ಮಾನಸಿಕ ಆಸ್ಪತ್ರೆಯಲ್ಲಿ ಭಯಾನಕ ಕೃತ್ಯ: ಮಹಿಳೆಯ ಕಾಲು ಕಟ್

ಹೈದರಾಬಾದ್, ಜೂನ್ 15: ಭಯಾನಕ ಘಟನೆಯೊಂದರಲ್ಲಿ ಎರ್ರಗಡ್ಡದಲ್ಲಿರುವ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ ಗುರುವಾರ ಕಾಲುಗಳನ್ನು ಕತ್ತರಿಸಿರುವ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.

ಕೊಲೆಗಡುಕರು 45 ವರ್ಷದ ಮಹಿಳೆಯ ಎರಡೂ ಕಾಲುಗಳ ಪಾದಗಳ ಮೇಲ್ಭಾಗವನ್ನು ಕತ್ತರಿಸಿದ್ದು, ಆಕೆಯ ತುಂಡರಿಸಿದ ದೇಹದ ಭಾಗಗಳು ಆಸ್ಪತ್ರೆಯ ಕಟ್ಟಡದ ಮೇಲೆ ದೊರೆತಿವೆ.

ಈ ಭೀಭತ್ಸ ಕೊಲೆಯ ಘಟನೆ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಪುರುಷರ ತೆರೆದ ವಾರ್ಡ್‌ಗೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಹಳದಿ ಸೀರೆ ಮತ್ತು ಕಂದು ಬಣ್ಣದ ರಚಿಕೆ ತೊಟ್ಟ ಮಹಿಳೆಯ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

woman body found with chopped legs in mental hospital

ಪಾದಕ್ಕೂ ಮೇಲ್ತುದಿಯವರೆಗೆ ಆಕೆಯ ಕಾಲುಗಳನ್ನು ಕತ್ತರಿಸಲಾಗಿದ್ದು, ಎರಡೂ ಕಾಲುಗಳು ನಾಪತ್ತೆಯಾಗಿವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಭದ್ರತೆ ಕಲ್ಪಿಸಿ ಆಸ್ಪತ್ರೆ ಆವರಣದಲ್ಲಿ ತೀವ್ರ ಪರಿಶೀಲನೆ ನಡೆಸಲಾಗಿದೆ ಎಂದು ಪೂರ್ವ ವಲಯ ಡಿಸಿಪಿ ಎಆರ್ ಶ್ರೀನಿವಾಸ್ ತಿಳಿಸಿದ್ದಾರೆ.

ಆಸ್ಪತ್ರೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಸುಮಾರು 100 ಕುಟುಂಬಗಳು ವಾಸಿಸುತ್ತಿವೆ. ಮೃತದೇಹ ಪತ್ತೆಯಾದ ಸ್ಫಳಕ್ಕೆ ಸಮೀಪದ ಆಸ್ಪತ್ರೆಯ ಕಾಂಪೌಂಡ್ ಭಾಗವೊಂದು ಹಾನಿಗೊಳಗಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆಸ್ಪತ್ರೆಗೆ ಸೇರಿದ 56 ಎಕರೆಯಲ್ಲಿ 10 ಎಕರೆಯಷ್ಟು ಜಾಗ ಒತ್ತುವರಿಯಾಗಿದೆ. ಅಲ್ಲಿ ವಾಸಿಸುವ ಜನರು ಎರ್ರಗಡ್ಡ ಮುಖ್ಯರಸ್ತೆಗೆ ತಲುಪಲು ಆಸ್ಪತ್ರೆಯ ಆವರಣದ ಮೂಲಕವೇ ಹೋಗುತ್ತಾರೆ. ಈ ಜನರು ಕೆಲವೊಮ್ಮೆ ಆಸ್ಪತ್ರೆಯ ರೋಗಿಗಳ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಆಸ್ಪತ್ರೆಯ ಸುತ್ತ 16 ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಒಂದೂ ಕ್ಯಾಮೆರದಾದಲ್ಲಿ ಕೊಲೆಯ ಘಟನೆಯ ದೃಶ್ಯ ಸೆರೆಯಾಗಿಲ್ಲ.

ಹಂತಕರು ಮಹಿಳೆಯ ಸೀರೆಯಿಂದಲೇ ಆಕೆಯ ಉಸಿರುಗಟ್ಟಿಸಿ ಕೊಂದು, ಬಳಿಕ ಹರಿತವಾದ ಆಯುಧದಿಂದ ಆಕೆಯ ಪಾದಗಳನ್ನು ಕತ್ತರಿಸಿ ಹಾಕಿದ್ದಾರೆ ಎಂದು ಪೊಲೀಸರು ಶಂಕಿಸಲಾಗಿದೆ.

ಸ್ಥಳೀಯರು ಯಾರಿಗೂ ಮಹಿಳೆಯ ಗುರುತು ತಿಳಿದಿಲ್ಲ. ಹತ್ಯೆಯು ಬುಧವಾರ ರಾತ್ರಿ ನಡೆದಿರಬಹುದು. ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತೇ ಎಂಬುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ವಾನದಳ ಪಡೆಗಳನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಆಸ್ಪತ್ರೆಯ ಒತ್ತುವರಿ ಮಾಡಲಾದ ಸ್ಥಳದ ಮೂಲಕ ಮುಖ್ಯರಸ್ತೆಗೆ ತಲುಪುವವರೆಗೆ ಮಾತ್ರ ವಾಸನೆ ಕಂಡುಹಿಡಿಯುವಲ್ಲಿ ಅವು ಸಫಲವಾಗಿವೆ.

ಕೊಲೆಯಾದ ಮಹಿಳೆ ಆಸ್ಪತ್ರೆಯ ರೋಗಿಯಲ್ಲ. ರೋಗಿಗಳು ಇರುವ ಕೊಠಡಿಗಳಿಗೆ ಸುರಕ್ಷತೆ ಒದಗಿಸಲು ನಮ್ಮ ಬಳಿ ಸಮರ್ಪಕ ಭದ್ರತಯಾ ವ್ಯವಸ್ಥೆ ಇದೆ ಎಂದು ಆಸ್ಪತ್ರೆ ಉಸ್ತುವಾರಿ ಡಾ. ಎಂ. ಉಮಾಶಂಕರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+