Get Updates
Get notified of breaking news, exclusive insights, and must-see stories!

48000 ನೌಕರರನ್ನು ಕೆಲಸದಿಂದ ವಜಾಗೊಳಿಸಿದ ತೆಲಂಗಾಣ ಸಿಎಂ

ಹೈದರಾಬಾದ್, ಅಕ್ಟೋಬರ್ 07: ತೆಲಂಗಾಣ ಸಿಎಂ ಕೆ.ಚಂದ್ರಶೇಕರ್ ರಾವ್ ಅವರು ರಾಜ್ಯ ರಸ್ತೆ ಸಾರಿಗೆಯ ಬರೋಬ್ಬರಿ 48000 ನೌಕರರನ್ನು ಸೇವೆಯಿಂದಲೇ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ 48000 ನೌಕರರನ್ನು ಒಂದೇ ಬಾರಿಗೆ ಕೆಸಿಆರ್ ಸರ್ಕಾರ ವಜಾಗೊಳಿಸಿದ್ದು, ಸಿಎಂ ಅವರ ಈ ಹಿಟ್ಲರ್ ನಡೆಯ ವಿರುದ್ಧ ನೌಕರರು ಬೀದಿಗಿಳಿದಿದ್ದಾರೆ.

ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಶುಕ್ರವಾರದಿಂದಲೂ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಭಾನುವಾರ ಇವರಿಗೆಲ್ಲಾ ಭಾರಿ ಶಾಕ್ ನೀಡಿದ ಸರ್ಕಾರ ಬರೋಬ್ಬರಿ 48000 ಮಂದಿ ನೌಕರರನ್ನು ಕೆಲಸದಿಂದಲೇ ವಜಾಗೊಳಿಸಿದೆ.

ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ನಿನ್ನೆ ಸಂಜೆ ಘೋಷಣೆ ಮಾಡಿರುವಂತೆ 1200 ಮಂದಿ ಮಾತ್ರವೇ ರಸ್ತೆ ಸಾರಿಗೆ ಇಲಾಖೆಯಲ್ಲಿ ನೌಕರರಿದ್ದು, ಸಂಜೆ 6 ಗಂಟೆ ಒಳಗೆ ಯಾರು ಕೆಲಸಕ್ಕೆ ಹಾಜರಾಗುತ್ತಾರೊ ಅವರನ್ನು ಬಿಟ್ಟು ಉಳಿದೆಲ್ಲವರನ್ನೂ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಹೇಳಿದ್ದರು.

49,340 ನೌಕರರು ಪ್ರತಿಭಟನೆಯಲ್ಲಿದ್ದರು

49,340 ನೌಕರರು ಪ್ರತಿಭಟನೆಯಲ್ಲಿದ್ದರು

ತೆಲಂಗಾಣ ರಸ್ತೆ ಸಾರಿಗೆಯ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ 49,340 ಮಂದಿ ನೌಕರರು ಭಾಗವಹಿಸಿದ್ದರು. ಇದರಲ್ಲಿ 48,000 ನೌಕರರನ್ನು ಸೇವೆಯಿಂದ ಏಕಾ-ಏಕಿ ವಜಾ ಮಾಡಲಾಗಿದೆ.

ಸರ್ಕಾರಿ ನೌಕರರ ದರ್ಜೆಗಾಗಿ ಪ್ರತಿಭಟಿಸಿದ್ದ ನೌಕರರು

ಸರ್ಕಾರಿ ನೌಕರರ ದರ್ಜೆಗಾಗಿ ಪ್ರತಿಭಟಿಸಿದ್ದ ನೌಕರರು

ರಸ್ತೆ ಸಾರಿಗೆಯನ್ನು ಸರ್ಕಾರದ ಅಡಿಗೆ ತೆಗೆದುಕೊಂಡು, ರಸ್ತೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದರ ಜೊತೆಗೆ ಏಪ್ರಿಲ್ 2017 ರಿಂದ ಬಾಕಿ ಉಳಿದಿರುವ ಸಂಬಳ ಪರೀಷ್ಕರಣೆಯನ್ನು ಮಾಡುವಂತೆ ಹಾಗೂ ನೌಕರರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲೆಂದು ಹೊಸ ನೇಮಕಾತಿ ಮಾಡುವಂತೆ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು.

ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ನಿರ್ಧಾರ

ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ನಿರ್ಧಾರ

ಪ್ರತಿಭಟನೆ ಕುರಿತು ಉನ್ನತ ಅಧಿಕಾರಿಗಳು ಮತ್ತು ಮಂತ್ರಿಗಳ ಸಭೆ ನಡೆಸಿದ ಸಿಎಂ ಕೆ.ಚಂದ್ರಶೇಖರ ರಾವ್ ಅವರು, ಯಾರು ಶನಿವಾರದ ಒಳಗೆ ಕೆಲಸಕ್ಕೆ ಹಾಜರಾಗುವುದಿಲ್ಲವೊ ಅವರನ್ನು ಸೇವೆಯಿಂದ ವಜಾಮಾಡುವಂತೆ ಸೂಚನೆ ನೀಡಿದರು ಎಂದು ಸಿಎಂ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನಾಕಾರರೊಂದಿಗೆ ಮಾತುಕತೆ ಇಲ್ಲ: ಸಿಎಂ

ಪ್ರತಿಭಟನಾಕಾರರೊಂದಿಗೆ ಮಾತುಕತೆ ಇಲ್ಲ: ಸಿಎಂ

ಸಿಎಂ ಸೂಚನೆಯಂತೆ ಭಾನುವಾರ ಬೆಳಿಗ್ಗೆ ಆದೇಶವನ್ನು ಹೊರಡಿಸಲಾಗಿದ್ದು, ಪ್ರತಿಭಟನಾಕಾರರೊಂದಿಗೆ ಯಾವುದೇ ಮಾತುಕತೆಯನ್ನು ಸರ್ಕಾರ ನಡೆಸುವುದಿಲ್ಲವೆಂದು ಸಹ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶೀಘ್ರದಲ್ಲೇ ಹೊಸ ನೇಮಕಾತಿಗೆ ಆದೇಶ: ಸಿಎಂ

ಶೀಘ್ರದಲ್ಲೇ ಹೊಸ ನೇಮಕಾತಿಗೆ ಆದೇಶ: ಸಿಎಂ

ಶೀಘ್ರದಲ್ಲಿಯೇ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ನೌಕರರನ್ನು ಸೇರಿಸಿಕೊಳ್ಳುವ ನೇಮಕಾತಿ ಪ್ರತಿಕ್ರಿಯೆ ಪ್ರಾರಂಭ ಮಾಡುತ್ತೇವೆ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಆದರೆ ವಜಾಗೊಂಡಿರುವ ನೌಕರರು ಪ್ರತಿಭಟನೆ ಆರಂಭಿಸಿದ್ದು, ಅವರಿಗೆ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+