2 ಸಾವಿರ ರೂ. ನಕಲಿ ನೋಟು ಚಲಾವಣೆ: ಇಬ್ಬರ ಬಂಧನ

Posted By:
Subscribe to Oneindia Kannada

ಹೈದರಾಬಾದ್, ನವೆಂಬರ್, 14: 2 ಸಾವಿರ ರೂ. ಮುಖ ಬೆಲೆಯ ಕಲರ್ ಝೆರಾಕ್ಸ್ ಕಾಪಿಗಳನ್ನು ಚಲಾವಣೆ ಮಾಡುತ್ತಿದ್ದ ಇಬ್ಬರು ಕಿಡಿಗೇಡಿ ಯುವಕರನ್ನು ತೆಲಂಗಾಣದ ಮೆಹಬುಬಬಾದ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

"ಮೆಹಬುಬಾಬಾದ್ ಜಿಲ್ಲೆಯ ಕುರವಿ ಮಂಡಲದ ಚಂದ್ಯಾತಾಂಡಾಗೆ ಸೇರಿದ ಪ್ರದೀಪ್ ಎಂಬ ಯುವಕ 500ರೂ. ಗೆ ಪೆಟ್ರೋಲ್ ಹಾಕಿಸಿಕೊಂಡು 2 ಸಾವಿರು ರೂ. ನಕಲಿ ನೋಟನ್ನು ವಿನಿಮಯ ಮಾಡಿಕೊಳ್ಳಲು ಮುಂದಾಗಿರುವ ವೇಳೆ ಬಂಕ್ ಸಿಬ್ಬಂದಿ ನಕಲಿ ನೋಟನನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ಪ್ರದೀಪ್ ನನ್ನು ವಶಕ್ಕೆಪಡೆದಿದ್ದಾರೆ. ನಕಲಿ ನೋಟು ವಿನಿಮಯ ಮಾಡಲು ಬಂದ ಯುವಕನಿಗೆ ನೋಟು ಬದಲಾಯಿಸುವಂತೆ ಸೂಚಿಸಿದ್ದ ಮೊದ್ದುಲಗೂಡೆಂ ಶಿವಾರು ತಾಂಡಾಗೆ ಸೇರಿದ ಅನಿಲ್ ಎಂಬ ಯುವಕನನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.

Two booked for circulating photocopy of Rs 2,000 note

ಈ ಕುರಿತು ವಿವರಣೆ ನೀಡಿರುವ ಮೆಹಬುಬಾಬಾದ್ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಕೃಷ್ಣರೆಡ್ಡಿ, ಬಂಧಿತ ಯುವಕರು ಕುರವಿಯಲ್ಲಿ ಫೋಟೊಕಾಪಿ ಸೆಂಟರ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು, ಫೋಟೊಕಾಪಿ ಯಂತ್ರದ ಮೂಲಕ 2 ಸಾವಿರ ರೂ. ಮುಖಬೆಲೆಯ 4 ನೋಟುಗಳನ್ನು ಕಲರ್ ಝೆರಾಕ್ಸ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ 2 ಸಾವಿರ ರೂ. ಮುಖ ಬೆಲೆಯ ಹೊಸ ನೋಟುಗಳನ್ನು ನಕಲಿ ಮಾಡಿರುವುದಾಗಿ ಆರೋಪಿಗಳು ಪ್ರಾಥಮಿಕ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಸೆಕ್ಷನ್ 420 ಪ್ರಕಾರ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ಪ್ರದೀಪ್ ಮತ್ತು ಅನಿಲ್ ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಫೋಟೊಕಾಪಿ ಸೆಂಟರ್ ಅನ್ನು ವಶಕ್ಕೆ ಪಡೆದು ಫೋಟೊಕಾಪಿ ಸೆಂಟರ್ ನಡೆಸುತ್ತಿರುವ ಮಾಲೀಕನ ವಿರುದ್ಧವೂ ಸಹ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತೀಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two youths were booked on charges of circulating photocopy of the new Rs 2,000 note in Mahabubabad district of Telangana, police said today.
Please Wait while comments are loading...