆ ಬೆಳಗ್ಗೆ ಮೂರು ಗಂಟೆ ಮಾತ್ರ ಅವಕಾಶ ನೀಡಿದೆ.

      Women In Visakhapatnam Today Held A Protest Against The Liquor Shops

      ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ ಮಹಿಳೆಯರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಾಸ್ಕ್‌ ಹಾಕಿಕೊಂಡು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆದರೆ ಈ ಪ್ರತಿಭಟನೆಯಲ್ಲಿ ಸಾಮಾಜಿಕ ಅಂತರವನ್ನು ಸರಿಯಾಗಿ ಪಾಲಿಸಿಲ್ಲ ಎನ್ನುವುದು ಫೋಟೋಗಳಲ್ಲಿಯೇ ತಿಳಿಯುತ್ತಿದೆ.

      ಮತ್ತೊಂದು ಕಡೆ, ಆಂಧ್ರ ಸರ್ಕಾರ ಮೊದಲು 25 ರಷ್ಟು ಮದ್ಯದ ಬೆಲೆಯನ್ನು ಏರಿಕೆ ಮಾಡಿ, ಸೋಮವಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಆದಾದ ಬಳಿಕ ಇಂದು ಮತ್ತೆ 50 ರಷ್ಟು ಹಣವನ್ನು ಹೆಚ್ಚಿಗೆ ಮಾಡಿದೆ.

      ಈ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಮದ್ಯ ಮಾರಾಟದಿಂದ ವಾರ್ಷಿಕ ಆದಾಯ 9,000 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+