ಹೈದರಾಬಾದ್‌ನಲ್ಲಿ ಹೃದಯ ವಿದ್ರಾವಕ ಘಟನೆ; ಮೂರು ಮಕ್ಕಳ ಸಾವು

ಹೈದರಾಬಾದ್, ಫೆಬ್ರವರಿ 28: ಊಟ ಮಾಡಿ ಮಲಗಿದ್ದ ನಾಲ್ಕು ಪುಟ್ಟ ಕಂದಮ್ಮಳ ಮೇಲೆ ಗೋಡೆ ಮುಗುಚಿ ಮೂವರು ಮಕ್ಕಳು ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ಹೈದರಾಬಾದ್‌ನಲ್ಲಿ ನಡೆದಿದೆ.

ಹೈದರಬಾದ್‌ನ ಹಬೀಬನಗರದಲ್ಲಿ ಈ ಘಟನೆ ನಡೆದಿದ್ದು, ತೀವ್ರ ಗಾಯಗೊಂಡಿರುವ ಒಬ್ಬ ಬಾಲಕಿಯನ್ನು ಓಸಮಾನಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಲ್ಲಿ ಆರು ವರ್ಷದ ರೋಶಿನಿ, ಮೂರು ವರ್ಷದ ಶಾಕಿರಾ ಮತ್ತು ಎರಡು ತಿಂಗಳಿನ ಪಾವನಿ ಎಂಬ ಮಗು ಮೃತಪಟ್ಟಿದೆ. ಗೀತಾ ಎಂಬ ನಾಲ್ಕು ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಮೃತಪಟ್ಟ ಮಕ್ಕಳ ಪೋಷಕರು ಊಟ ಮಾಡಿ ಮಕ್ಕಳನ್ನು ಮನೆಯ ಒಳಗೆ ನಿದ್ರಿಸಲು ಬಿಟ್ಟು, ಮನೆಯ ಹೊರಗೆ ನಿದ್ರಿಸುವಾಗ ಮನೆಯ ಒಳಗಿನ ಶಿಥೀಲಗೊಂಡಿದ್ದ ಗೋಡೆಯೊಂದು ಮಕ್ಕಳ ಮೇಲ ಉರುಳಿದೆ. ಇದರಿಂದ ಮೂವರು ಮಕ್ಕಲು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Wall Collapses In Hyderabad Three Childrens Killed

ಸ್ಥಳಕ್ಕೆ ಭೇಟಿ ನೀಡಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳು ಗೋಡೆಯನ್ನು ತೆರವುಗೊಳಿಸಿದ್ದಾರೆ. ಈ ಕುರಿತು ಹಬೀಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ನವೆಂಬರ್‌ನಲ್ಲಿ ಅಂಬರಪೇಟೆಯಲ್ಲಿ ಕೂಡ ಇಂತಹದೇ ಘಟನೆ ನಡೆದಿತ್ತು. ಮದುವೆ ಮನೆಯಲ್ಲಿ ಗೋಡೆ ಉರುಳಿ ಬಿದ್ದು ಎಂಟು ಜನರು ಮೃತಪಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+