ಅತ್ಯಾಚಾರಿಗಳ ಎನ್‌ ಕೌಂಟರ್; ಆರೋಪಿ ಪತ್ನಿಯ ಅಳಲು ಕೇಳಿ

Recommended Video

      Disha gets justice,Twitter applauds Hyderabad police for encountering four accused.

      ಹೈದರಾಬಾದ್, ಡಿಸೆಂಬರ್ 6 : ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದ ಆರೋಪಿಗಳು ಪೊಲೀಸ್ ಎನ್‌ ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. ನಾಲ್ವರ ಪೈಕಿ ಒಬ್ಬ ಆರೋಪಿಯ ಪತ್ನಿ ಕೇಳುವ ಪ್ರಶ್ನೆಗೆ ಉತ್ತರ ಹೇಳುವವರು ಯಾರು?.

      ಶುಕ್ರವಾರ ಮಂಜಾನೆ ಚಟಾನ್ ಪಲ್ಲಿ ಬ್ರಿಡ್ಜ್ ಬಳಿ ನಡೆದ ಎನ್‌ ಕೌಂಟರ್‌ನಲ್ಲಿ ಕೊಲೆ, ಅತ್ಯಾಚಾರ ಪ್ರಕರಣದ ಆರೋಪಿ ಚಿಂತಕುಂಟಾ ಚನ್ನಕೇವಲು (20) ಮೃತಪಟ್ಟಿದ್ದಾರೆ. ಚನ್ನಕೇವಲು ಲಾರಿಗಳಿಗೆ ಕಬ್ಬಿಣ ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು.

      ನವೆಂಬರ್ 27ರಂದು ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಜೊತೆ ಸೇರಿ ಪಶುವೈದ್ಯೆ ಮೇಲೆ ಚಿಂತಕುಂಟಾ ಚನ್ನಕೇವಲು ಅತ್ಯಾಚಾರ ನಡೆಸಿದ್ದ. ಬಳಿಕ ಆಕೆಯನ್ನು ಸುಟ್ಟುಹಾಕಲು ಸಹಕಾರ ನೀಡಿದ್ದ. ನವೆಂಬರ್ 28ರಂದು ಪೊಲೀಸರು ವಿಚಾರಣೆಗಾಗಿ ಆತನನ್ನು ಕರೆದುಕೊಂಡು ಹೋಗಿದ್ದರು.

      Veterinary Doctor Rape Accused Encounter Chenna Kesavulu Wife Statement

      ಶುಕ್ರವಾರ ಎನ್‌ ಕೌಂಟರ್‌ನಲ್ಲಿ ಚಿಂತಕುಂಟಾ ಚನ್ನಕೇವಲು ಮೃತಪಟ್ಟ ಬಳಿಕ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. "ವಿವಾಹವಾಗಿ ಒಂದು ವರ್ಷವೂ ಕಳೆದಿಲ್ಲ. ವಿಚಾರಣೆಗೆಂದು ಕರೆದುಕೊಂಡು ಹೋದ ಪೊಲೀಸರು ಅವರನ್ನು ಕೊಂದು ಹಾಕಿದ್ದಾರೆ. ನಾನು ಮುಂದೆ ಹೇಗೆ ಬದುಕಲಿ?" ಎಂದು ಆಕೆ ಪ್ರಶ್ನೆ ಮಾಡಿದ್ದಾರೆ.

      ಚಿಂತಕುಂಟಾ ಚನ್ನಕೇವಲು ಒಂದು ಕಿಡ್ನಿ ವಿಫಲವಾಗಿತ್ತು. ಒಂದು ವರ್ಷದ ಹಿಂದೆ ಪ್ರೀತಿಸುತ್ತಿದ್ದ ಹುಡುಗಿಯನ್ನೇ ವಿವಾಹವಾಗಿದ್ದ. ಲಾರಿಗೆ ಕಬ್ಬಿಣ ಲೋಡ್ ಮಾಡುವ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ.

      ಮಗನಿಗೆ ಶಿಕ್ಷೆ ಕೊಡಿ : ಪಶುವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪಿ ಚಿಂತಕುಂಟಾ ಚನ್ನಕೇವಲು ಬಂಧಿಸಿದಾಗ ಆತನ ತಾಯಿ, "ನನ್ನ ಮಗನನ್ನು ಗಲ್ಲಿಗೆ ಹಾಕಿ ಇಲ್ಲವೇ ಜೀವಂತ ಸುಡಿ" ಎಂದು ಹೇಳಿಕೆ ನೀಡಿದ್ದರು.

      "ನನಗೂ ಒಬ್ಬಳು ಮಗಳಿದ್ದಾಳೆ. ನನ್ನ ಮಗ ತಪ್ಪು ದಾರಿಯಲ್ಲಿ ಹೋಗಿ ಯುವತಿ ಜೀವನವನ್ನೇ ಹಾಳು ಮಾಡಿದ್ದಾನೆ. ಆತನಿಗೆ ಸರಿಯಾದ ಶಿಕ್ಷೆಯಾಗಬೇಕು" ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದರು. ಇಂದು ಎನ್‌ ಕೌಂಟರ್‌ನಲ್ಲಿ ಆತ ಮೃತಪಟ್ಟಿದ್ದಾನೆ.

      "ನನ್ನ ಮಗ ಪ್ರೀತಿಸಿದ ಹುಡುಗಿಯನ್ನು ವಿವಾಹವಾದಾಗಲೂ ನಾವು ವಿರೋಧ ಮಾಡಿರಲಿಲ್ಲ. ಆತ ತಪ್ಪು ಮಾಡಿದ್ದಾನೆ. ಯುವತಿಗೆ ಆದ ನೋವಿನ ಅರಿವು ಅವಿಗೂ ಆಗಬೇಕು. ಆತನನ್ನು ನೇಣಿಗೆ ಹಾಕಿ ಅಥವ ಜೀವಂತ ಸುಡಿ" ಎಂದು ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+