ತೆಲಂಗಾಣ ಅತ್ಯಾಚಾರ ಸಂತ್ರಸ್ತೆಯ ಹೆಸರು ಬದಲಿಸಿದ ಪೊಲೀಸರು

ಹೈದರಾಬಾದ್, ಡಿಸೆಂಬರ್ 02: ಅತ್ಯಾಚಾರ ಸಂತ್ರಸ್ತೆ ತೆಲಂಗಾಣದ ಪಶುವೈದ್ಯೆಯ ಹೆಸರು ಮತ್ತು ಚಿತ್ರವನ್ನು ಮಾದ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಳಿಸಿರುವ ಬಗ್ಗೆ ಕಾನೂನು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅತ್ಯಾಚಾರ ಅಥವಾ ಲೈಂಗಿಕ ಶೋಷಣೆಗೆ ಒಳಪಟ್ಟ ಮಹಿಳೆಯ ಚಿತ್ರ, ಹೆಸರು ಹಾಗೂ ಗುರುತು ಪತ್ತೆ ಆಗುವ ಯಾವೊಂದು ಮಾಹಿತಿಯನ್ನೂ ಸಹ ಮಾಧ್ಯಮಗಳು, ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು ಬಹಿರಂಗ ಪಡಿಸುವಂತಿಲ್ಲ. ಆದರೆ ತೆಲಂಗಾಣ ಪಶುವೈದ್ಯೆ ಹತ್ಯೆ ಪ್ರಕರಣದಲ್ಲಿ ವೈದ್ಯೆಯ ಚಿತ್ರಗಳು, ಹೆಸರು ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಆದರೆ ಎಲ್ಲ ಮುಗಿದ ಬಳಿಕ ಎಚ್ಚೆತ್ತುಕೊಂಡಿರುವ ತೆಲಂಗಾಣ ಪೊಲೀಸರು, ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಬದಲಾಯಿಸಿದ್ದಾರೆ. ಸಂತ್ರಸ್ತೆಯ ಹೆಸರು ಬದಲಾಯಿಸಿ ಬಳಸುವ ಅವಕಾಶ ಕಾನೂನಿನಲ್ಲಿ ಇರುವ ಕಾರಣ ಹೀಗೆ ಹೆಸರು ಬದಲಾಯಿಸಲಾಗಿದೆ.

Telangana Veterinary Doctors Rape: Police Changes Victims Name

ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಪಶುವೈದ್ಯೆಯ ಹೆಸರನ್ನು 'ದಿಶಾ' ಎಂದಿಟ್ಟಿದ್ದಾರೆ ತೆಲಂಗಾಣ ಪೊಲೀಸರು. ದೇಶ ವಿದೇಶಗಳಲ್ಲಿ ಚರ್ಚೆ ಹುಟ್ಟುಹಾಕಿದ್ದ ದೆಹಲಿ ಅತ್ಯಾಚಾರ ಪ್ರಕರಣ ಸಂತ್ರಸ್ತೆಯ ಹೆಸರನ್ನು ಬದಲಾಯಿಸಿ 'ನಿರ್ಭಯ' ಎಂದು ಇಡಲಾಗಿತ್ತು. ಆ ನಂತರ ಇದೇ ಹೆಸರಿನ ಮಹಿಳಾ ರಕ್ಷಣೆ ಯೋಜನೆಗಳು, ಆಪ್‌ಗಳು ಬಂದವು.

ಹಾಗೆಯೇ ಅತ್ಯಾಚಾರಿಗಳ ಕಾಮತೃಷೆಗೆ ಬಲಿಯಾದ ತೆಲಂಗಾಣ ಮಹಿಳೆಯ ಹೆಸರನ್ನು 'ದಿಶಾ' ಎಂದು ಬದಲಾಯಿಸಲಾಗಿದೆ. ಪೊಲೀಸ್ ಆಯುಕ್ತ ವಿಸಿ ಸಜ್ಜನರ್ ಅವರು ಸಂತ್ರಸ್ತೆಯ ಕುಟುಂಬದವರೊಂದಿಗೆ ಮಾತನಾಡಿ, ಸಂತ್ರಸ್ತೆಯ ಹೆಸರನ್ನು ದಿಶಾ ಎಂದು ಬದಲಾಯಿಸಲು ಅನುಮತಿ ಪಡೆದಿದ್ದಾರೆ.

ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದಿಶಾ ಎಂದೇ ಹೆಸರು ಪ್ರಕಟಿಸಬೇಕೆಂದು ಸಹ ಆಯುಕ್ತರು ಎಚ್ಚರಿಸಿದ್ದು, ಸಂತ್ರಸ್ತೆಯ ಮೂಲ ಹೆಸರು ಮತ್ತು ಚಿತ್ರ. ಸಂತ್ರಸ್ತೆಯ ಕುಟುಂಬದವರ ಚಿತ್ರಗಳನ್ನು ಪ್ರಕಟಿಸದಂತೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+