ತೆಲುಗು ನಟಿಯ ಆತ್ಮಹತ್ಯೆ, ಪ್ರಿಯಕರನ ಕಿರುಕುಳವೇ ಕಾರಣ?

ಹೈದರಾಬಾದ್, ಫೆಬ್ರವರಿ 07: ಹೈದರಾಬಾದಿನಲ್ಲಿರುವ ತಮ್ಮ ಅಪಾರ್ಟ್ಮೆಂಟಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 21 ವರ್ಷ ವಯಸ್ಸಿನ ತೆಲುಗು ನಟಿ ನಾಗ ಝಾನ್ಸಿ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ತಮ್ಮ ಪ್ರಿಯಕರನಿಂದ ನಿರಂತರವಾಗಿ ಕಿರುಕುಳ ಎದುರಿಸುತ್ತಿದ್ದ ಅವರು, ಇತ್ತೀಚೆಗೆ ಸದಾ ಖಿನ್ನರಾಗಿರುತ್ತಿದ್ದರು. ಪ್ರಿಯಕರ ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಅಭದ್ರತಾ ಭಾವದಿಂದ ಬಳಲುತ್ತಿದ್ದ ನಾಗ ಝಾನ್ಸಿ ಮಂಗಳವಾರ ತಮ್ಮ ಫ್ಲ್ಯಾಟ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಾ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪವಿತ್ರ ಬಂಧನ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಝಾನ್ಸಿ, ಕಳೆದ ಆರು ತಿಂಗಳಿನಿಂದ ವ್ಯಕ್ತಿಯೊಬ್ಬರೊಂದಿಗೆ ಸಂಪರ್ಕದಲ್ಲಿದ್ದರು. ತಾಯಿ ಮತ್ತು ಸಹೋದರನ ಜೊತೆ ಫ್ಲ್ಯಾಟ್ ನಲ್ಲಿ ವಾಸವಾಗಿದ್ದ ಅವರು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Telugu actors suicide case: police suspect lover

ಝಾನ್ಸಿ ಅವರ ತಾಯಿ ಅನ್ನಪೂರ್ಣ ಅವರು ಹೇಳುವ ಪ್ರಕಾರ, ಝಾನ್ಸಿ ಸೂರ್ಯ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಆದರೆ ಸೂರ್ಯ ಝಾನ್ಸಿ ಅವರು ಯಾರೊಂದಿಗೂ ಮಾತನಾಡಬಾರದು, ಸೀರಿಯಲ್ ನಲ್ಲಿ ಅಭಿನಯಿಸಬಾರದು ಎಂಬೆಲ್ಲ ನಿಯಮಗಳನ್ನು ಹೇರಿದ್ದ. ಹೀಗೆ ಕಟ್ಟುಪಾಡುಗಳು ದಿನೇ ದಿನೇ ಹೆಚ್ಚುತ್ತ, ಕಿರುಕುಳ ತಾಳಲಾರದೆ ಝಾನ್ಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+