ತೆಲಂಗಾಣ ಚುನಾವಣೆ: 2 ಲಕ್ಷ ಮತದಾರರ ಸಂಖ್ಯೆ ಇಳಿಮುಖ
ಹೈದರಾಬಾದ್, ನವೆಂಬರ್ 24: ತೆಲಂಗಾಣ ವಿಧಾನಸಭಾ ಚುನಾವಣೆಯನ್ನು ನಡೆಸಲು ಕೇಂದ್ರ ಚುನಾವಣಾ ಆಯೋಗವು ಸರ್ವ ರೀತಿಯಲ್ಲಿ ಸಜ್ಜಾಗಿದೆ. ಈ ಬಾರಿ 2.80 ಕೋಟಿ ಮಂದಿ ಮತದಾನ ಮಾಡಲು ಅರ್ಹರಾಗಿದ್ದಾರೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ, ಮತದಾರರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ ಎಂದು ಚುನಾವಣಾ ಆಯೋಗದಿಂದ ಮಾಹಿತಿ ಸಿಕ್ಕಿದೆ.
2014ರ ಚುನಾವಣೆಗೆ ಹೋಲಿಸಿದರೆ 2 ಲಕ್ಷಕ್ಕೂ ಅಧಿಕ ಮತದಾರರು ಈ ಬಾರಿ ಕಡಿಮೆಯಾಗಿದ್ದಾರೆ.2014ರಲ್ಲಿ 2.82 ಕೋಟಿ ಮತದಾರರಿದ್ದರು.
ಚುನಾವಣೆ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಚುನವಣಾ ಆಯುಕ್ತ ಒ.ಪಿ ರಾವತ್, 2.80 ಕೋಟಿ ಮತದಾರರ ಪೈಕಿ 1.41 ಕೋಟಿ ಪುರುಷರು, 1.39 ಕೋಟಿ ಮಂದಿ ಮಹಿಳೆಯರಿದ್ದಾರೆ. 2,885 ಮಂದಿ ತೃತೀಯ ಲಿಂಗಿಗಳಿದ್ದಾರೆ. 10,038 ಸರ್ವೀಸ್ ಮತದಾರರು ಸೇರಿದ್ದಾರೆ.

ಪೇಯ್ಡ್ ನ್ಯೂಸ್, ಮತ ಸೆಳೆಯಲು ನಡೆದಿರುವ ಆಮಿಷಗಳು ಹೀಗೆ ಯಾವುದೇ ದೂರುಗಳು ಬಂದರೂ ಸ್ವೀಕರಿಸಿ, ಪರಿಶೀಲಿಸಲಾಗುತ್ತಿದೆ. ಪಾರದರ್ಶಕ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಲು ಬೇಕಾದ ವ್ಯವಸ್ಥೆ ಮಾಡಲಾಗಿದೆ ಎಂದರು.
ಆಡಳಿತಾರೂಢ ಟಿಆರ್ ಎಸ್ ಪಕ್ಷದ ಅಭ್ಯರ್ಥಿಗಳ ಚುನಾವಣಾ ಅಕ್ರಮದ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.












Click it and Unblock the Notifications