ಪ್ಲಾಸ್ಟಿಕ್‌ನಲ್ಲಿ ಸುತ್ತಿದ್ದ ರೀತಿಯಲ್ಲಿ ಮಹಿಳೆ ಶವ ಕೆರೆಯಲ್ಲಿ ಪತ್ತೆ
ಹೈದರಾಬಾದ್, ಜೂನ್ 22: ಪ್ಲಾಸ್ಟಿಕ್‌ನಲ್ಲಿ ಸುತ್ತಿದ್ದ ಮಹಿಳೆಯ ಶವವೊಂದು ಹೈದರಾಬಾದಿನ ಕೆರೆಯಲ್ಲಿ ತೇಲುತ್ತಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ಶವವನ್ನು ಬಟ್ಟೆಯಿಂದ ಸುತ್ತಿದ್ದರು, ಶವವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಕೊಲೆಯ ಕುರಿತು ಎಫ್‌ಐಆರ್ ದಾಖಲಾಗಿದೆ. ಮಹಿಳೆಯು 30 ರಿಂದ 40 ವರ್ಷದವರಾಗಿದ್ದಾರೆ. ಸುನ್ನಮ್ ಚೆರುವು ಕೆರೆಯಲ್ಲಿ ಅವರ ಮೃತದೇಹ ದೊರೆತಿದೆ. ಅವರ ಬಲಗೈನಲ್ಲಿ ಎಸ್ ಅಕ್ಷರದ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಬಾವಿಯಲ್ಲಿ 9 ಶವ; ತೆಲಂಗಾಣ ಬೆಚ್ಚಿಬಿದ್ದ ಪ್ರಕರಣದ ಚಾರ್ಜ್ ಶೀಟ್ ವಿವರ
ಆ ಟ್ಯಾಟೂ ಆಧಾರವಾಗಿರಿಸಿಕೊಂಡು ಮಹಿಳೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ. 'ಮಹಿಳೆಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಅವರ ಕಾಲುಗಳನ್ನು ಬಟ್ಟೆಯಲ್ಲಿ ಕಟ್ಟಲಾಗಿತ್ತು ಅವರ ಶವವನ್ನು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ನೀರಿಗೆಸೆಯಲಾಗಿತ್ತು.
ಇಂದು ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ, ಮಹಿಳೆಯ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.