ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೆಸ್ಟ್‌ ತಹಸೀಲ್ದಾರ್' ಪ್ರಶಸ್ತಿ ಪಡೆದ ಮಹಿಳಾ ಅಧಿಕಾರಿ ಮನೆಯಲ್ಲಿ ಲಕ್ಷ ಲಕ್ಷ ಹಣ

|
Google Oneindia Kannada News

ನವದೆಹಲಿ, ಜುಲೈ 12: ಎಸಿಬಿ ಬೆಲೆಗೆ ಬಿದ್ದಿರುವ ತೆಲಂಗಾಣ ಮಹಿಳಾ ಅಧಿಕಾರಿ ಲಾವಣ್ಯ ಎರಡು ವರ್ಷಗಳ ಹಿಂದಷ್ಟೇ ಬೆಸ್ಟ್‌ ತಹಸೀಲ್ದಾರ್ ಪ್ರಶಸ್ತಿಗೆ ಪಾತ್ರರಾಗಿದ್ದರು ಎನ್ನುವುದು ತಿಳಿದುಬಂದಿದೆ.

ಭ್ರಷ್ಟಾಚಾರ ನಿಗ್ರಹ ದಳ ಲಾವಣ್ಯ ಅವರ ಮನೆ ಮೇಲೆದಾಳಿ ನಡೆಸಿ 93.2 ಲಕ್ಷ ರೂ ನಗದು ಹಾಗೂ 400 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಲಾವಣ್ಯ ರಂಗಾರೆಡ್ಡಿ ಜಿಲ್ಲೆಯಲ್ಲಿ ಕಂದಾಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

ಲಾವಣ್ಯ ಮತ್ತು ಅವರ ಕಿರಿಯ ಅಧಿಕಾರಿ ರೈತ ಬಾಸ್ಕರ್ ಜಾಮೀನಿನ ದಾಖಲೆ ಪತ್ರಗಳನ್ನು ತಿದ್ದುಪಡಿ ಮಾಡಿಕೊಡಲು ಎಂಟು ಲಕ್ಷ ರೂ ಬೇಡಿಕೆ ಇಟ್ಟಿದ್ದರು.

ರೈತರ ಪ್ರಕಾರ ದಾಖಲೆ ಸರಿಪಡಿಸಲು ಒಟ್ಟು 8 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದರು. ಇದರಲ್ಲಿ ತಹಸೀಲ್ದಾರ್​ ಲಾವಣ್ಯರಿಗೆ 5 ಲಕ್ಷ ಹಾಗೂ ಅಂತಯ್ಯಗೆ 3 ಲಕ್ಷ ರೂ ಎಂದು ಆರೋಪಿಸಿದ್ದಾರೆ. ರೈತನಿಂದ ಹಣ ಪಡೆದ ಬಳಿಕ ಅಂತಯ್ಯ ತಹಸೀಲ್ದಾರ್​ಗೆ ಮಾಹಿತಿ ನೀಡಿದ್ದಾಗಿ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದು, ಬಳಿಕ ತಹಸೀಲ್ದಾರ್​ರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ, ತಾನೂ ಲಂಚ ಪಡೆದಿರುವ ಆರೋಪವನ್ನು ತಹಸೀಲ್ದಾರ್​ ತಳ್ಳಿಹಾಕಿದ್ದಾರೆ.

Telangana Officer Who Won Award acb rides

ಇದೇ ವೇಳೆಯಲ್ಲಿ ರೈತನೊಬ್ಬ ತಹಸೀಲ್ದಾರ್​ ಲಾವಣ್ಯ ಕಾಲಿಗೆ ಬಿದ್ದು ಮನವಿ ಮಾಡುತ್ತಿರುವ ವಿಡಿಯೋವೊಂದು ವೈರಲ್​ ಆಗಿರುವುದು ಪ್ರಕರಣಕ್ಕೆ ಮತ್ತಷ್ಟು ಪುರಾವೆ ಸಿಕ್ಕಿದಂತಿದೆ.

ವಿಡಿಯೋದಲ್ಲಿರುವ ರೈತನನ್ನು ಭಾಸ್ಕರ್​ ಎಂದು ಗುರುತಿಸಲಾಗಿದ್ದು, ಪಾಸ್​ಬುಕ್​ ಪಡೆದುಕೊಳ್ಳಲು ಗ್ರಾಮ ಕಂದಾಯ ಅಧಿಕಾರಿ ಅಂತಯ್ಯಗೆ 30 ಸಾವಿರ ರೂ. ಲಂಚ ನೀಡಿರುವುದಾಗಿ ತಿಳಿಸಿದ್ದಾನೆ.

ಪಾಸ್​ಬುಕ್​ನಲ್ಲಿನ ತಪ್ಪು ದಾಖಲೆಯನ್ನು ಸರಿಪಡಿಸಲು 1 ಲಕ್ಷ ರೂ. ಕೇಳಿದ್ದರು ಎಂದು ಎಸಿಬಿ ಮುಂದೆ ಬಾಯ್ಬಿಟ್ಟಿದ್ದಾನೆ.

ಭಾಸ್ಕರ್ 30 ಸಾವಿರ ಹಣವನ್ನು ಪಾವತಿಸಿದ್ದರು. ಉಳಿದ ಹಣವನ್ನು ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ಭಾಸ್ಕರ್ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿ ಸಾಕ್ಷಿ ಸಮೇತ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಲಾವಣ್ಯ ಅವರ ಮನೆಯ ಮೇಲೆ ಗುರುವಾರ ದಾಳಿ ನಡೆಸಿ ಬಂಧಿಸಿದ್ದಾರೆ. ಸಕಾಋದಿಂದ ಉತ್ತಮ ತಹಸೀಲ್ದಾರ್ ಎಂಬ ಬಿರುದು ಪಡೆದಿದ್ದರು.

English summary
Telangana Officer Who Won Award acb rides,93.5 lakh in cash and 400 grams gold were found by Telangana's anti-corruption bureau from the home in Hyderabad of Ms Lavanya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X